ಬೆಂಗಳೂರಿನಲ್ಲಿ ‘ದೊನ್ನೆ ಬಿರಿಯಾನಿ ಪ್ಯಾಲೇಸ್’ ಹೋಟೆಲ್ ತೆರೆದ ಖ್ಯಾತ ನಟ

ಚಿತ್ರರಂಗದ ಹಾಗೂ ಕಿರುತೆರೆಯ ಅನೇಕ ಕಲಾವಿದರು ಬೇರೆ ಉದ್ಯಮವನ್ನೂ ಮಾಡಿಕೊಂಡದ್ದನ್ನ ನಾವು ಕೇಳೇ ಇರುತ್ತೇವೆ.ಇದೀಗ ಮತ್ತೊಬ್ಬ ಸಿನಿಮಾ-ಕಿರುತೆರೆ ನಟ ಚಂದನ್ ಕುಮಾರ್ ಹೋಟೆಲ್ ಉದ್ಯಮವನ್ನು ಪ್ರಾರಂಭಿಸಿದ್ದಾರೆ.ಹೌದು,ಚಂದನ್ ಪ್ರಾರಂಭಿಸಿರುವುದು ಮಾಮೂಲಿ ಹೋಟೆಲ್ ಅಲ್ಲ ಅಪ್ಪಟ ನಾಟಿ ಶೈಲಿಯ ‘ದೊನ್ನೆ ಬಿರಿಯಾನಿ ಮನೆ’. ಈ ಹೋಟೆಲ್ ಎಲ್ಲಿದೆ ಅಂದ್ರೆ ಬೆಂಗಳೂರಿನ ಸಹಕಾರ ನಗರದಲ್ಲಿ ಇದೆ.ಇತ್ತೀಚೆಗೆ ಸೆಂಚುರಿ ಸ್ಟಾರ್ ಶಿವಣ್ಣ ಚಂದನ್ ಅವರ ಹೋಟೆಲ್ ಅನ್ನು ಉದ್ಘಾಟನೆ ಮಾಡಿ ಹರಸಿದರು.ಇನ್ನು ಚಂದನ್ ರನ್ನರ್ ಅಪ್ ಆಗಿದ್ದ ಬಿಗ್ ಬಾಸ್ ಮೂರನೇ ಆವೃತ್ತಿಯ ವಿನ್ನರ್ ಆಗಿದ್ದ ಹಿರಿಯ ನಟಿ ಶೃತಿ ಕೂಡ ಇನ್ಸ್ಟಾಗ್ರಾಮ್ ನಲ್ಲಿ ಚಂದನ್ ರನ್ನು ಟ್ಯಾಗ್ ಮಾಡಿ ಶುಭ ಹಾರೈಸಿದ್ದಾರೆ.
ಚಂದನ್ ಕುಮಾರ್ ಲಕ್ಷ್ಮೀ ಬಾರಮ್ಮ ಧಾರಾವಾಹಿಯ ಮೂಲಕ ಮನೆ ಮಾತಾಗಿ ಇಂದ್ರಜಿತ್ ಲಂಕೇಶ್ ಅವರ ‘ಲವ್ ಯೂ ಆಲಿಯಾ’ ಚಿತ್ರದ ಮೂಲಕ ಬೆಳ್ಳಿ ತೆರೆಯಲ್ಲಿ ಮಿಂಚಿ ನಂತರ ಬಿಗ್ ಬಾಸ್ ರನ್ನರ್ ಅಪ್ ಆದರು.ನಂತರ ಅರ್ಜುನ್ ಸರ್ಜಾ ನಿರ್ಮಾಣದ ‘ಪ್ರೇಮ ಬರಹ’ ಚಿತ್ರದಲ್ಲಿ ಮಿಂಚಿದ್ದರು.ಅದೇ ಲಕ್ಷ್ಮೀ ಬಾರಮ್ಮ ಧಾರಾವಾಹಿಯ ಶೈನ್ ಶೆಟ್ಟಿ ಕೂಡ ಹೋಟೆಲ್ ಉದ್ಯಮಕ್ಕೆ ಇಳಿದಿದ್ದರು.ಇದೀಗ ಅದೇ ಧಾರಾವಾಹಿಯ ಚಂದನ್ ಕೂಡ ಹೋಟೆಲ್ ಶುರುಮಾಡಿರುವುದು ಸಂತಸದ ವಿಷಯ.ಇಬ್ಬರಿಗೂ ಶುಭವಾಗಲಿ ಎಂದು ಹಾರೈಸೋಣ.