ಭಾರೀ ಬೇಡಿಕೆ ಇರುವ ನಿರೂಪಕಿ ರಾಧಾ ಹಿರೇಗೌಡರ ಗಂಡ ಇವರೇ ನೋಡಿ

ಚುರುಕಾದ ನಿರೂಪಣೆಯಿಂದ ಕರ್ನಾಟಕದ ಸುದ್ದಿ ವಾಹಿನಿಯ ದಿಗ್ಗಜ ನಿರೂಪಕಿಯಾಗಿರುವ ರಾಧಾ ಹಿರೇಗೌಡರ್ ಯಾರಿಗೆ ತಾನೇ ಗೊತ್ತಿಲ್ಲ ಒಬ್ಬ ಹೆಣ್ಮಗಳು ಪತ್ರಿಕೋದ್ಯಮದಲ್ಲಿ ಹೇಗೆ ಚುರುಕಾಗಿ ಕೆಲ್ಸ ಮಾಡಬೇಕು ಹೇಗೆ ಖಡಕ್ ಆಗಿ ಮಾತಾಡಿ ಅಧಿಕಾರಿಗಳು,ರಾಜಕಾರಣಿಗಳ ಬೆವರಿಳಿಸಬೇಕು ಅನ್ನೋದನ್ನು ಸಖತ್ತಾಗಿ ತೋರಿಸಿಕೊಟ್ಟವರು.ಇವರು ಪಬ್ಲಿಕ್ ವಾಹಿನಿಯ ರಂಗನಾಥ್ ಅವರ ಜೊತೆ ಇದ್ದಾಗಲೇ ಬಹಳ ಜನಪ್ರಿಯತೆ ಗಳಿಸಿದವರು. ಪತ್ರಿಕೋದ್ಯಮದಲ್ಲಿ ಸಾಕಷ್ಟು ಕೆಲ್ಸ ಮಾಡಿರುವ ಅನುಭವ ಇವರಿಗಿದೆ.ಚರ್ಚೆ ಕಾರ್ಯಕ್ರಮಗಳಲ್ಲಿ ಎದುರು ಕೂತವರು ಕಕ್ಕಾಬಿಕ್ಕಿಯಾಗುವಂತೆ ಮಾಡುವುದರಲ್ಲಿ ಇವರು ಎತ್ತಿದ ಕೈ. ಇಯವರ ವೈಯಕ್ತಿಕ ಜೀವನಕ್ಕೆ ಬರುವುದಾದರೆ 25-04-1985 ರಂದು ರಾಧಾ ಹಿರೇಗೌಡರ್ ಜನಿಸಿದ್ದು ತಮ್ಮ ಹುಟ್ಟೂರಿನಲ್ಲೇ ಶಾಲಾ ವಿದ್ಯಾಭ್ಯಾಸ ಮುಗಿಸಿ ಉನ್ನತ ವ್ಯಾಸಂಗಕ್ಕೆ ಬೆಂಗಳೂರಿಗೆ ಬಂದರು.ಆಗಲೇ ಅವರಿಗೆ ನಿಊಪಾಕಿ ಆಗಬೇಕೆಂಬ ಗುರಿ ಇತ್ತು.

ಶಾಲೆ ದಿನಗಳಿಂದಲೂ ಚರ್ಚಾ ಸ್ಪರ್ಧೆ,ಪ್ರಬಂಧ ಸ್ಪರ್ಧೆಗಳಲ್ಲಿ ಭಾಗವಹಿಸುತ್ತಿದ್ದರು.ಪತಿಯ ಹೆಸರು ನಾಗರಾಜ್.ಇವರಿಬ್ಬರಿಗೆ ಮಗ ಇದ್ದಾನೆ.ರಾಧಾ ಅತಿಹೆಚ್ಚು ಸಂಭಾವನೆ ಪಡೆಯುವ ವಾರ್ತಾ ನಿರೂಪಕಿ ಅನಿಸಿಕೊಂಡಿದ್ದಾರೆ. ಪಬ್ಲಿಕ್ ವಾಹಿನಿಯಲ್ಲಿರುವಾಗಲೇ ಇವರಿಗೆ ಸಾಕಷ್ಟು ಬೇಡಿಕೆ ಇತ್ತು.ಎಲ್ಲಾ ಸುದ್ದಿವಾಹಿನಿಗಳೂ ಈಕೆಗೆ ಕೆಲ್ಸದ ಅವಕಾಶ ನೀಡಿದ್ದವು.ಈಕೆ ಬಿಟಿವಿಯನ್ನು ಆರಿಸಿಕೊಂಡು ಪ್ರಮುಖ ನಿರೂಪಕಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.ನೋಡಲು ಯಾವುದೇ ಖ್ಯಾತ ನಟಿಗೂ ಕಡಿಮೆ ಇಲ್ಲದ ರೂಪ ಕೂಡ ಇವರ ಬೇಡಿಕೆಗೆ ಕಾರಣ ಅಂದರೆ ತಪ್ಪಾಗಲಾಗದು.

Leave a Reply

%d bloggers like this: