ಭಾರತದ ಅತ್ಯಂತ ಕಡಿಮೆ ಬೆಲೆಯ ಎಲೆಕ್ಟ್ರಿಕ್ ಕಾರು ಬಿಡುಗಡೆ ಮಾಡಿದ ಟಾಟಾ‌ ಕಂಪನಿ, ಬೆಲೆ ಎಷ್ಟು

ಆಟೋ ಮೊಬೈಲ್ ಕ್ಷೇತ್ರದಲ್ಲಿ ಇತ್ತೀಚೆಗೆ ಎಲೆಕ್ಟ್ರಿಕ್ ವಾಹನಗಳದ್ದೇ ದರ್ಬಾರ್ ಆಗಿದೆ. ಒಂದೆಡೆ ಇಂಧನದ ಬೆಲೆ ಗಗನ ಮುಟ್ಟುತ್ತಿರೋ ಹಿನ್ನೆಲೆ ವಾಹನ ಪ್ರಿಯರು ಈ ಎಲೆಕ್ಟ್ರಿಕ್ ವಾಹನಗಳತ್ತಲೇ ಮುಖ ಮಾಡ್ತಿದ್ದಾರೆ. ಗ್ರಾಹಕರ ಬೇಡಿಕೆಯ ಅನುಗುಣವಾಗಿ ಕಾರು ತಯಾರಕ ಕಂಪನಿಗಳು ಕೂಡ ಎಲೆಕ್ಟ್ರಿಕ್ ವಾಹನಗಳ ತಯಾರಿಕೆಗೇನೇ ಪ್ರಾಶಸ್ತ್ಯ ನೀಡುತ್ತಿವೆ. ಅದು ಕೇವಲ ಕಾರು ಮಾತ್ರ ಅಲ್ಲದೆ ದ್ವಿಚಕ್ರ ವಾಹನಗಳದ್ದೇ ಹೆಚ್ಚು ಸೌಂಡ್ ಆಗ್ತಿದೆ. ಹೌದು ಈ ಎಲೆಕ್ಟ್ರಿಕ್ ಕಾರು ಮತ್ತು ಸ್ಕೂಟರ್ ಗಳು ಇಂಧನರಹಿತ ವಾಹನಗಳಿಗಿಂತ ಕೊಂಚ ದುಬಾರಿ ಅಂತ ಹೇಳಲಾಗ್ತದೆ. ಆದರೆ ಇತ್ತೀಚೆಗೆ ತಾನೇ ಬಿಡುಗಡೆಯಾಗಿರೋ ಟಾಟಾ ಮೋಟಾರ್ಸ್ ಟಾಟಾ ಟಿಯಾಗೊ ಕಾರು ಅತ್ಯಂತ ಕಡಿಮೆ ಬೆಲೆಯನ್ನ ಹೊಂದಿದೆ ಎಂಬ ಮಾಹಿತಿ ಇದೀಗ ಕಾರು ಪ್ರಿಯರಲ್ಲಿ ಸಂತಸ ಮೂಡಿಸಿದೆ.

ಹಾಗಾದರೆ ಈ ಎಲೆಕ್ಟ್ರಿಕ್ ಟಾಟಾ ಮೋಟಾರ್ಸ್ ಟಿಯಾಗೊ ಕಾರಿನ ಬೆಲೆ ಮತ್ತು ಅದರ ವೈಶಿಷ್ಟ್ಯತೆಗಳನ್ನ ನೋಡೋದಾದ್ರೆ ಈ ಕಾರು ಟಾಟಾ ಮೋಟಾರ್ಸ್ ನ ಮೂರನೇ ಪ್ಯಾಸೆಂಜರ್ ಎಲೆಕ್ಟ್ರಿಕ್ ಕಾರ್ ಆಗಿದೆಯಂತೆ. ಈ ಕಾರನ್ನ ಒಮ್ಮೆ ಚಾರ್ಜ್ ಮಾಡಿದ್ರೆ ಸರಿ ಸುಮಾರು 315 ಕಿಮೀ ದೂರದಷ್ಟು ಕ್ರಮಿಸಬಹುದಾಗಿದೆಯಂತೆ. ಜಸ್ಟ್ ಆರು ಸೆಕೆಂಡ್ ಒಳಗೆ 0-60 ಕಿಮೀ ನಷ್ಟು ವೇಗ ಪಡೆಯಬಹುದು ಎಂದು ಕಂಪನಿ ತಿಳಿಸಿದೆ. ಇದರಲ್ಲಿ7 ಇಂಚಿನ ಇನ್ಫೋಟೈನ್ ಮೆಂಟ್ ಸಿಸ್ಟಮ್ ಇದ್ದು, ಆಂಡ್ರಾಯ್ಡ್ ಆಟೊ, ಝಿಪ್ ಟ್ರೋನ್, 8.7ಸ್ಪೀಕರ್ ಹರ್ಮನ್ ಆಡಿಯೋ ಸಿಸ್ಟಮ್ ಅನ್ನ ಅಳವಡಿಸಿದೆಯಂತೆ. ಅದರ ಜೊತೆಗೆ ಈ ಟಾಟಾ ಟಿಯೊಗೊ ಕಾರು 24 kwh ಬ್ಯಾಟರಿ ಪ್ಯಾಕ್ ಇದ್ದು 315 ಕಿಮೀ ಗ್ರೇಡ್ ಅನ್ನ ಹೊಂದಿದೆಯಂತೆ.

ಈ ಬ್ಯಾಟರಿಯ ವಾಯಿದೆ ನೋಡೋದಾದ್ರೆ ಬರೋಬ್ಬರಿ 1,60,000 ಕಿಮೀ ವರೆಗೆ ಗ್ಯಾರಂಟಿ ವಾರೆಂಟಿ ನೀಡಲಾಗಿದೆಯಂತೆ. ಟಾಟಾ ಟಿಯಾಗೊ XE,XT,XZ+ ಮತ್ತು XZ+ ಟೆಕ್ ಮಾದರಿಯಲ್ಲಿ ಈ ಎಲೆಕ್ಟ್ರಿಕ್ ಟಿಯಾಗೊ ಕಾರು ಲಭ್ಯವಿದ್ದು, ಇದೇ ಅಕ್ಟೋಬರ್ 10ರಿಂದ ಅಡ್ವಾನ್ಸ್ ಬುಕ್ಕಿಂಗ್ ಮಾಡುವ ಅವಕಾಶ ಇದೆಯಂತೆ. ಗ್ರಾಹಕರು ಬುಕ್ಕಿಂಗ್ ಮಾಡಿದ ನಂತರ ಮುಂದಿನ ವರ್ಷ ಜನವರಿ ತಿಂಗಳಿನಲ್ಲಿ ಗ್ರಾಹಕರು ತಮ್ಮ ಕಾರನ್ನ ಪಡೆಯಬಹುದಾಗಿಯೆಯಂತೆ. ಇನ್ನು ಮಾರುಕಟ್ಟೆಯಲ್ಲಿ ಈ ಎಲೆಕ್ಟ್ರಿಕ್ ಟಿಯಾಗೊ ಕಾರಿನ ಬೆಲೆಯು 10 ಲಕ್ಷ ರಿಂದ 11.79 ಲಕ್ಷ ದವರೆಗೆ ಇರಲಿದೆಯಂತೆ. ಈ ಬೆಲೆಯು ಎಲೆಕ್ಟ್ರಿಕ್ ಕಾರುಗಳಲ್ಲಿ ಅತ್ಯಂತ ಕಡಿಮೆ ಎಂದು ಆಟೋಮೊಬೈಲ್ ಕ್ಷೇತ್ರದ ಈ ಕಾರು ಮಾರುಕಟ್ಟೆಯಲ್ಲಿ ಪರಿಣಿತರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

Leave a Reply

%d bloggers like this: