ಭಾರತದ ಅತ್ಯಂತ ದೊಡ್ಡ ಬಜೆಟ್ ಚಿತ್ರಕ್ಕೆ ಪ್ರಭಾಸ್ ಅವರಿಗೆ ಸಿಕ್ಕಿದ್ದು ಇಷ್ಟು ಸಂಭಾವನೆ

ಟಾಲಿವುಡ್ ಸೂಪರ್ ಸ್ಟಾರ್ ನಟ ಪ್ರಭಾಸ್ ಅವರ ವೃತ್ತಿ ಜೀವನದಲ್ಲಿ ಆದಿಪುರುಷ್ ಪ್ಯಾನ್ ಇಂಡಿಯಾ ಸಿನಿಮಾ ಬಹುದೊಡ್ಡ ತಿರುವು ಅಂತ ಹೇಳ್ಬೋದು. ಹೌದು ನಟ ಪ್ರಭಾಸ್ ಅವರಿಗೆ ರಾಜಮೌಳಿ ನಿರ್ದೇಶನದಲ್ಲಿ ಮೂಡಿ ಬಂದ ಬಾಹುಬಲಿ ಭಾಗ1 ಮತ್ತು ಭಾಗ2 ಸಿನಿಮಾಗಳು ಸೌತ್ ಸಿನಿ ರಂಗ ಮಾತ್ರ ಅಲ್ಲದೆ ವರ್ಲ್ಡ್ ವೈಡ್ ಅಪಾರ ಜನಪ್ರಿಯತೆಯ ಜೊತೆಗೆ ಭಾರತೀಯ ಚಿತ್ರರಂಗದ ಒಬ್ಬ ಸ್ಟಾರ್ ನಟನಾಗಿ ಅಪಾರ ಬೇಡಿಕೆಯನ್ನ ತಂದು ಕೊಟ್ಟಿತು. ಅದರ ಬೆನ್ನಲ್ಲೇ ಅವರಿಗೆ ಸಾಹೋ ಎಂಬ ಮತ್ತೊಂದು ಪ್ಯಾನ್ ಇಂಡಿಯಾ ಸಿನಿಮಾ ಆಫರ್ ಬಂತು. ಆದ್ರೆ ಈ ಸಾಹೋ ಸಿನಿಮಾ ನಿರೀಕ್ಷೆ ಮಟ್ಟ ತಲುಪಲಿಲ್ಲ. ಅದಾದ ನಂತರ ಹಿಂದಿಯ ರಾಧೆಶ್ಯಾಮ್ ಎಂಬ ಲವ್ ಸಬ್ಜೆಕ್ಟ್ ಸಿನಿಮಾ ಕೂಡ ನಟ ಪ್ರಭಾಸ್ ಅವರಿಗೆ ಕೈ ಹಿಡಿಯಲಿಲ್ಲ.

ಈ ಎರಡೂ ಸಿನಿಮಾಗಳು ಸೋತಿವೆ. ಆದ್ರೇ ನಟ ಪ್ರಭಾಸ್ ಅವರ ಕ್ರೇಜ಼್ ಮಾತ್ರ ಇನ್ನೂ ಕಡಿಮೆ ಆಗಿಲ್ಲ. ದೇಶಾದ್ಯಂತ ಪ್ರಭಾಸ್ ಅವರಿಗೆ ಒಂದೊಳ್ಳೆ ಫ್ಯಾನ್ ಫಾಲೋಯಿಂಗ್ ಕ್ರಿಯೇಟ್ ಆಗಿದೆ. ಹಾಗಾಗಿಯೇ ಅವರಿಗೆ ಅದಿಪುರುಷ್ ಎಂಬ ಬರೋಬ್ಬರಿ ಐನೂರು ಕೋಟಿ ವೆಚ್ಚದಲ್ಲಿ ತಯಾರಾಗ್ತಿರೋ ಪೌರಾಣಿಕ ಸಿನಿಮಾದಲ್ಲಿ ಅವಕಾಶ ಸಿಕ್ಕಿದೆ. ಅದೂ ಕೂಡ ಆದಿಪುರುಷ ಸಿನಿಮಾದಲ್ಲಿ ಪ್ರಭಾಸ್ ಅವರು ಶ್ರೀರಾಮನ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಈ ಪಾತ್ರಕ್ಕಾಗಿ ನಟ ಪ್ರಭಾಸ್ ಬರೋಬ್ಬರಿ 150 ಕೋಟಿ ಸಂಭಾವನೆ ಪಡೆದಿದ್ದಾರೆ ಎಂದು ತಿಳಿದು ಬಂದಿದೆ. ಓಂ ರಾವುತ್ ನಿರ್ದೇಶನದಲ್ಲಿ ಮೂಡಿ ಬರುತ್ತಿರೋ ಈ ಪೌರಾಣಿಕ ಬಿಗ್ ಬಜೆಟ್ ಸಿನಿಮಾದಲ್ಲಿ ಸೀತೆಯಾಗಿ ಕೃತಿ ಸನೂನ್ ನಟಿಸುತ್ತಿದ್ದು, ರಾವಣನಾಗಿ ಸೈಫ್ ಅಲಿಖಾನ್ ಅವರು ನಟಿಸುತ್ತಿದ್ದಾರೆ. ಅದೇ ರೀತಿಯಾಗಿ ಲಕ್ಷ್ಮಣನಾಗಿ ಸನ್ನಿಸಿಂಗ್ ನಟಿಸುತ್ತಿದ್ದು, ದೇವ್ ದತ್ತಾ ಹನುಮಾನ್ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಈ ಆದಿಪುರುಷ ಸಿನಿಮಾ ಸದ್ಯಕ್ಕೆ ಪೋಸ್ಟ್ ಪ್ರೊಡಕ್ಷನ್ ಕೆಲಸಗಳಲ್ಲಿ ಬಿಝಿ಼ ಆಗಿದೆ.

ಬಹುಶಃ ಎಲ್ಲವೂ ಅಂದುಕೊಂಡಂತೆ ಆದರೆ ಮುಂದಿನ ವರ್ಷ 2023 ಜನವರಿ ಸಂಕ್ರಾಂತಿ ಹಬ್ಬದಷ್ಟೊತ್ತಿಗೆ ಈ ಚಿತ್ರ ವರ್ಲ್ಡ್ ವೈಡ್ ರಿಲೀಸ್ ಆಗಲಿದೆ. ಹಿಂದಿ ಸೇರಿದಂತೆ ತೆಲುಗು, ತಮಿಳು, ಮಲೆಯಾಳಂ ಮತ್ತು ಕನ್ನಡ ಭಾಷೆಯಲ್ಲಿ ಈ ಚಿತ್ರ ತೆರೆ ಕಾಣಲಿದೆ. ರಿಲೀಸ್ ಗೂ ಮುನ್ನವೇ ಈ ಚಿತ್ರದ ತೆಲುಗು ಥಿಯೇಟರಿಕಲ್ ರೈಟ್ಸ್ ಅನ್ನ ಬರೋಬ್ಬರಿ ನೂರು ಕೋಟಿಗೂ ಅಧಿಕ ಮೊತ್ತಕ್ಕೆ ಯುವಿ ಕ್ರಿಯೇಶನ್ಸ್ ಸಂಸ್ಥೆ ಪಡೆದುಕೊಂಡಿದೆ ಎಂಬ ಸುದ್ದಿ ಇದೀಗ ಭಾರಿ ವೈರಲ್ ಆಗಿದೆ. ಪ್ರಭಾಸ್ ಅವರ ಈ ಹಿಂದಿನ ಎರಡು ಸಿನಿಮಾಗಳು ಬಾಕ್ಸ್ ಆಫೀಸ್ ನಲ್ಲಿ ಮಕಾಡೆ ಮಲಗಿದ್ದರು ಕೂಡ ಪ್ರಭಾಸ್ ಅವರ ಕ್ರೇಜ಼್ ನಂಬಿ ಯುವಿ ಕ್ರಿಯೇಶನ್ಸ್ ಅವರು ಈ ಬಹು ನಿರೀಕ್ಷಿತ ಪ್ಯಾನ್ ಇಂಡಿಯಾ ಆದಿಪುರುಷ ಸಿನಿಮಾದ ತೆಲುಗು ಥಿಯೇಟರಿಕಲ್ ಹಕ್ಕನ್ನ ಭಾರಿ ಮೊತ್ತಕ್ಕೆ ಪಡೆದಿದೆ. ಅದರಂತೆ ರಾಮಾಯಣ ಕಥೆಯನ್ನಾಧರಿಸಿದ ಈ ಪೌರಾಣಿಕ ಆದಿಪುರುಷ ಸಿನಿಮಾದ ಪೋಸ್ಟರ್ ಈಗಾಗಲೇ ಸಖತ್ ಕ್ರೇಜ಼್ ಹುಟ್ಟು ಹಾಕಿದ್ದು, ಈ ಚಿತ್ರ ನೋಡಲು ಸಿನಿ ಪ್ರೇಕ್ಷಕರು ಕಾತುರದಿಂದ ಕಾಯುತ್ತಿದ್ದಾರೆ.