ಬೆಂಗಳೂರಿನಲ್ಲಿ ಎಬಿ ಡಿವಿಲಿಯರ್ಸ್ ರಸ್ತೆ! ಯಾವ ಏರಿಯಾದಲ್ಲಿ ಗೊತ್ತಾ

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಸ್ಟಾರ್ ಆಟಗಾರನ ಹೆಸರಿನಲ್ಲಿ ಟ್ವಿಟರ್ ನಲ್ಲಿ ಹೊಸದೊಂದು ಅಭಿಯಾನ ಶುರುವಾಗಿದೆ. ಹೌದು ಭಾರತ ದೇಶದ ಸ್ವದೇಶಿ ಪ್ರತಿಷ್ಟಿತ ಕ್ರಿಕೆಟ್ ಆಗಿರುವಂತಹ ಇಂಡಿಯನ್ ಪ್ರೀಮಿಯರ್ ಲೀಗ್ ಕ್ರಿಕೆಟ್ ಅಂದಾಕ್ಷಣ ಯುವಜನರಲ್ಲಿ ಅದೊಂದು ಕ್ರೇಜ಼್ ಉಂಟಾಗುತ್ತದೆ.ಇಂಡಿಯನ್ ಪ್ರೀಮಿಯರ್ ಲೀಗ್ ಕ್ರಿಕೆಟ್ ಕೂಡ ಯಾವುದೇ ಅಂತರಾಷ್ಟ್ರೀಯ ಕ್ರಿಕೆಟ್ ಗಳಿಗೂ ಕೂಡ ಕಡಿಮೆ ಇಲ್ಲದಂತೆ ಅದ್ಭುತವಾಗಿ ನಡೆಸಲಾಗುತ್ತದೆ.ಪ್ರಮುಖ ವಾಗಿ ಮುಂಬೈ ಇಂಡಿಯನ್ಸ್, ಚೆನ್ನೈ ಸೂಪರ್ ಕಿಂಗ್ಸ್ , ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಕೊಲ್ಕತ್ತಾ ನೈಟ್ ರೈಡರ್ಸ್ ಈ ನಾಲ್ಕು ಫ್ರಾಂಚೈಸಿಗಳು ಐಪಿಎರ್ ಕ್ರಿಕೆಟ್ ಆರಂಭವಾದಾಗಿನಿಂದ ಅಂತ್ಯದ ವರೆಗೆ ಬಾರಿ ಸುದ್ದಿಯಲ್ಲಿರುತ್ತದೆ. ಅದರಲ್ಲೂ ಮುಖ್ಯವಾಗಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಪ್ರತೀ ಬಾರಿ ಗೆಲುವ ಅಂತಿಮ ಘಟ್ಟಕ್ಕೆ ಹೋಗಿ ಕೈ ಚೆಲ್ಲುತ್ತದೆ.

ಈಗಾಗಲೇ 14 ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಕ್ರಿಕೆಟ್ ಎರಡನೇ ಹಂತದ ಪಂದ್ಯಗಳು ದುಬೈನಲ್ಲಿ ನಡೆಯುತ್ತಿವೆ.ಇದೀಗ ಸುದ್ದಿ ಆಗಿರುವ ವಿಚಾರ ಏನಪ್ಪಾ ಅಂದರೆ ರಾಯಲ್ ಚಾಲೇಂಜರ್ಸ್ ಬೆಂಗಳೂರು ತಂಡದ ಆಪತ್ಭಾಂಧವ ಆಟಗಾರ ಎಂದೇ ಹೆಸರಾದ ದಕ್ಷಿಣ ಆಫ್ರಿಕಾ ಕ್ರಿಕೆಟಿಗ ಎ.ಬಿ.ಡಿವಿಲಯರ್ಸ್ ಅವರ ಹೆಸರನ್ನು ಉದ್ಯಾನ ನಗರಿ ರಾಜ್ಯದ ರಾಜಧಾನಿ ಬೆಂಗಳೂರು ಮಹಾನಗರದ ರಸ್ತೆಯೊಂದಕ್ಕೆ ನಾಮಕರಣ ಮಾಡಿ ಎಂಬ ಅಭಿಯಾನ ಒಂದು ಟ್ವಿಟ್ಟರ್ ನಲ್ಲಿ ಸಖತ್ ಸೌಂಡ್ ಮಾಡುತ್ತಿದೆ.ಈ ಅಭಿಯಾನಕ್ಕೆ ಎಬಿ.ಡಿವಿಲಿಯರ್ಸ್ ಅವರ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದು,ಅಭಿಯಾನದಲ್ಲಿ ತೊಡಗಿಸಿಕೊಂಡಿದ್ದಾರೆ.ಸದ್ಯಕ್ಕೆ ಈ ಅಭಿಯಾನ ಟ್ವಿಟ್ಟರ್ ನಲ್ಲಿ ಟ್ರೆಂಡ್ ಆಗಿ ಮಾರ್ಪಟ್ಟಿದ್ದು,ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.ಈ ಬಗ್ಗೆ ಮುಖ್ಯಮಂತ್ರಿಗಳ ಸಾಮಾಜಿಕ ಜಾಲತಾಣಗಳ ಖಾತೆಯನ್ನ ಟ್ಯಾಗ್ ಮಾಡಲಾಗುತ್ತಿದೆ.

Leave a Reply

%d bloggers like this: