ಭಾರತ ತಂಡದ ಕ್ರಿಕೆಟಿನ ಯುವ ಆಟಗಾರನ ಹಿಂದೆ ಬಿದ್ದ ಶಾರುಖ್ ಖಾನ್ ಮಗಳು ‘ಸುಹಾನಾ’! ಕ್ಯಾರೇ ಎನ್ನದ ಆ ಆಟಗಾರ

ಬಾಲಿವುಡ್ ಕಿಂಗ್ ಖಾನ್ ಬಾದ್ ಶಾ ಮಗಳು ಕ್ರಿಕೆಟ್ ಭಾರತ ತಂಡದ ಯುವ ಆಟಗಾರನ ಹಿಂದೆ ಬಿದ್ದಿದ್ದಾಳಂತೆ..! ಈ ಸಿನಿಮಾ ಮತ್ತು ಕ್ರಿಕೆಟ್ ಲೋಕಕ್ಕೆ ಒಂದು ರೀತಿಯ ಬಿಡಿಸಲಾಗದ ಅವಿನಾಭಾವ ಸಂಬಂದವಿದೆ ಎಂದು ಹೇಳಬಹುದು. ಅನೇಕ ಸಿನಿಮಾ ಸೆಲೆಬ್ರಿಟಿಗಳು ಭಾರತ ತಂಡದ ಕ್ರಿಕೆಟ್ ಆಟಗಾರರೊಂದಿಗೆ ರಿಲೇಶನ್ ಶಿಪ್ ನಲ್ಲಿರುವುದು ಈಗ ಹೊಸದೇನಲ್ಲ. ಈಗಾಗಲೇ ಒಂದಷ್ಟು ಬಾಲಿವುಡ್ ಸ್ಟಾರ್ ನಟಿಯರು ಕ್ರಿಕೆಟಿಗರನ್ನ ಪ್ರೀತಿಸಿ ಮದುವೆ ಆಗಿರುವುದು ಉಂಟು. ಕೆಲವು ನಟಿಯರು ಇನ್ನೂ ಕೂಡ ಸ್ಟಾರ್ ಕ್ರಿಕೆಟ್ ಆಟಗಾರರೊಂದಿಗೆ ಪ್ರೀತಿಯಲ್ಲಿದ್ದಾರೆ. ಇದು ಗುಟ್ಟಾಗೇನೂ ಉಳಿದಿಲ್ಲ. ಅದರಂತೆ ಇದೀಗ ಬಾಲಿವುಡ್ ಸ್ಟಾರ್ ನಟನ ಮಗಳು ಭಾರತ ತಂಡದ ಕ್ರಿಕೆಟ್ ಆಟಗಾರನ ಹಿಂದೆ ಬಿದ್ದಿದ್ದಾಳಂತೆ. ಆದರೆ ಇದಕ್ಕೆ ಆಟಗಾರ ಮಾತ್ರ ರಿಯಾಕ್ಟ್ ಮಾಡುತ್ತಿಲ್ಲವಂತೆ. ಇದೇ ವಿಚಾರ ಇದೀಗ ಬಾಲಿವುಡ್ ಅಂಗಳದಲ್ಲಿ ಭಾರಿ ಸುದ್ದಿಯಾಗಿದೆ.

ಹೌದು ಬಾದ್ ಶಾ ಶಾರುಖ್ ಖಾನ್ ಪುತ್ರ ಡ್ರಗ್ಸ್ ಪ್ರಕರಣದಲ್ಲಿ ಸಿಲುಕಿ ಭಾರಿ ಸುದ್ದಿಯಾಗಿದ್ದರು. ಇದೀಗ ಶಾರುಖ್ ಖಾನ್ ಪುತ್ರಿ ಸುಹಾನಾ ಖಾನ್ ಪ್ರೀತಿ ಪ್ರೇಮ ಎಂಬ ವಿಚಾರದಲ್ಲಿ ಸುದ್ದಿಯಾಗಿದ್ದಾರೆ. ಸುಹಾನಾ ಖಾನ್ ಯಾವುದೇ ಸಿನಿಮಾದಲ್ಲಿ ನಟಿಸದಿದ್ದರು ಕೂಡ ರೂಪದರ್ಶಿಯಾಗಿ ಹೆಸರು ಮಾಡಿದ್ದಾರೆ. ಬಾಲಿವುಡ್ ಸೂಪರ್ ಸ್ಟಾರ್ ನಟನ ಮಗಳು ಎಂಬ ಕಾರಣಕ್ಕೆ ಸುಹಾನಾ ಖಾನ್ ಏನೇ ಮಾಡಿದರು ಕೂಡ ಅವರು ಸುದ್ದಿಯಾಗುತ್ತಾರೆ. ಹೌದು ಸುಹಾನಾ ಖಾನ್ ಅವರಿಗೆ ಪ್ರೀತಿ ಮೂಡಿರುವುದು ಇಂಡಿಯನ್ ಪ್ರೀಮಿಯರ್ ಲೀಗ್ ಕ್ರಿಕೆಟ್ ನ ಪ್ರಮುಖ ತಂಡವಾಗಿರುವ ಕೊಲ್ಕತ್ತಾ ನೈಟ್ ರೈಡರ್ಸ್ ತಂಡದಲ್ಲಿ ಬ್ಯಾಟ್ಸ್ಮನ್ ಆಗಿರುವ ಶುಬ್ಮನ್ ಗಿಲ್ ಅವರನ್ನ. ಈ ಕೊಲ್ಕತ್ತಾ ನೈಟ್ ರೈಡರ್ಸ್ ತಂಡ ಬೇರಾರದ್ದು ಅಲ್ಲ ಇದೇ ಶುಬ್ಮನ್ ಗಿಲ್ ಅವರ ತಂದೆಯ ಒಡೆತನದ್ದಾಗಿದೆ.

ಕ್ರಿಕೆಟಿಗ ಶುಬ್ಮನ್ ಗಿಲ್ ಅವರ ಹಿಂದೆ ಶಾರುಖ್ ಖಾನ್ ಪುತ್ರಿ ಸುಹಾನಾ ಖಾನ್ ಹಿಂದೆ ಬಿದ್ದಿದ್ದರು ಕೂಡ ಇದಕ್ಕೆ ಶುಬ್ಮನ್ ಮಾತ್ರ ಪ್ರತಿಕ್ರಿಯಿಸುತ್ತಿಲ್ಲ. ಏಕೆಂದರೆ ಪ್ರಮುಖ ಕಾರಣ ಕೂಡ ಇದೆ. ಇತ್ತ ಸುಹಾನಾ ಖಾನ್ ಶುಬ್ಮನ್ ಗಿಲ್ ಅವರ ಹಿಂದೆ ಬಿದ್ದರೆ. ಅತ್ತ ಸುಬ್ಮನ್ ಗಿಲ್ ಮಾತ್ರ ಮತ್ತೊಬ್ಬ ಸ್ಟಾರ್ ಕ್ರಿಕೆಟಿಗನ ಮಗಳ ಹಿಂದೆ ಬಿದ್ದಿದ್ದಾರಂತೆ. ಅವರು ಬೇರಾರು ಅಲ್ಲ ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ಅವರ ಪುತ್ರಿ ಸಾರಾ ತೆಂಡೂಲ್ಕರ್ ಅಂತೆ. ಆದರೆ ಶುಬ್ಮನ್ ಗಿಲ್ ಮತ್ತು ಸಾರಾ ತೆಂಡೂಲ್ಕರ್ ಡೇಟಿಂಗ್ ಮಾಡುತ್ತಿದ್ದಾರಾ ಎಂಬ ಪ್ರಶ್ನೆಗೆ ಮಾತ್ರ ಉತ್ತರವಿಲ್ಲ. ಆದರೆ ಶಾರುಖ್ ಖಾನ್ ಪುತ್ರಿ ಸುಹಾನಾ ಖಾನ್ ಮಾತ್ರ ಶುಬ್ಮಿನ್ ಗಿಲ್ ಅವರನ್ನ ಪ್ರೀತಿಸುತ್ತಿದ್ದಾರಂತೆ.