‘ಭಾರತರತ್ನ’ ನಮ್ಮ ಅಪ್ಪನ ಕಾಲಿನ ಉಗುರಿಗೆ ಸಮ: ನಟನ ಉದ್ದಟತನ

ಭಾರತೀಯ ಚಿತ್ರರಂಗದ ಸುಪ್ರಸಿದ್ದ ಆಸ್ಕರ್ ಪ್ರಶಸ್ತಿ ಸಂಗೀತ ನಿರ್ದೇಶಕರಾದ ಎ.ಆರ್.ರೆಹಮಾನ್ ಯಾರೆಂಬುದೇ ನನಗೆ ಗೊತ್ತಿಲ್ಲ ಎಂದು ತೆಲುಗು ಚಿತ್ರರಂಗದ ಖ್ಯಾತ ನಟ ಖಾಸಗಿ ವಾಹಿನಿಯ ಸಂದರ್ಶನವೊಂದರಲ್ಲಿ ಹೇಳಿದ್ದಾರೆ.ಈ ವೀಡಿಯೊ ಇದೀಗ ಸೋಶಿಯಲ್ ಮೀಡಿಯಾಗಳಲ್ಲಿ ಭಾರಿ ವೈರಲ್ ಆಗಿದ್ದು,ನೆಟ್ಟಿಗರು ಈ ಟಾಲಿವುಡ್ ನಟನ ಹೇಳಿಕೆಯ ವಿರುದ್ದ ಅಸಮಾಧಾನ ವ್ಯಕ್ತಪಡಿಸಿದ್ದಾರೆ.ಹೌದು ತೆಲುಗು ಚಿತ್ರರಂಗದ ಖ್ಯಾತ ನಟ ರಾದ ಬಾಲಕೃಷ್ಣ ಅವರು ಇತ್ತೀಚೆಗೆ ಖಾಸಗಿ ವಾಹಿನಿಯ ಸಂದರ್ಶನದಲ್ಲಿ ಭಾಗವಹಿಸಿದ್ದರು.ನಿರೂಪಕರು ನಟ ಬಾಲಕೃಷ್ಣ ಅವರಿಗೆ ಖ್ಯಾತ ಸಂಗೀತ ನಿರ್ದೇಶಕ ಎ.ಆರ್.ರೆಹಮಾನ್ ಅವರ ಬಗ್ಗೆ ಕೇಳಿದಾಗ ನನಗೆ ಅವರು ಯಾರು ಅಂತಾನೇ ಗೊತ್ತಿಲ್ಲ.ನಾನು ಅವರನ್ನ ನೋಡಿಯೇ ಇಲ್ಲ.ಅವರಿಗೆ ಆಸ್ಕರ್ ಪ್ರಶಸ್ತಿ ಬಂದಿದೆ ಎಂಬುದನ್ನ ಕೇಳಿದ್ದೇನೆ ಅಷ್ಟೇ.

ದಶಕಗಳಿಗೆ ಒಮ್ಮೆಮ್ಯೂಸಿಕ್ ಮಾಡಿ ಸೂಪರ್ ಹಿಟ್ ಹಾಡುಗಳನ್ನ ಕೊಡುವ ಬಗ್ಗೆ ನನಗೆ ಹೇಗೆ ತಿಳಿದಿರುತ್ತದೆ ಎಂದು ವ್ಯಂಗ್ಯದ ರೀತಿಯಲ್ಲಿ ಉತ್ತರ ನೀಡಿದ್ದಾರೆ. ಇಷ್ಟೇ ಅಲ್ಲದೆ ಭಾರತ ರತ್ನ ಪ್ರಶಸ್ತಿಯ ಬಗ್ಗೆ ಕೂಡ ವಿವಾದಕ್ಕೊಳ ಪಡುವಂತಹ ಹೇಳಿಕೆ ನೀಡಿದ್ದಾರೆ.ವಿಪರ್ಯಾಸ ಅಂದರೆ ಇವರೇ ನಟಿಸಿದ ನಿಪ್ಪುರವ್ವ ಚಿತ್ರದಲ್ಲಿ ಮೂರು ಜನ ಸಂಗೀತ ನಿರ್ದೇಶಕರಲ್ಲಿ ಎ.ಆರ್.ರೆಹಮಾನ್ ಕೂಡ ಒಬ್ಬರಾಗಿದ್ದರು.ಪ್ರಸ್ತುತ ಎ.ಆರ್‌.ರೆಹಮಾನ್ ಅವರು ತೆಲುಗು,ತಮಿಳು,ಹಿಂದಿ,ಮಲೆಯಾಳಂ ಸೇರಿದಂತೆ ಸ್ಯಾಂಡಲ್ ವುಡ್ ನಲ್ಲಿ ರಿಯಲ್ ಸ್ಟಾರ್ ಉಪೇಂದ್ರ ಅಭಿನಯಿಸಿರುವ ಗಾಡ್ ಫಾದರ್ ಚಿತ್ರಕ್ಕೂ ಕೂಡ ಮ್ಯೂಸಿಕ್ ಮಾಡಿದ್ದಾರೆ.

ಇಂತಹ ದಿಗ್ಗಜ ಸಂಗೀತ ನಿರ್ದೇಶಕ ಎ.ಆರ್.ರೆಹಮಾನ್ ಅವರನ್ನ ತನಗೆ ಗೊತ್ತಿಲ್ಲ ವೆಂಬ ವ್ಯಂಗ್ಯದ ಹೇಳಿಕೆ ನಟ ಬಾಲಕೃಷ್ಣ ಅವರ ವರ್ಚಸ್ಸಿಗೆ ಕುಂದು ಅಂತಾನೇ ಹೇಳಬಹುದು ಎಂದು ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದು ಅಲ್ಲದೆ ಭಾರತರತ್ನ ಪ್ರಶಸ್ತಿ ನಮ್ಮ ತಂದ ಎನ್ ಟಿ ಆರ್ ಅವರ ಕಾಲಿನ ಬೆರಳಿನ ಉಗರಿಗೆ ಸಮಾನ ಎಂದಿದ್ದರು. ಯಾವ ಪ್ರಶಸ್ತಿಗಳು ಕೂಡ ಸಹಾ ತೆಲಗು ಚಿತ್ರರಂಗಕ್ಕೆ ನಮ್ಮ ಕುಟುಂಬದ ಕೊಡುಗೆಯನ್ನು ಮೀರಿಸಲಾರದು ಎಂದು ಹೇಳಿದ್ದಾರೆ. ಮತ್ತಷ್ಟು ಹೊಸ ಹೊಸ ಸುದ್ದಿಗಳಿಗಾಗಿ ನಮ್ಮ ಪೇಜ್ ನ್ನು ತಪ್ಪದೆ ಲೈಕ್ ಮಾಡಿ.

Leave a Reply

%d bloggers like this: