ಬೆಂಗಳೂರು ಮಳೆ ಅವಾಂತರ, ರಾಜಕಾರಣಿಗಳ ಬಗ್ಗೆ ಹೀಗೆ ಕಿಡಿಕಾರಿದ ನಟಿ ರಮ್ಯಾ ಅವರು

ಸ್ಯಾಂಡಲ್ ವುಡ್ ಪದ್ಮಾವತಿ ನಟಿ ರಮ್ಯಾ ಅವರು ಮಳೆ ನೀರಿನಿಂದ ಸಿಲಿಕಾನ್ ಸಿಟಿ ಬೆಂಗ್ಳೂರು ರಸ್ತೆಗಳು ಜಲಾವೃತಗೊಂಡಿರೋ ಬಗ್ಗೆ ರಾಜಕಾರಣಿಗಳ ವಿರುದ್ದ ಕಿಡಿ ಕಾರಿದ್ದಾರೆ. ಹೌದು ಇತ್ತೀಚೆಗೆ ಕೆಲವು ದಿನಗಳಿಂದ ನಿರಂತರವಾಗಿ ಸುರಿಯುತ್ತಿರೋ ಮಳೆಯಿಂದಾಗಿ ಗಾರ್ಡನ್ ಸಿಟಿ ಬೆಂಗ್ಳೂರಿನ ಪ್ರತಿಷ್ಟಿತ ಏರಿಯಾಗಳ ರಸ್ತೆಗಳೆಲ್ಲಾ ಕೆರೆಗಳಂತಾಗಿವೆ. ಮಳೆ ನೀರು ರಸ್ತೆ ತುಂಬಿ ಹರಿದು ಜನ ಸಾಮಾನ್ಯರು ಪರಪಾಡದ ಕಷ್ಟ ಅನುಭವಿಸುತ್ತಿದ್ದಾರೆ. ಹೀಗಿರೋವಾಗ ಅತ್ತ ಬೆಂಗಳೂರು ದಕ್ಷಿಣ ಕ್ಷೇತ್ರದ ಲೋಕಸಭಾ ಸದ್ಯಸ್ಯರಾದ ತೇಜಸ್ವಿ ಸೂರ್ಯ ಅವರು ಹೋಟೆಲ್ ವೊಂದರಲ್ಲಿ ದೋಸೆ ಸವಿಯುತ್ತಾ ವೀಡಿಯೋ ಮಾಡಿ ಹಾಕಿದ್ದಾರೆ. ಈ ವೀಡಿಯೋವನ್ನ ರಮ್ಯಾ ಅವರು ಟ್ಯಾಗ್ ಮಾಡಿ ಟೀಕೆ ಮಾಡಿದ್ದಾರೆ. ಅಷ್ಟೇ ಅಲ್ಲದೇ ಶಾಸಕರಾಗೋಕೆ ರಿಯಲ್ ಎಸ್ಟೇಟ್ ಉದ್ಯಮಿಗಳೇ ಬೇಕೇ ಎಂದು ಭೂ ಮಾಫಿಯಾ ಒತ್ತುವರಿದಾರರ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ದುಡ್ಡು ಇರೋ ಜನ್ರಿಗೆ ಯಾಕಾಗಿ ಎಂ.ಪಿ.ಎಂ.ಎಲ್.ಎ ಟಿಕೆಟ್ ನೀಡಲಾಗ್ತದೆ. ಚುನಾವಣಾ ಆಯೋಗ ನೀತಿಯ ಪ್ರಕಾರ ಒಬ್ಬ ಶಾಸಕ ಎಲೆಕ್ಷನ್ ನಲ್ಲಿ ನಲವತ್ತು ಲಕ್ಷ ರೂ. ಮಾತ್ರ ಖರ್ಚು ಮಾಡಲಿಕ್ಕೆ ಅವಕಾಶ ಇದೆ. ಆದರೆ ಇಲ್ಲಿ ಕೋಟಿ ಕೋಟಿ ಚೆಲ್ಲಿ ಎಲೆಕ್ಷನ್ ಗೆದ್ದು, ಲೂಟಿ ಮಾಡ್ತಾರೆ. ಅದರ ಪರಿಣಾಮವೇ ಇಂದು ನಾವು ನೀವು ಅನುಭವಿಸುತ್ತಿರೋದು ಅಂತೇಳಿದ್ದಾರೆ. ಅಷ್ಟೇ ಅಲ್ಲದೇ ಇನ್ನು ಮುಂದುವರಿದು ರಮ್ಯಾ ಅವರು ಇಂದು ನಮ್ಮ ಎಂ.ಎಲ್.ಎ ಎಂಪಿ ಗಳು ಎಷ್ಟು ಜನ ರಿಯಲ್ ಎಸ್ಟೇಟ್ ಉದ್ಯಮ ಮಾಡುತ್ತಿದ್ದಾರೆ ನಿಮಗೆ ಗೊತ್ತೇ ಯಾರೋ ಹೇಳಿದ್ರು ಇರೋ 28 ಎಂ.ಎಲ್.ಎ.ಗಳ ಪೈಕಿ 26 ಮಂದಿ ರಿಯಲ್ ಎಸ್ಟೇಟ್ ಉದ್ಯಮವನ್ನ ನಡೆಸುತ್ತಿದ್ದಾರೆಂದು. ನನಗೆ ಈ ಸಂಖ್ಯೆ ಕೇಳಿ ನಿಜಕ್ಕೂ ಕೂಡ ಒಮ್ಮೆಲೆ ದಿಗ್ಭ್ರಮೆ ಆಯ್ತು ಅಂತ ಟ್ವೀಟ್ ಮಾಡಿ ನಗರದಲ್ಲಿ ಮಳೆ ನೀರಿನಿಂದ ಆಗಿರೋ ಅವ್ಯವಸ್ಥೆಯ ಕುರಿತು ಭ್ರಷ್ಟ ಜನಪ್ರತಿನಿಧಿಗಳ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ದಾರೆ. ರಮ್ಯಾ ಅವರ ಈ ಟ್ವೀಟ್ ರಾಜಕೀಯ ರಂಗದಲ್ಲಿ ಗಮನ ಸೆಳೆದಿದೆ.

Leave a Reply

%d bloggers like this: