ಭಾರತದಲ್ಲೇ ಈವರೆಗೆ ಯಾವ ಚಿತ್ರವೂ ಮಾಡೋಕಾಗದ ಹೊಸ ದಾಖಲೆ ಮಾಡಿದ ‘ಕಾಂತಾರ’ ಚಿತ್ರ, ಸ್ವತಃ ಬಿಎಂಎಸ್ ಸಂಸ್ಥೆಯಿಂದ ಹೇಳಿಕೆ

ಕನ್ನಡದೊಂದೇ ಭಾಷೆಯಲ್ಲಿ ರಿಲೀಸ್ ಆದ ಕಾಂತಾರ ಸಿನಿಮಾ ಭಾರತೀಯ ಚಿತ್ರರಂಗದಾದ್ಯಂತ ಅಪಾರ ಸದ್ದು ಮಾಡುತ್ತಿದೆ. ಕನ್ನಡದಲ್ಲಿ ಪ್ಯಾನ್ ಇಂಡಿಯಾ ಎರಾ ಆರಂಭವಾಗಿದೆ. ಅಂದರೆ ಕನ್ನಡ ಭಾಷೆಯಲ್ಲಿ ಮಾತ್ರ ಅಲ್ಲದೆ ತೆಲುಗು, ತಮಿಳು, ಮಲೆಯಾಳಂ ಸೇರಿದಂತೆ ಹಿಂದಿ ಭಾಷೆಯಲ್ಲಿಯೂ ಕೂಡ ನಮ್ಮ ಕನ್ನಡ ಸಿನಿಮಾಗಳು ಗ್ರ್ಯಾಂಡ್ ಆಗಿ ರಿಲೀಸ್ ಸಕ್ಸಸ್ ಕಂಡು ಬಾಕ್ಸ್ ಆಫೀಸ್ ನಲ್ಲಿ ಧೂಳೆಬ್ಬಿಸುತ್ತಿವೆ. ಕೆಜಿಎಫ್, ಕೆಜಿಎಫ್2, 777 ಚಾರ್ಲಿ, ವಿಕ್ರಾಂತ್ ರೋಣ ಹೀಗೆ ಕನ್ನಡದ ಒಂದಷ್ಟು ಸಿನಿಮಾಗಳು ಪಂಚಭಾಷೆಗಳಲ್ಲಿ ರಿಲೀಸ್ ಆಗಿ ದೇಶ ವಿದೇಶಗಳಲ್ಲಿ ಸದ್ದು ಮಾಡಿದ್ದವು. ಆದರೆ ರಿಷಬ್ ಶೆಟ್ಟಿ ಅವರ ಕಾಂತಾರ ಸಿನಿಮಾ ಕೇವಲ ಕನ್ನಡ ಭಾಷೆಯಲ್ಲಿ ಮಾತ್ರ ತೆರೆಕಂಡಿತು. ಈ ಸಿನಿಮಾ ನೋಡಿದ ಪ್ರತಿಯೊಬ್ಬರು ಕೂಡ ಅಭೂತ ಪೂರ್ವ ಪ್ರತಿಕ್ರಿಯೆ ನೀಡಿದ್ದಾರೆ.

ಕರಾವಳಿ ಸಂಸ್ಕೃತಿ ಹಬ್ಬ ಆಚರಣೆ, ಅಲ್ಲಿನ ಜನರು ನೆಲದೊಟ್ಟಿಗೆ ಹೊಂದಿರೋ ಭಾವನೆ ಈ ಭಾವನೆಗೆ ಧಕ್ಕೆ ತರುವ ಪ್ರಯತ್ನ ಮಾಡುವ ಅರಣ್ಯ ಇಲಾಖೆಯ ಕ್ರಮ ಹೇಗೆ ಅಲ್ಲಿನ ಜನರಿಗೆ ಆಕ್ರೋಶ ವ್ಯಕ್ತವಾಗುವಂತೆ ಮಾಡುತ್ತದೆ ಅನ್ನೋದನ್ನ ನಿರ್ದೇಶಕ ರಿಷಬ್ ಶೆಟ್ಟಿ ಬಹಳ ಸೊಗಸಾಗಿ ಕಟ್ಟಿಕೊಟ್ಟಿದ್ದಾರೆ. ಅರವಿಂದ್ ಕಶ್ಯಪ್ ಅವರ ಛಾಯಾಗ್ರಹಣ, ಅಜನೀಶ್ ಲೋಕನಾಥ್ ಅವರ ರಾಗ ಸಂಯೋಜನೆ ಕಾಂತಾರ ಸಿನಿಮಾದ ಜೀವಾಳವಾಗಿದೆ ಅಂದರೆ ಅತಿಶಯೋಕ್ತಿ ಆಗಲಾರದು. ಇನ್ನು ಕಲೆಕ್ಷನ್ ವಿಚಾರದಲ್ಲಿ ಕಾಂತಾರ ಸಿನಿಮಾ ಬರೋಬ್ಬರಿ ಮೂವತ್ತು ಕೋಟಿಯಷ್ಟು ಕಲೆಕ್ಷನ್ ಮಾಡಿ ಬಾಕ್ಸ್ ಆಫೀಸ್ ನಲ್ಲಿ ಧೂಳೆಬ್ಬಿಸುತ್ತಿದೆ. ಈ ಕಾಂತಾರ ಸಿನಿಮಾ ಕೇವಲ ಕನ್ನಡ ಪ್ರೇಕ್ಷಕರನ್ನ ಮಾತ್ರ ಅಲ್ಲದೆ ಪರಭಾಷಾ ಸಿನಿಪ್ರಿಯರು ಕೂಡ ಮೆಚ್ಚಿ ಹೊಗಳುತ್ತಿದ್ದಾರೆ. ಬಿಡುಗಡೆಯಾದ ಎಲ್ಲಾ ಥಿಯೆಟರ್ ಗಳಲ್ಲಿ ಕಾಂತಾರ ಸಿನಿಮಾ ಹೌಸ್ ಫುಲ್ ಪ್ರದರ್ಶನ ಕಾಣುತ್ತಿದೆ. ಭರ್ಜರಿ ಪ್ರದರ್ಶನದ ಜೊತೆಗೆ ಇದೀಗ ಕಾಂತಾರ ಸಿನಿಮಾ ಹೊಸ ದಾಖಲೆ ಮಾಡಿದೆ.

ಅದೇನಪ್ಪಾ ಅಂದರೆ ಕಾಂತಾರ ಸಿನಿಮಾ ಬುಕ್ ಮೈ ಶೋ ರೇಟಿಂಗ್ ಮತ್ತು ಐಎಂಡಿಬಿ ರೇಟಿಂಗ್ ನಲ್ಲಿ ನೂರಕ್ಕೆ ಪ್ರತಿಶತ 99 ಅಂಕ ಸಿಕ್ಕಿದೆ. ಅಷ್ಟೇ ಅಲ್ಲದೆ ಕಾಂತಾರ ಸಿನಿಮಾಗೆ ಇಪ್ಪತ್ತೈದು ಸಾವಿರಕ್ಕೂ ಅಧಿಕ ಜನರು ವೋಟ್ ಮಾಡಿದ್ದಾರೆ. ಈ ರೀತಿಯ ದಾಖಲೆ ಭಾರತೀಯ ಚಿತ್ರರಂಗದಲ್ಲಿ ಯಾವ ಸಿನಿಮಾ ಕೂಡ ಮಾಡಿರಲಿಲ್ಲವಂತೆ, ಇದನ್ನು ಸ್ವತಃ ಬುಕ್ ಮೈ ಶೋ ಸಂಸ್ಥೆ ಹೇಳಿದೆ. ಪೈಪೋಟಿಯಲ್ಲಿ ತಮಿಳಿನ ಪೊನ್ನಿಯನ್ ಸೆಲ್ವನ್ ಸಿನಿಮಾ 87%, ಹಿಂದಿಯ ವಿಕ್ರಂವೇದಾ ಸಿನಿಮಾ 87% ರೇಟಿಂಗ್ ಪಡೆದುಕೊಂಡು ಕಾಂತಾರ ಸಿನಿಮಾದ ಮುಂದೆ ಡಲ್ ಹೊಡೆದಿದೆ. ಏನೇ ಆದ್ರೂ ಪರಭಾಷೆಯ ಬಿಗ್ ಬಜೆಟ್ ಪ್ಯಾನ್ ಇಂಡಿಯಾ ಸಿನಿಮಾಗಳ ಮುಂದೆ ನಮ್ಮ ಕನ್ನಡದ ಕಾಂತಾರ ಸಿನಿಮಾ ಕೇವಲ ನಮ್ಮ ಕನ್ನಡ ಭಾಷೆಯೊಂದಲ್ಲೇ ರಿಲೀಸ್ ಆಗಿ ಈ ಪರಿ ಪ್ರಮಾಣದ ಅಪಾರ ಪ್ರಶಂಸೆ ಪಡೆದುಕೊಂಡು ಐಎಂಡಿಬಿ ರೇಟಿಂಗ್ ನಲ್ಲಿ 9.9 ರೇಟಿಂಗ್ ಪಡೆದುಕೊಂಡಿರೋದು ನಿಜಕ್ಕೂ ಕೂಡ ಕನ್ನಡಿಗರಿಗೆ ಸಂತೋಷದ ವಿಚಾರ ಅಂತಾನೇ ಹೇಳ್ಬೋದು.

Leave a Reply

%d bloggers like this: