ಭಾರತ ಚಿತ್ರರಂಗದಲ್ಲೇ ಮೊದಲ ಫ್ಯಾನ್ ಇಂಡಿಯಾ ಸಿನೆಮಾ ಮಾಡಿದ್ದು ಕನ್ನಡಿಗರು, ಸಿನೆಮಾ ಯಾವುದು ಗೊತ್ತಾ? 99%ಜನರಿಗೆ ಗೊತ್ತೇ ಇಲ್ಲ

ಇತ್ತೀಚೆಗೆ ದಕ್ಷಿಣ ಭಾರತದ ಚಿತ್ರರಂಗದಲ್ಲಿ ಪ್ಯಾನ್ ಇಂಡಿಯಾ ಎಂಬ ಹೊಸ ಟ್ರೆಂಡ್ ಶುರುವಾಗಿದೆ.ದಕ್ಷಿಣ ಭಾರತದ ಯಾವ ಸಿನಿಮಾದ ಬಗ್ಗೆ ಕೇಳಿದರು ಕೂಡ ನಾವು ಈಗ ಪ್ಯಾನ್ ಇಂಡಿಯಾ ಸಿನಿಮಾ ಮಾಡುತ್ತಿದ್ದೇವೆ ಎಂದು ಹೆಮ್ಮೆಯಿಂದ ಪ್ರಚಾರ ಮಾಡಿಕೊಳ್ಳುತ್ತಿದ್ದಾರೆ.ಅದರಲ್ಲಿಯೂ ತೆಲುಗಿನಲ್ಲಿ ಬಹುಕೋಟಿ ವೆಚ್ಚದಲ್ಲಿ ತಯಾರಾದ ಅದ್ದೂರಿತನದ ಸಿನಿಮಾ ಬಾಹುಬಲಿ ಸಿನಿಮಾ ಭಾರತ ಮಾತ್ರವಲ್ಲದೆ,ಜಗತ್ತಿನಾದ್ಯಂತ ಹೆಸರು ಮಾಡಿತು,ದಕ್ಷಿಣ ಭಾರತದ ಮೊಟ್ಟ ಮೊದಲ ಪ್ಯಾನ್ ಇಂಡಿಯಾ ಚಿತ್ರ ಅಂದರೆ ಅದು ರಾಜಮೌಳಿ ನಿರ್ದೇಶನದ ಬಾಹುಬಲಿ ಸಿನಿಮಾ ಅಂತಾನೇ ಕರೆಯುತ್ತಾರೆ.ಆದರೆ ಅಸಲಿಗೆ ಭಾರತದ ಮೊಟ್ಟ ಮೊದಲ ಪ್ಯಾನ್ ಇಂಡಿಯಾ ಸಿನಿಮಾ ಅಂದರೆ ಅದು ಕನ್ನಡದ ಸಿನಿಮಾ.ಪ್ಯಾನ್ ಇಂಡಿಯಾ ಸಿನಿಮಾ ಎಂಬುದು ಕನ್ನಡ ಚಿತ್ರರಂಗದಲ್ಲಿ ಆರು ದಶಕಗಳ ಹಿಂದೆಯೇ ಪ್ರಯೋಗ ಆಗಿದೆ.

1959 ರಲ್ಲಿ ನಟ ಸಾರ್ವಭೌಮ ಡಾ.ರಾಜ್ ಕುಮಾರ್ ಅಭಿನಯದ ಮಹಿಷಾಸುರ ಮರ್ದಿನಿ ಎಂಬ ಚಿತ್ರ ಬರೋಬ್ಬರಿ ಎಂಟು ಭಾಷೆಗಳಲ್ಲಿ ಬಿಡುಗಡೆಯಾಗಿ ದಾಖಲೆ ನಿರ್ಮಾಣ ಮಾಡಿತ್ತು ಎಂಬುದು ಈಗ ಇತಿಹಾಸ.ಈ ಮಹಿಷಾಸುರ ಮರ್ದಿನಿ ಚಿತ್ರದಲ್ಲಿ ಮಹಿಷಾಸುರನಾಗಿ ರಾಜ್ ಕುಮಾರ್ ಅಬ್ಬರಿಸಿದ್ದರು.ಹೀಗಾಗಿ ಇಡೀ ಭಾರತೀಯ ಚಿತ್ರರಂಗಕ್ಕೆ ಪ್ಯಾನ್ ಇಂಡಿಯಾ ಸಿನಿಮಾ ಎಂಬುದಕ್ಕೆ ಹೆಜ್ಜೆ ಇಟ್ಟಿದ್ದೇ ಕನ್ನಡದ ಸಿನಿಮಾ ಎಂಬುದನ್ನ ಪರಭಾಷೆಯ ಚಿತ್ರರಂಗಕ್ಕೆ ಮತ್ತೆ ಮತ್ತೆ ನೆನಪಿಸಬೇಕಾಗಿದೆ.ಇನ್ನು ಸದ್ಯಕ್ಕೆ ಕನ್ನಡ ಚಿತ್ರರಂಗದಲ್ಲಿ ಪ್ಯಾನ್ ಇಂಡಿಯಾ ಸಿನಿಮಾಗಳಿಗೆ ಕೊರತೆ ಇಲ್ಲ.

ರಾಕಿಂಗ್ ಸ್ಟಾರ್ ಯಶ್ ನಟನೆಯ ಕೆಜಿಎಫ್,ಕೆಜಿಎಫ್ ಚಾಪ್ಟರ್2 ಸಿನಿಮಾ,ರಿಯಲ್ ಸ್ಟಾರ್ ಉಪೇಂದ್ರ ಅಭಿನಯದ ಕಬ್ಜ,ಕಿಚ್ಚ ಸುದೀಪ್ ಅಭಿನಯದ ವಿಕ್ರಾಂತ್ ರೋಣ,ಇತ್ತೀಚೆಗೆ ತಾನೇ ಅನೌನ್ಸ್ ಆದ ಲವ್ಲೀ ಸ್ಟಾರ್ ಪ್ರೇಮ್ ಅವರ 500 ಕೋಟಿ ಬಜೆಟ್ ಸಿನಿಮಾ ಕೂಡ ಪ್ಯಾನ್ ಇಂಡಿಯಾ ಸಿನಿಮಾ ಆಗಲಿದೆ.ಈ ಚಿತ್ರದಲ್ಲಿ ಹಾಲಿವುಡ್ ಚಿತ್ರರಂಗದ ಖ್ಯಾತ ತಂತ್ರಜ್ಞರು,ನಟರು ನಟಿಸಲಿದ್ದಾರೆ.ಇದು ಕರ್ನಾಟಕದ ಹೆಮ್ಮೆಯ ಯೋಧ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರಿಯಪ್ಪ ಅವರ ಜೀವಾನಾಧರಿತ ಕಥೆಯಾಗಿದೆ ಎಂದು ನಿರ್ದೇಶಕರಾದ ಡಾ.ರಾಘವೇಂದ್ರ ಅವರು ತಿಳಿಸಿದ್ದಾರೆ.

Leave a Reply

%d bloggers like this: