ಭಾರತದ ಇಸ್ರೋ ಸಂಸ್ಥೆ ಸಿದ್ದಪಡಿಸಿರುವ ಮಾನವ ರೋಬೋಟ್ ಇದೀಗ ಎಲ್ಲೆಡೆ ಭಾರಿ ವೈರಲ್ ಆಗುತ್ತಿದೆ. ನೋಡಿ ಒಮ್ಮೆ

ಭಾರತದ ಇಸ್ರೋ ಸಂಸ್ಥೆ ಸಿದ್ದಪಡಿಸಿರುವ ಮಾನವ ರೋಬೋಟ್ ಇದೀಗ ಎಲ್ಲೆಡೆ ಭಾರಿ ವೈರಲ್ ಆಗುತ್ತಿದೆ. ರಾಜಧಾನಿ ಬೆಂಗಳೂರಿನಲ್ಲಿ ಬುಧವಾರ ಭಾರತೀಯ ಬಾಹ್ಯಾಕಾಶ ಸಂಸ್ಥೆಯು ವ್ಯೋಮಿತ್ರಾ ಎಂಬ ಅರ್ಧ ದೇಹದಾಕಾರದ ಮಹಿಳಾ ರೂಪದ ರೋಬೋಟ್ ವೊಂದನ್ನ ಸಿದ್ಥಪಡಿಸಿದೆ. ಈ ರೋಬೋಟ್ ಮನುಷ್ಯರನ್ನ ಗುರುತಿಸಿ ಮಾತಾಡಿಸುತ್ತಾಳೆ. ಜೊತೆಗೆ ಈ ರೋಬೋಟ್ ಮುಂದೆ ನಿಂತು ಮನುಷ್ಯರು ಏನು ಮಾಡುತ್ತಾರೋ ಅದನ್ನ ಅನುಕರಣೆ ಮಾಡುತ್ತದೆ. ಅಷ್ಟೇ ಅಲ್ಲದೆ ಪ್ರಶ್ನೋತ್ತರಗಳ ಸಂಭಾಷಣೆಯನ್ನ ಕೂಡ ಮಾಡುತ್ತದೆ. ನೀವು ಕೇಳುವ ಪ್ರಶ್ನೆಗಳಿಗೆ ಉತ್ತರ ನೀಡುತ್ತದೆ. ನಿಮ್ಮ ಗೊಂದಲದ ಅನುಮಾನದ ಪ್ರಶ್ನೆಗಳಿಗೆ ಸಮರ್ಪಕ ಉತ್ತರವನ್ನು ಕೂಡ ನೀಡುತ್ತದೆ.

ಆರಂಭದಲ್ಲಿ ಅಚ್ಚರಿ ಪಟ್ಟದ್ದು ಅಂದರೆ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಆಯೋಜನೆ ಮಾಡಿದ ಈ ಕಾರ್ಯಕ್ರಮಕ್ಕೆ ಬಂದಂತಹ ಸುದ್ದಿಗಾರರು. ಯಾಕೆಂದರೆ ಪತ್ರಕರ್ತರು ಕಾರ್ಯಕ್ರಮಕ್ಕೆ ಆಗಮಿಸುತ್ತಿದ್ದಂತೆ ಹಾಯ್ ಹಲೋ ನಾನು ವ್ಯೋಮಿತ್ರಾ ಹಾಫ್ ಹುಮನಾಯ್ಕ್ ಮೊದಲ ಮೂಲ ಮಾದರಿ ಎಂದು ಪರಿಚಯ ಮಾಡಿಕೊಂಡು ಕಾರ್ಯಕ್ರಮಕ್ಕೆ ಸ್ವಾಗತ ಮಾಡಿತು. ಈ ರೋಬೋಟ್ ಮನುಷ್ಯರಂತೆ ಮಾತನಾಡಿದ್ದನ್ನ ಕಂಡು ಸುದ್ದಿಗಾರರು ಆಶ್ಚರ್ಯ ವ್ಯಕ್ತಪಡಿಸಿದರು. ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ ವಿಜ್ಞಾನಿಯಾದ ಸ್ಯಾಮ್ ದಯಾಲ್ ಅವರು ಮಾತನಾಡಿ ಈ ರೋಬೋಟ್ ಕೇವಲ ಪಕ್ಕಕ್ಕೆ ಮತ್ತು ಮುಂದಕ್ಕೆ ಬಾಗುತ್ತದೆ.

ಈ ರೋಬೋಟ್ ಅನ್ನು ಇಸ್ರೋ ಕಮಾಂಡ್ ಕೇಂದ್ರದೊಂದಿಗೆ ನಿರಂತರವಾಗಿ ಸಂವಹನದಲ್ಲಿರುತ್ತದೆ ಎಂದು ತಿಳಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರು ಭಾರತೀಯರನ್ನು ಬಾಹ್ಯಾಕಾಶಕ್ಕೆ ಕಳುಹಿಸುವ ನಿಟ್ಟಿನಲ್ಲಿ ಕಳೆದೆರಡು ವರ್ಷಗಳ ಹಿಂದ ಗಗನ್ ಯಾನ ಎಂಬ ಮಹತ್ವದ ಯೋಜನೆಯನ್ನ ಘೋಷಣೆ ಮಾಡಿದರು.ಈ ಗಗನಯಾನ ಮಹತ್ವದ ಯೋಜನೆಯ ಪೂರಕವಾಗಿ ಈ ವ್ಯೋಮಿತ್ರಾ ಹುಮಾನಾಯ್ಡ್ ಎರಡು ಮಾನವರಹಿತ ಬಾಹ್ಯಾಕಾಶ ಯಾನಗಳ ಭಾಗವಾಗಲಿದೆ ಎಂದು ವಿಜ್ಞಾನಿ ಸ್ಯಾಮ್ ದಯಾಲ್ ಮಾಹಿತಿ ನೀಡಿದ್ದಾರೆ.