ಭಾರಿ ನಿರಾಶೆ ಮೂಡಿಸಿದ ವಿಜಯ್ ದೇವರಕೊಂಡ ಅವರ ಬಹುನೀರಿಕ್ಷಿತ ‘ಲೈಗರ್’ ಚಿತ್ರ

ಟಾಲಿವುಡ್ ಸೂಪರ್ ಸ್ಟಾರ್ ನಟ ವಿಜಯ್ ದೇವರಕೊಂಡ ಅವರ ನಟನೆಯ ಪ್ಯಾನ್ ಇಂಡಿಯಾ ಲೈಗರ್ ಸಿನಿಮಾ ದೇಶಾದ್ಯಂತ ನಿನ್ನೆ ಅಂದ್ರೆ ಆಗಸ್ಟ್ 25ರಂದು ಅದ್ದೂರಿಯಾಗಿ ರಿಲೀಸ್ ಆಗಿದೆ‌. ಲೈಗರ್ ಸಿನಿಮಾದ ಮೇಲೆ ಅಪಾರ ನಿರೀಕ್ಷೆ ಇಟ್ಟುಕೊಳ್ಳಲಾಗಿತ್ತು. ಯಾಕಂದ್ರೆ ಈ ಲೈಗರ್ ಸಿನಿಮಾವನ್ನು ಖ್ಯಾತ ನಿರ್ದೇಶಕ ಪುರಿ ಜಗನ್ನಾಥ್ ನಿರ್ದೇಶನ ಮಾಡಿದ್ದರು. ನಟ ವಿಜಯ್ ದೇವರಕೊಂಡ ಅಭಿಮಾನಿಗಳು ಲೈಗರ್ ಚಿತ್ರದ ಮೇಲೆ ಅಪಾರ ನಿರೀಕ್ಷೆ ಇಟ್ಕೊಂಡಿದ್ರು. ಚಿತ್ರದ ಟ್ರೇಲರ್ ಬಿಡುಗಡೆ ಆದಾಗಿನಿಂದ ಸಿನಿಮಾ ಯಾವಾಗ ನೋಡ್ತೀವೋ ಎಂದು ಬಹಳ ಕಾತುರದಿಂದ ಕಾಯುತ್ತಿದ್ದರು. ಆದರೆ ನಿನ್ನೆ ಲೈಗರ್ ಸಿನಿಮಾ ನೋಡಿದ ನಂತರ ವಿಜಯ್ ಅಭಿಮಾನಿಗಳಿಗೆ ಭಾರಿ ನಿರೀಕ್ಷೆ ಆಗಿದೆ. ಇದೊಂದು ಬಾಕ್ಸಿಂಗ್ ಕ್ರೀಡಾಧಾರಿತ ಆಕ್ಷನ್ ಸಿನಿಮಾ.

ವಿಜಯ್ ದೇವರಕೊಂಡ ಅವರ ನಟನೆಗೆ ಫಿಧಾ ಆದರು ಕೂಡ ಚಿತ್ರದ ಕಥೆಯಲ್ಲಿ ಗಟ್ಟಿತನವಿಲ್ಲ, ಹಾಡುಗಳು ಮನಸ್ಸಿಗೆ ಮುಟ್ಟುವಂತಿಲ್ಲ. ವಿಜಯ್ ದೇವರಕೊಂಡ ಅವರಿಗೆ ಜೋಡಿಯಾಗಿ ಕಾಣಿಸಿಕೊಂಡಿರುವ ಬಾಲಿವುಡ್ ಬೆಡಗಿ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದರು ಸಹ ಆಕೆಯ ನಟನೆ ಹೇಳಿಕೊಳ್ಳುವಷ್ಟಿಲ್ಲ. ಹೀಗೆ ಸಾಲು ಸಾಲು ಲೈಗರ್ ಚಿತ್ರದ ಬಗ್ಗೆ ನಕರಾತ್ಮಕ ಅಭಿಪ್ರಾಯಗಳು ವ್ಯಕ್ತವಾಗಿವೆ. ಲೈಗರ್ ಸಿನಿಮಾ ಬರೋಬ್ಬರಿ ನೂರು ಕೋಟಿ ಬಜೆಟ್ ನಲ್ಲಿ ತಯಾರಾದ ಸಿನಿಮಾ. ಧರ್ಮ ಪ್ರೊಡಕ್ಷನ್ ಮತ್ತು ಪುರಿ ಜಗನ್ನಾಥ್ ಅವರೇ ಸ್ವತಃ ಬಂಡವಾಳ ಹೂಡಿಕೆ ಮಾಡಿ ನಿರ್ಮಾಣ ಮಾಡಿರೋ ಈ ಲೈಗರ್ ಚಿತ್ರ ನೋಡಿದ ಸಿನಿ ಪ್ರೇಕ್ಷಕರು ಮಿಶ್ರ ಪ್ರತಿಕ್ರಿಯೆ ವ್ಯಕ್ತಪಡಿಸುತ್ತಿದ್ದಾರೆ. ಲೈಗರ್ ಸಿನಿಮಾ ವಿಜಯ್ ದೇವರಕೊಂಡ ಅವರಿಗೆ ಮಾಡು ಇಲ್ಲವೇ ಮಡಿ ಎಂಬಂತೆ ಯಶಸ್ಸು ಸಿಗಲೇಬೇಕಾಗಿದ್ದ ಸಿನಿಮಾ.

ಯಾಕಂದ್ರೆ ಇವರ ನಟನೆಯ ಸಾಲು ಸಾಲು ಸಿನಿಮಾಗಳು ಸೋಲನ್ನ ಕಂಡಿದ್ದವು. ಹಾಗಾಗಿ ಈ ಲೈಗರ್ ಪ್ಯಾನ್ ಇಂಡಿಯಾ ಸಿನಿಮಾ ವಿಜಯ್ ದೇವರಕೊಂಡ ಅವರಿಗೆ ಬ್ರೇಕ್ ನೀಡಬೇಕಾಗಿತ್ತು. ಆದರೆ ಇದೀಗ ಸಿನಿಮಾದಲ್ಲಿನ ಕಥೆಯ ಕೊರತೆ, ಅನಗತ್ಯ ವೈಭವೀಕರಿಸಿದ ದೃಶ್ಯಗಳು ಮತ್ತು ಅಲ್ಲಲ್ಲಿ ಅತಿರೇಕ ಅನಿಸುವಂತಹ ವಿಜಯ್ ನಟನೆ, ನಟನೆಯ ಗಂಧಗಾಳಿ ಗೊತ್ತಿಲ್ಲವೇನೋ ಎಂಬಂತಿರೋ ಅನನ್ಯಾ ಪಾಂಡೆ ಸೇರಿದಂತೆ ಈ ಎಲ್ಲಾವು ಚಿತ್ರದ ನಕರಾತ್ಮಕ ಅಂಶಗಳಾಗಿವೆ. ವಿಶೇಷ ಅಂದರೆ ಲೈಗರ್ ಸಿನಿಮಾದಲ್ಲಿ ಅತಿಥಿ ಪಾತ್ರದಲ್ಲಿ ಮಾಜಿ ವಿಶ್ವ ಹೆವಿವೇಟ್ ಚಾಂಪಿಯನ್ ಬಾಕ್ಸರ್ ಮೈಕ್ ಟೈಸನ್ ಕೂಡ ಅಭಿನಯಿಸಿದ್ದಾರೆ‌. ಇವರ ಪಾತ್ರ ಕೂಡ ಅಭಿಮಾನಿಗಳಿಗೆ ರುಚಿಸಿಲ್ಲ. ಒಟ್ಟಾರೆಯಾಗಿ ಲೈಗರ್ ಸಿನಿಮಾ ನೋಡಿದ ಪ್ರೇಕ್ಷಕರು ವಿಜಯ್ ದೇವರಕೊಂಡ ಅವರ ನಟನೆಯನ್ನ ಕೊಂಡಾಡಿದರು ಕೂಡ ನಿರ್ದೇಶಕ ಪುರಿ ಜಗನ್ನಾಥ್ ಅವರ ನಿರ್ದೇಶನಕ್ಕೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

Leave a Reply

%d bloggers like this: