ಭಕ್ತರು ಕೊಟ್ಟ ಮುಡಿ ಕೂದಲಿನಿಂದ ತಿರುಪತಿಗೆ ಬರುತ್ತಿರುವ ಆದಾಯ ಎಷ್ಟು ಕೋಟಿ ಹಣ ಗೊತ್ತಾ? ದೇಶವೇ ಬೆಚ್ಚಿಬಿದ್ದಿದೆ

ದೇಶದ ಈ ಪ್ರಸಿದ್ದ ದೇವಾಲಯದಲ್ಲಿ ಕೇವಲ ಮುಡಿ ಕೂದಲಿನಿಂದಾನೇ ನೂರಾರು ಕೋಟಿ ಆದಾಯವಾಗಿ ಹರಿದು ಬರುತ್ತಿದೆ. ಸಾಮಾನ್ಯವಾಗಿ ಭಕ್ತರು ತಮ್ಮ ಕೋರಿಕೆ ನೆರವೇರಿಸಿದ ತಮ್ಮ ನಂಬಿಕೆಯ ದೇವರಿಗೆ ಕಾಣಿಕೆ ಅಥವಾ ಹರಕೆ ಯನ್ನು ತೀರಿಸುತ್ತಾರೆ. ಕೆಲವರು ದೇವಾಲಯದ ಜೀರ್ಣೋದ್ದಾರಕ್ಕೆ ಆರ್ಥಿಕ ನೆರವು ನೀಡಿದರೆ, ಕೆಲವರು ತುಲಾಭಾರ ಮಾಡಿಸುತ್ತಾರೆ. ಅದರಂತೆ ಇನ್ನೊಂದಷ್ಟು ಮಂದಿ ಪೂಜೆ ಪುನಸ್ಕಾರ ಸೇರಿದಂತೆ ಒಂದಷ್ಟು ಸೇವೆಯನ್ನ ಮಾಡುತ್ತಾರೆ. ಅದೇ ರೀತಿಯಾಗಿ ಕೆಲವು ಭಕ್ತರು ತಾವು ಬೇಡಿಕೊಂಡ ಕೋರಿಕೆ ಈಡೇರಿದಾಗ ಅದಕ್ಕೆ ತಕ್ಕಂತೆ ತಾವು ಹರಕೆ ಮಾಡಿಕೊಂಡಂತೆ ಮುಡಿ ಕೊಡುತ್ತಾರೆ. ಈ ಮುಡಿ ಕೂದಲಿಂದಾನೇ ಭಾರತದ ಈ ಪ್ರಸಿದ್ದ ದೇವಾಲಯಕ್ಕೆ ವಾರ್ಷಿಕವಾಗಿ ನೂರಾರು ಕೋಟಿ ಆದಾಯ ಬರುತ್ತಿದೆಯಂತೆ. ಆದರೆ ಭಾರತದಲ್ಲಿ ಈ ಪ್ರಸಿದ್ದ ಶ್ರೀಮಂತ ದೇವಾಲಯ ಯಾವುದು ಅಂತೀರಾ.

ಹೌದು ಭಾರತದಲ್ಲಿರುವ ಶ್ರೀಮಂತ ದೇವಾಲಯಗಳಲ್ಲಿ ಪ್ರಮುಖವಾಗಿರುವ ತಿರುಪತಿ ವೆಂಕಟೇಶ್ವರ ದೇವಾಲಯದಲ್ಲಿ ಹರಕೆ ಹುಂಡಿಯಲ್ಲಿ ಶೇಖರಣೆ ಆಗುವ ಹಣದ ಮೊತ್ತ ದಿಂದಲೇ ಆಗಾಗ ಸುದ್ದಿ ಆಗುತ್ತಿರುತ್ತದೆ. ಈ ತಿರುಪತಿ ತಮ್ಮಪ್ಪನ ಭಕ್ತರು ದೇಶ ಮಾತ್ರ ಅಲ್ಲದೆ ವಿದೇಶಗಳಿಂದಾನೂ ಕೂಡ ಬರುತ್ತಿರುತ್ತಾರೆ. ಅಪಾರ ಭಕ್ತ ಗಣವೊಂದಿರುವ ಈ ತಿರುಪತಿ ವೆಂಕಟೇಶ್ವರ ನ ಭಕ್ತರು ತಮ್ಮ ಕೋರಕೆಯ ಈಡೇರಿಸಿದ ನಂತರ ತಮ್ಮತಲೆ ಕೂದಲನ್ನ ಸಂಪೂರ್ಣವಾಗಿ ಇಲ್ಲಿ ಬಂದು ಮುಡಿ ಕೊಡುವ ಪದ್ದತಿಯೊಂದು ನಡೆದುಕೊಂಡು ಬರುತ್ತಿದೆ. ಈ ಕ್ಷೇತ್ರದಲ್ಲಿ ಭಕ್ತರು ಬಂದು ನೀಡುವ ತಲೆ ಕೂದಲು ಅನೇಕ ವಿವಿಧ ಉದ್ದೇಶಗಳಿಗಾಗಿ ಉಪಯೋಗಿಸುತ್ತಾರೆ.

ಅದರಲ್ಲಿಯೂ ಇತ್ತೀಚೆಗಂತೂ ಹೊರ ದೇಶಗಳನ್ನು ಸೇರಿದಂತೆ ದೇಶದಲ್ಲಿಯೂ ಕೂಡ ಕೆಲವು ಪ್ರತಿಷ್ಟಿತ ವಿಗ್ ಕಂಪನಿಗಳಿಂದ ಈ ತಲೆ ಕೂದಲಿಗೆ ಭಾರಿ ಬೇಡಿಕೆ ಕೇಳಿ ಬರುತ್ತಿದೆ. ಇನ್ನೊಂದೆಡೆ ತಲೆ ಕೂದಲನ್ನು ಕ್ಯಾನ್ಸರ್ ರೋಗಿಗಳಿಗೆ ಬಳಸಿಕೊಳ್ಳಲಾಗುತ್ತದೆ. ಇದೊಂದು ರೀತಿಯ ಸದುದ್ದೇಶವೊಂದಿದ್ದರು ಕೂಡ ವಾಣಿಜ್ಯೀಕರಣ ಆಗಿರವುದು ಮಾತ್ರ ಇದೀಗ ಜಗಜ್ಜಾಹೀರಾಗಿದೆ. ಇನ್ನು ತಿರುಪತಿ ತಿಮ್ಮಪ್ಪನ ಕ್ಷೇತ್ರದಲ್ಲಿ ಈ ಮುಡಿ ತಲೆ ಕೂದಲನಿಂದಾನೇ ವಾರ್ಷಿಕವಾಗಿ ಬರೋಬ್ಬರಿ ಇನ್ನೂರು ಕೋಟಿಗೂ ಅಧಿಕ ಆದಾಯ ಹರಿದು ಬರುತ್ತದೆಯಂತೆ. ಕಳೆದ ವರ್ಷ 2021 ರಲ್ಲಿ ಕೇವಲ ಈ ತಲೆ ಕೂದಲಿನ ವಹಿವಾಟು ಸರಿ ಸುಮಾರು ಬರೋಬ್ಬರಿ 350 ಕೋಟಿಗೂ ಅಧಿಕ ಎಂದು ತಿಳಿದು ಬಂದಿ