ಭಾರತದಲ್ಲೇ ಅತೀ ಹೆಚ್ಚು ತೆರಿಗೆ ಕಟ್ಟಿದ ನಟ ಅಕ್ಷಯ್ ಕುಮಾರ್, ಕಟ್ಟಿದ್ದು ಎಷ್ಟು ಕೋಟಿ ಗೊತ್ತೇ

ಅರೇ ಇದೇನಪ್ಪಾ ಸಾಮಾನ್ಯವಾಗಿ ಸಿನಿಮಾ ಸ್ಟಾರ್ ನಟ ನಟಿಯರನ್ನ ಅಥವಾ ಡೈರೆಕ್ಟರನ್ನ ಅವರ ಸಿನಿಮಾಗಳನ್ನ ನೋಡಿ ತುಂಬ ಅದ್ಭುತವಾಗಿ ಮಾಡಿದ್ರೇ ಶಿಳ್ಳೆ ಚಪ್ಪಾಳೆ ಹೊಡೆದು ಸಿನಿ ಪ್ರೇಕ್ಷಕರು ಶಬ್ಬಾಸ್ ಅಂತ ಹೇಳೋದನ್ನ ನಾವು ನೋಡಿದಿವಿ, ಕೇಳಿದ್ದೀವಿ. ಆದರೆ ಒಬ್ಬ ಸಿನಿಮಾ ಸ್ಟಾರನ್ನ ಆದಾಯ ತೆರಿಗೆ ಇಲಾಖೆ ಯಾಕೇ ಶಬ್ಬಾಸ್ ಅಂತ ಹೇಳಿದ್ದಾರೆ ಅಂತ ನಿಜಕ್ಕೂ ನಿಮಗೆ ಅಚ್ಚರಿ ಮತ್ತು ಗೊಂದಲವಾಗಬಹುದು. ಹೌದು ಈ ಸಿನಿಮಾ ನಟರು ಅಂದರೆ ಏನು ಸಾಮಾನ್ಯನ. ಇವರ ಗಳಿಸುವ ಆದಾಯ ಅಷ್ಟಿಷ್ಟಲ್ಲ. ಸಿನಿಮಾವೊಂದಕ್ಕೆ ಕೋಟಿ ಕೋಟಿ ಸಂಭಾವನೆ ಪಡೆಯುವ ನಮ್ಮ ಸಿನಿಮಾ ನಟರು ಸೂಕ್ತ ಸಮಯಕ್ಕೆ ತಕ್ಕಂತೆ ಸರ್ಕಾರಕ್ಕೆ ತಮ್ಮ ಆದಾಯ ತೆರಿಗೆಯನ್ನ ಕಟ್ಟುತ್ತಾರಾ, ಇಲ್ಲ ಈ ನಿಯಮವನ್ನು ಬಹುತೇಕ ನಟರು ಪಾಲಿಸುವುದಿಲ್ಲ. ಐಶಾರಾಮಿ ಕಾರು, ಹೊರ ದೇಶದಿಂದ ಖರೀದಿ ಮಾಡಿ ಭಾರತದಲ್ಲಿ ಓಡಾಡುವ ನಮ್ಮ ಸೆಲೆಬ್ರಿಟೀಸ್ ಅನೇಕ ಮಂದಿ ಇದ್ದಾರೆ.

ಆದರೆ ಅವರಲ್ಲಿ ಒಂದಷ್ಟು ಜನ ಇಂಪೋರ್ಟ್ ಕಾರಿಗೆ ಲೋಕಲ್ ಟ್ಯಾಕ್ಸ್ ಕಟ್ಟಿ ರುವುದಿಲ್ಲ. ಕಾರ್ ಟ್ಯಾಕ್ಸನ್ನೇ ಕಟ್ಟಲ್ಲ ಅಂದ್ಮೇಲೆ ಇನ್ನು ತಮ್ಮ ಆದಾಯ ತೆರಿಗೆ ಕಟ್ತಾರಾ ಅನ್ನೋ ಪ್ರಶ್ನೆ ಮೂಡುತ್ತದೆ. ಆದರೆ ಈ ಆದಾಯ ತೆರಿಗೆಯನ್ನ ಯಾವುದೇ ಕಾರಣಕ್ಕೂ ತಪ್ಪಿಸಿಕೊಳ್ಳದೇ ನಿಯಮಾನುಸಾರ ಕಟ್ಟಲೇಬೇಕು. ಅದರಂತೆ ಬಾಲಿವುಡ್ ಅತಿ ಹೆಚ್ಚು ಸಂಭಾವನೆ ಪಡೆಯುವ ನಟರಲ್ಲಿ ಶಾರುಖ್ ಖಾನ್, ಅಮೀರ್ ಖಾನ್, ಸಲ್ಮಾನ್ ಖಾನ್ ಅಂತೆಯೇ ಅಕ್ಷಯ್ ಕುಮಾರ್ ಕೂಡ ಒಬ್ಬರು. ಅಕ್ಷಯ್ ಕುಮಾರ್ ಅವರು ವರ್ಷಕ್ಕೆ ಹೆಚ್ಚು ಸಿನಿಮಾ ಮಾಡುವ ನಟ. ಅವರ ಸಿನಿಮಾಗಳು ಕೂಡ ಭರ್ಜರಿ ಕಲೆಕ್ಷನ್ ಮಾಡುತ್ತವೆ. ಅದರಂತೆ ಸಿನಿಮಾವೊಂದಕ್ಕೆ ಕೋಟಿ ಕೋಟಿ ಹಣವನ್ನ ಸಂಭಾವನೆಯಾಗಿ ಪಡೆದುಕೊಳ್ಳುತ್ತಾರೆ. ವಾರ್ಷಿಕವಾಗಿ ಅತಿ ಹೆಚ್ಚು ಹಣ ಗಳಿಸುವ ವಿಶ್ವ ನಟರ ಫೋರ್ಬ್ಸ್ ಪಟ್ಟಿಯಲ್ಲಿ ನಟ ಅಕ್ಷಯ್ ಕುಮಾರ್ ಅವರ ಹೆಸರು ಕೂಡ ಉಂಟು.

ತಮ್ಮ ಆದಾಯಕ್ಕೆ ತಕ್ಕಂತೆ ಕಳೆದ ಐದು ವರ್ಷಗಳಲ್ಲಿ ಎಲ್ಲಿಯೂ ಕೂಡ ತಪ್ಪದೇ ತಮ್ಮ ಆದಾಯ ತೆರಿಗೆಯನ್ನ ನಿಯಮಾನುಸಾರ ಪಾವತಿಸಿ ಆದಾಯ ತೆರಿಗೆಯಿಂದ ಅಕ್ಷಯ್ ಕುಮಾರ್ ಅವರು ಮೆಚ್ಚುಗೆ ಪಡೆದುಕೊಂಡಿದ್ದಾರೆ. ಸಿನಿಮಾವೊಂದಕ್ಕೆ 50 ರಿಂದ 100 ಕೋಟಿ ಸಂಭಾವನೆ ಪಡೆಯುವ ಅಕ್ಷಯ್ ಕುಮಾರ್ 2019ರಲ್ಲಿ ಅಕ್ಷಯ್ ಮೂವತ್ತು ಕೋಟಿ ಆದಾಯ ತೆರಿಗೆ ಕಟ್ಟಿದ್ದರಂತೆ. ಅದರಂತೆ ಈ ವಾರ್ಷಿಕ ಆದಾಯ ತೆರಿಗೆಯಲ್ಲಿ ಅರವತ್ತು ಕೋಟಿಯಷ್ಟು ಮೊತ್ತವನ್ನ ಕಟ್ಟಿದ್ದಾರೆ ಎಂದು ತಿಳಿದು ಬಂದಿದೆ. ಬಾಲಿವುಡ್ ನಟರ ಪೈಕಿ ಅತಿ ಹೆಚ್ಚು ಆದಾಯ ತೆರಿಗೆ ಪಾವಸಿದ ಹಿನ್ನೆಲೆಯಲ್ಲಿ ಆದಾಯ ತೆರಿಗೆ ಇಲಾಖೆ ಅಕ್ಷಯ್ ಕುಮಾರ್ ಅವರಿಗೆ ಪ್ರಶಂಸನಾ ಪತ್ರ ನೀಡಿ ಗೌರವಿಸಿದೆ. ತಮ್ಮ ಸಾಹಸ, ಸಿನಿಮಾ, ವ್ಯಕ್ತಿತ್ವ, ಜೀವನ ಶೈಲಿ ಮೂಲಕ ಅಪಾರ ಜನಪ್ರಿಯತೆ ಪಡೆದು ಸುದ್ದಿಯಾಗುತ್ತಿದ್ದ ಅಕ್ಷಯ್ ಕುಮಾರ್ ಇದೀಗ ಆದಾಯ ತೆರಿಗೆ ಇಲಾಖೆಯಿಂದ ಮೆಚ್ಚುಗೆ ಪಡೆದು ಬಿಟೌನ್ ನಲ್ಲಿ ಸುದ್ದಿಯಾಗಿದ್ದಾರೆ.