ಭಾರತದ ಹೊಸ ರಾಷ್ಟ್ರಪತಿ ಆದ ದ್ರೌಪದಿ ಮುರ್ಮು ಅವರ ತಿಂಗಳ ಸಂಬಳ ಎಷ್ಟು ಹಾಗೂ ಅವರಿಗೆ ಸಿಗುವ ಕಾರು ಯಾವುದು ಗೊತ್ತೇ

ಭಾರತದ ರಾಷ್ಟ್ರ ಪತಿಯಾಗಿ ಇದೇ ಮೊದಲ ಬಾರಿಗೆ ಬುಡಕಟ್ಟು ಸಮುದಾಯದ ಮಹಿಳೆಯೊಬ್ಬರು ಆಯ್ಕೆಯಾಗಿದ್ದಾರೆ. ಹೌದು ಈಗ ದೇಶದ ರಾಷ್ಟ್ರಪತಿಯಾಗಿ ದ್ರೌಪದಿ ಮುರ್ಮು ಅವರು ಆಯ್ಕೆಯಾಗಿದ್ದಾರೆ. ದ್ರೌಪದಿ ಮುರ್ಮು ಅವರು ಒಡಿಶಾದ ಉಪರ್ ಬೆಡಾ ಎಂಬ ಬುಡಕಟ್ಟು ಸಮುದಾಯದಲ್ಲಿ 1958 ಜೂನ್ 20ರಂದು ಜನಿಸುತ್ತಾರೆ. ಬುಡಕಟ್ಟು ಸಮುದಾಯದಲ್ಲಿ ಜನಿಸಿದರು ಕೂಡ ಶಿಕ್ಷಣದಿಂದ ವಂಚಿತರಾಗದೆ ಬಿ.ಎ.ಪದವಿ ಪಡೆಯುತ್ತಾರೆ. ಇನ್ನು ಈ ರಾಷ್ಟ್ರಪತಿ ಹುದ್ದೆಯ ಕಾರ್ಯ ಮತ್ತು ಅವರಿಗೆ ಸಿಗುವ ಸೌಲಭ್ಯ ಸೌಕರ್ಯಗಳು ಮತ್ತು ವೇತನ ಎಷ್ಟು ಎಂಬುದನ್ನ ತಿಳಿಯೋಣ. ರಾಮನಾಥ್ ಕೋವಿಂದ್ ಅವರ ಅಧಿಕಾರವಧಿಯು ಇದೇ ಜುಲೈ 24 ರಂದು ಮುಗಿಯಲಿದೆ. ದೇಶದ 15 ರಾಷ್ಟ್ರಪತಿ ಆಯ್ಕೆಗಾಗಿ ಈಗಾಗಲೇ ಸಂಸದರು, ಶಾಸಕರು ಮತ ಚಲಾಯಿಸಿದ್ದಾರೆ.

ಇನ್ನು ಈ ರಾಷ್ಟ್ರ ಪತಿ ಹುದ್ದೆಗೆ ಸೌಲಭ್ಯ ಸವಲತ್ತು ಎಷ್ಟು ಇದಿಯೋ ಅಷ್ಟೇ ಸವಾಲುಗಳು ಇದೆ. ರಾಷ್ಟ್ರಪತಿ ಹುದ್ದೆಗೆ ತಿಂಗಳಿಗೆ ಐದು ಲಕ್ಷ ರುಪಾಯಿ ವೇತನವಿದೆ. ಇದರ ಜೊತೆಗೆ ಸಂಪೂರ್ಣವಾಗಿ ಉಚಿತ ವೈದ್ಯಕೀಯ ಚಿಕಿತ್ಸೆ, ವಸತಿ ವ್ಯವಸ್ಥೆ ಇರುತ್ತದೆ. ಹೆಚ್ಚುವರಿಯಾಗಿ ರಾಷ್ಟ್ರಪತಿಗಳ ಜೀವನ ಸಂಗಾತಿ ಸಂಪೂರ್ಣ ಉಚಿತವಾಗಿ ಜಗತ್ತಿನ ಯಾವುದಾದರು ದೇಶಕ್ಕೆ ಪ್ರಯಾಣ ಹೋಗಬಹುದಾಗಿದೆ. ಭಾರತದ ರಾಷ್ಟ್ರಪತಿಗಳ ಅಧಿಕೃತ ನಿವಾಸ ಹೈದರಾಬಾದ್ ನ ಬೊಲಾರಮ್ ನಲ್ಲಿ ಇರುವ ರಾಷ್ಟ್ರಪತಿ ನಿಲಯಂ ಮತ್ತು ಶಿಮ್ಲಾದ ಛರಾಬ್ರಾದಲ್ಲಿರುವ ಕಟ್ಟಡ ಕೂಡ ರಾಷ್ಟ್ರಪತಿಗಳ ನಿವಾಸವಾಗಿರುತ್ತದೆ.

ರಾಷ್ಟ್ರ ಪತಿಯು ಪ್ರಧಾನಿ ನೇತೃತ್ವದ ಕೇಂದ್ರ ಸಚಿವ ಸಂಪುಟದ ಸಲಹೆಯ ಮೇರೆಗೆ ಯುದ್ದವನ್ನ ಘೋಷಣೆ ಮಾಡುವ ಮತ್ತು ಶಾಂತಿಯನ್ನ ಕಾಪಾಡುವ ನಿರ್ಧಾರ ತೆಗೆದುಕೊಳ್ಳುವ ಅಧಿಕಾರವನ್ನು ಹೊಂದಿರುತ್ತಾರೆ. ರಾಷ್ಟ್ರಪತಿಗಳ ಅಧಿಕಾರವಧಿಯಲ್ಲಿ ಅವರ ವಿರುದ್ದವಾಗಿ ಯಾವುದೇ ನ್ಯಾಯಾಲಯದಲ್ಲಿ ಕ್ರಿಮಿನಲ್ ಮೊಕದ್ದಮೆಗಳನ್ನ ಹೂಡಲಾಗುವುದಿಲ್ಲ. ಇನ್ನು ರಾಷ್ಟ್ರಪತಿ ಆಯ್ಕೆ ಮತ್ತು ಈ ಹುದ್ದೆಯ ಅರ್ಹತೆಗಳನ್ನ ನೋಡುವುದಾದರೆ ಭಾರತದ ಪ್ರಜೆಯಾಗಿದ್ದು, 35 ವರ್ಷ ಪೂರ್ಣಗೊಂಡಿರಬೇಕು.

ಲೋಕಸಭೆಯಲ್ಲಿ ಸದಸ್ಯರಾಗಲು ಅರ್ಹರಾಗಿರಬೇಕು. ಆಯ್ಕೆ ಪ್ರಕ್ರಿಯೆ ನೋಡುವುದಾದರೆ ಸಂಸತ್ತಿನ ಚುನಾಯಿತ ಸದಸ್ಯರನ್ನ ಒಳಗೊಂಡಿರುವ ಚುನಾವಣಾ ಸಂಸ್ಥೆಯ ಸದಸ್ಯರು ಮತ್ತು ದೆಹಲಿಯ ರಾಜಧಾನಿ ಪ್ರದೇಶ ಮತ್ತು ಪುದುಚೇರಿ ಕೇಂದ್ರಾಡಳಿತ ಪ್ರದೇಶವನ್ನ ಒಳಗೊಂಡಂತೆ ಎಲ್ಲಾ ರಾಜ್ಯ ವಿಧಾನಸಭೆ ಸದಸ್ಯರು ಅಧ್ಯಕ್ಷರನ್ನ ಆಯ್ಕೆ ಮಾಡುವ ಪ್ರಕ್ರಿಯೆಯಲ್ಲಿ ಭಾಗವಹಿಸುತ್ತಾರೆ. ರಾಷ್ಟ್ರಪತಿ ಭವನ 340 ಕೋಣೆಗಳನ್ನ ಹೊಂದಿದ್ದು, ಬರೋಬ್ಬರಿ 320 ಎಕರೆಯಷ್ಟು ಈ ರಾಷ್ಟ್ರಪತಿ ಭವನ ವ್ಯಾಪ್ತಿಯೊನ್ನೊಂದಿದೆ. ಇವರಿಗೆ ಓಡಾಡುವುದಕ್ಕೆ ಮರ್ಸಿಡೀಸ್ ಮೆಬೆಕ್ ಎಸ್ ಕಾರ್ ಇರಲಿದೆ. ಭದ್ರತೆಗಾಗಿ ದಿ ಪ್ರೆಸಿಡೆಂಟ್ಸ್ ಬಾಡಿಗಾರ್ಡ್ ಇರಲಿದ್ದಾರೆ.