ಬೆಂಗಳೂರು ಯುವಕನಿಂದ ದುಬಾರಿ ಕಾರುಗಳು, ಗಿಫ್ಟ್ ಗಳನ್ನು ಪಡೆದ ರಕ್ಕಮ್ಮನಿಗೆ ಈಗ ಸಂಕಷ್ಟ

ವಿಕ್ರಾಂತ್ ರೋಣ ಚಿತ್ರದ ಬೆಡಗಿ ಕಂಬಿ ಹಿಂದೆ ಬೀಳ್ತಾರಾ ಅನ್ನೋ ಪ್ರಶ್ನೆ ಇದೀಗ ಎದುರಾಗಿದೆ. ಅದಕ್ಕೆ ಏನಪ್ಪಾ ಕಾರಣ ಅಂದ್ರೆ ಬಹುಕೋಟಿ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಜೈಲು ಪಾಲಾಗಿರೋ ಸುಕೇಶ್ ಚಂದ್ರಶೇಖರ್ ಅವರಿಂದ ಜಾಕ್ವೇಲಿನ್ ಫರ್ನಾಂಡೀಸ್ ಕೋಟಿ ಕೋಟಿ ಬೆಲೆಯ ಉಡುಗೊರೆ ಪಡೆದು ಇದೀಗ ಸಂಕಷ್ಟಕ್ಕೀಡಾಗಿದ್ದಾರೆ. ಹೌದು ನಟಿ ಜಾಕ್ವೇಲಿನ್ ಫರ್ನಾಂಡೀಸ್ ಅವರು ಕಿಚ್ಚ ಸುದೀಪ್ ಅವರ ಪ್ಯಾನ್ ಇಂಡಿಯಾ ಸಿನಿಮಾ ವಿಕ್ರಾಂಚ್ ರೋಣ ಚಿತ್ರದಲ್ಲಿ ರಾರಾ ರಕ್ಕಮ್ಮ ಎಂಬ ಹಾಡಿನಲ್ಲಿ ಸಖತ್ ಬೋಲ್ಡ್ ಆಗಿ ಹೆಜ್ಜೆ ಹಾಕೋ ಮೂಲಕ ಭಾರತೀಯ ಚಿತ್ರರಂಗದಲ್ಲಿ ಭಾರಿ ಜನಪ್ರಿಯತೆ ಗಳಿಸಿ ಇಂಡಿಯನ್ ಸಿನಿಮಾ ಇಂಡಸ್ಟ್ರಿಯಲ್ಲಿ ಹಾಟ್ ಟಾಪಿಕ್ ನಲ್ಲಿದ್ದರು.

ಆದ್ರೇ ಇದೀಗ ದುಬಾರಿ ಗಿಫ್ಟ್ ಪಡೆದು ಜೈಲಿಗೆ ಹೋಗೋ ಪರಿಸ್ಥಿತಿ ಎದುರಿಸುತ್ತಿದ್ದಾರೆ. ಬೆಂಗಳೂರು ಮೂಲದವರಾಗಿರೋ ಸುಕೇಶ್ ಚಂದ್ರಶೇಖರ್ ಫೋರ್ಟಿಸ್ ಹೆಲ್ತ್ ಕೇರ್ ಮಾಜಿ ಪ್ರವರ್ತಕ ಶಿವಿಂದರ್ ಮೋಹನ್ ಸಿಂಗ್ ಪತ್ನಿ ಅದಿತಿ ಸಿಂಗ್ ಸೇರಿದಂತೆ ಒಂದಷ್ಟು ಆಗರ್ಭ ಶ್ರೀಮಂತ ವ್ಯಕ್ತಿಗಳಿಗೆ ಕೋಟ್ಯಾಂತರ ರೂಗಳನ್ನ ವಂಚನೆ ಮಾಡಿರೋ ಆರೋಪ ಸೇರಿದಂತೆ ಹತ್ತಕ್ಕೂ ಹೆಚ್ಚು ಪ್ರಕರಣ ಎದುರಿಸುತ್ತಾ ದೆಹಲಿಯ ಕಾರಾಗೃಹ ಸೇರಿದ್ದಾರೆ. ಜೈಲಿನಲ್ಲಿರೋ ಸುಕೇಶ್ ಚಂದ್ರಶೇಖರನಿಂದ ನಟಿ ಜಾಕ್ವೇಲಿನ್ ಫರ್ನಾಂಡೀಸ್ ಉಡುಗೊರೆ ಪಡೆದಿರೋ ಉಡುಗೊರೆ ತಿಳಿದ್ರೇ ನಿಜಕ್ಕೂ ಕೂಡ ಅಚ್ಚರಿ ಆಗುತ್ತೆ. ಸುಕೇಶ್ ಚಂದ್ರಶೇಖರ್ ನಿಂದ ಜಾಕ್ವೇಲಿನ್ ಫರ್ನಾಂಡೀಸ್ ಬರೋಬ್ಬರಿ ಎರಡೂವರೆ ಕೋಟಿ ಮೌಲ್ಯದ ಮೂರು ಕಾರುಗಳು.

ಮೊಬೈಲ್ ಫೋನ್ಸ್ ಜೊತೆಗೆ ನಾಲ್ಕು ಪರ್ಶಿಯನ್ ಬೆಕ್ಕುಗಳು, ಗುಸ್ಸಿ ಅಂಡ್ ಶೆನಲ್ ನಿಂದಿಚ್ಚ ಡಿಸೈನರ್ ಬ್ಯಾಗ್ ಗಳು ಮತ್ತು ಒಂದು ಜೋಡಿ ಲೂಯಿ ವಿಟಾನ್ ಶೂಗಳು ಸೇರಿದಂತೆ ಐಷಾರಾಮಿ ದುಬಾರಿ ಬೆಲೆಯ ಉಡುಗೊರೆಗಳನ್ನ ಪಡೆದುಕೊಂಡಿದ್ದರು. ಇದೇ ಕಳೆದ ಆಗಸ್ಟ್ 17ರಂದು ಅಕ್ರಮ ಬಹುಕೋಟಿ ವರ್ಗಾವಣೆಯಲ್ಲಿ ಸುಕೇಶನನ್ನ ಅರೆಸ್ಟ್ ಮಾಡಿ ವಿಚಾರಣೆ ನಡೆಸಿದಾಗ ಜಾಕ್ವೇಲಿನ್ ಅವರಿಗೆ ನೀಡಿದ ದುಬಾರಿ ಗಿಫ್ಟ್ ಗಳ ಮಾಹಿತಿ ಹೊರ ಬಿದ್ದಿತು. ಇದರ ಹಿನ್ನೆಲೆಯಲ್ಲಿ ನಟಿ ಜಾಕ್ವೇಲಿನ್ ಅವರಿಗೆ ಸಮನ್ಸ್ ಜಾರಿ ಮೂರು ಹಂತದಲ್ಲಿ ಆರ್ಥಿಕ ಅಪರಾಧ ವಿಭಾಗದ ಅಧಿಕಾರಿಗಳು ರಕ್ಕಮ್ಮಳಿಗೆ ವಿಚಾರಣೆ ಮಾಡಿದ್ದಾರೆ. ಇದೀಗ ನಟಿ ಜಾಕ್ವೇಲಿನ್ ಫರ್ನಾಂಡೀಸ್ ಅವರಿಗೆ ದುಬಾರಿ ಗಿಫ್ಟ್ ಪಡೆದದ್ದೇ ಸಂಕಷ್ಟಕ್ಕೆ ಸಿಲುಕಲು ಕಾರಣವಾಗಿದೆ.

Leave a Reply

%d bloggers like this: