ಭಾರತ ಮತ್ತು ಚೀನಾ ನಡುವೆ ನಡೆಯುತ್ತಿದ್ದ ಯುದ್ದದ ಪರಿಣಾಮ ರತನ್ ಟಾಟಾ ತನ್ನ ಪ್ರೇಯಸಿಯಿಂದ ದೂರ ಆಗಬೇಕಾಯಿತು. ರೋಚಕ ಕಥೆ

ಭಾರತ ಮತ್ತು ಚೀನಾ ದೇಶದ ನಡುವೆ ನಡೆಯುತ್ತಿದ್ದ ಯುದ್ದದ ಪರಿಣಾಮ ರತನ್ ಟಾಟಾ ತನ್ನ ಪ್ರೇಯಸಿಯಿಂದ ದೂರ ಆಗಬೇಕಾಯಿತು.ಭಾರತದ ಪ್ರಸಿದ್ದ ಉದ್ಯಮಿ ಆಗಿರುವ ರತನ್ ಟಾಟಾ ಇಂದು ಜಗತ್ತಿನ ಶ್ರೀಮಂತ ವ್ಯಕ್ತಿಗಳಲ್ಲಿ ಒಬ್ಬರಾಗಿದ್ದಾರೆ. ರತನ್ ನೇವಲ್ ಟಾಟಾ ಎಂಬುದು ಅವರ ಪೂರ್ಣ ಹೆಸರು. ರತನ್ ನೇವಲ್ ಟಾಟಾ ಅವರು 1937 ಡಿಸೆಂಬರ್ 28 ರಂದು ಜನಿಸುತ್ತಾರೆ. ಇವರ ಕುಟುಂಬವು ಸಂಪೂರ್ಣವಾಗಿ ಕೈಗಾರಿಕಾ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದೆ. ಇವರ ತಾತ ಜೆಮ್ ಶೆಡ್ ಟಾಟಾ ಅವರೆ ಟಾಟಾ ಹೆಸರಿನಡಿ ಅನೇಕ ಉದ್ಯಮಗಳನ್ನು ಸ್ಥಾಪಿಸಿದ್ದು,ಏರ್ ಇಂಡಿಯಾ ಸಂಸ್ಥೆಯನ್ನು ಕೂಡ ನಡೆಸುತ್ತಿದ್ದರು. ಇತ್ತೀಚೆಗಷ್ಟೇ ಸರ್ಕಾರದ ಒಡೆತನದಿಂದ ಮತ್ತೆ ಟಾಟಾ ಸಮೂಹ ತಮ್ಮಸ್ವಾಧೀನಕ್ಕೆ ತೆಗೆದುಕೊಂಡಿದೆ.ಇದು ರತನ್ ಟಾಟಾ ಅವರಿಗೆ ತುಂಬಾ ಸಂತೋಷವಾಗಿತ್ತು.ರತನ್ ಟಾಟಾ ಅವರು ಕೇವಲ ಯಶಸ್ವಿ ಉದ್ಯಮಿ ಮಾತ್ರ ಅಲ್ಲ.ಜನೋಪಕಾರಿ ಕೂಡ ಹೌದು.

ಭಾರತ ದೇಶ ಕೋವಿಡ್ ಸಂಕಷ್ಟಕ್ಕೆ ಸಿಲುಕಿಕೊಂಡಾಗ ಕೋಟ್ಯಾಂತರ ರೂ.ಗಳನ್ನು ದೇಣಿಗೆಯಾಗಿ ನೀಡಿದ್ದರು.ಅದಲ್ಲದೆ ಅನೇಕ ಸಂಘ-ಸಂಸ್ಥೆಗಳ ಮೂಲಕ ಸಾಮಾಜಿಕ ಸೇವೆಗಳನ್ನು ಕೂಡ ಮಾಡುತ್ತಿದ್ದಾರೆ.1990 ರಿಂದ 2012 ರ ವರೆಗೆ ಟಾಟಾ ಸಮೂಹದ ಅಧ್ಯಕ್ಷರಾಗಿದ್ದ ರತನ್ ಟಾಟಾ ಅವರು 2008 ರಲ್ಲಿ ಭಾರತದ ಅತ್ಯುನ್ನತ ನಾಗರಿಕ ಪ್ರಶಸ್ತಿಗಳಾದ ಪದ್ಮ ವಿಭೂಷಣ ಮತ್ತು 2010 ರಲ್ಲಿ ಪದ್ಮ ಭೂಷಣ ಪ್ರಶಸ್ತಿ ಗೌರವಕ್ಕೆ ಭಾಜನರಾಗಿದ್ದಾರೆ.ಈ ರೀತಿಯಾಗಿ ಜಗತ್ತಿನ ಪ್ರಸಿದ್ದ ಉದ್ಯಮಿಯಾಗಿರುವ ರತನ್ ಟಾಟಾ ಅವರಿಗೂ ಕೂಡ ಕೊರಗು ಕಾಡುತ್ತಿದೆ.ರತನ್ ಟಾಟಾ ಅವರು ಇಷ್ಟೆಲ್ಲಾ ಸಾಧನೆ ಮಾಡಿದರು ಕೂಡ ವೈವಾಹಿಕ ಜೀವನಕ್ಕೆ ಹೆಜ್ಜೆ ಇಡಲಿಲ್ಲ.ಇದಕ್ಕೆ ಕಾರಣ ತಿಳಿದರೆ ನಿಜಕ್ಕೂ ಕೂಡ ಆಶ್ಚರ್ಯ ಆಗುತ್ತದೆ. ರತನ್ ಟಾಟಾ ಅವರು ಮದುವೆ ಆಗದಿರಲು ಪ್ರಮುಖ ಕಾರಣ ಅಂದರೆ ಅವರು ಪ್ರೀತಿಸಿದ ಹುಡುಗಿ. ರತನ್ ಟಾಟಾ ಅವರು ಮುಂಬೈನಲ್ಲಿ ತಮ್ಮ ವಿಧ್ಯಾಭ್ಯಾಸವನ್ನು ಮುಗಿಸಿ ಉನ್ನತ ಶಿಕ್ಷಣ ಅಧ್ಯಾಯನಕ್ಕಾಗಿ ಅಮೇರಿಕಾಗೆ ಹೋಗಿದ್ದರು.

ಅಲ್ಲಿ ಅವರಿಗೆ ಒಬ್ಬಳು ಸುಂದರಿ ಹುಡುಗಿಯ ಮೇಲೆ ಪ್ರೀತಿ ಆಗಿ ಪ್ರಪೋಸ್ ಕೂಡ ಮಾಡಿದ್ದರು.ಅದಕ್ಕೆ ಆ ಹುಡುಗಿ ಕೂಡ ಸಮ್ಮತಿ ಸೂಚಿಸಿ ಮದುವೆ ಆಗುವುದಾಗಿ ತಿಳಿಸಿದ್ದರು.ಓದು ಮುಗಿದ ಬಳಿಕ ಇಬ್ಬರು ಕುಟುಂಬದ ಒಪ್ಪಿಗೆ ಪಡೆದು ಮದುವೆ ಆಗೋಣ ಎಂದು ನಿರ್ಧರಿಸಿದ್ದರು.ಅಂತೆಯೇ ಓದು ಮುಗಿದ ನಂತರ ರತನ್ ಟಾಟಾ ಅವರು ಭಾರತಕ್ಕೆ ಬರುವಂತೆ ಹೇಳಿದಾಗ ಆ ಹುಡುಗಿ ನಾನು ಭಾರತಕ್ಕೆ ಬರುವುದಿಲ್ಲ ಎಂದು ನಿಷ್ಟುರವಾಗಿ ನುಡಿದಿದ್ದರು.ಏಕೆಂದರೆ ಅಂದು 1962 ರಲ್ಲಿ ಭಾರತ ಮತ್ತು ಚೀನಾ ನಡುವೆ ಯುದ್ದ ನಡೆಯುತಿತ್ತು.ರತನ್ ಟಾಟಾ ಭಾರತದಲ್ಲಿ ತಮ್ಮ ಕುಟುಂಬದ ಉದ್ಯಮವನ್ನು ಮತ್ತಷ್ಟು ವಿಸ್ತರಿಸಬೇಕು ಎಂಬ ಮಹಾ ಕನಸಿನೊಂದಿಗೆ ಭಾರತಕ್ಕೆ ಮರಳಿ ಬಂದು ತಮ್ಮ ಗುರಿಯನ್ನ ತಲುಪಿದರು.ಆದರೆ ರತನ್ ಟಾಟಾ ಅವರಿಗೆ ಇಂದಿಗೂ ಕೂಡ ತಮ್ಮ ಬದುಕಿನಲ್ಲಿ ಬಂದ ಆ ಹುಡುಗಿಯ ನೆನಪಿನಲ್ಲಿದ್ದುಕೊಂಡೇ ಬ್ರಹ್ಮಚಾರಿಯಾಗಿ ಉಳಿದು ಬಿಟ್ಟರು.