ಸ್ಯಾಂಡಲ್ ವುಡ್ ಬೆಲ್ ಬಾಟಮ್ ಬೆಡಗಿ ಬಾಯ್ ಫ್ರೆಂಡ್ ಯಾರು ಗೊತ್ತಾ, ಮೊದಲ ಬಾರಿ ನೋಡಿ

ಸ್ಯಾಂಡಲ್ ವುಡ್ ಬೆಲ್ ಬಾಟಮ್ ಬೆಡಗಿ ಬಾಯ್ ಫ್ರೆಂಡ್ ಇವರೇನಾ ಎಂಬ ಪ್ರಶ್ನೆ ಹುಟ್ಟುಹಾಕಿದೆ ಈ ಒಂದು ಫೋಟೋ. ಹೌದು ಸ್ಯಾಂಡಲ್ ವುಡ್ ನ ಅನೇಕ ನಟಿಯರು ಇನ್ನು ಕೂಡ ಮದುವೆ ಆಗಿಲ್ಲ.ಅವರು ರಿಲೇಶನ್ ಶಿಪ್ ಅಲ್ಲಿದ್ದಾರೋ ಇಲ್ಲವೊ ಅದು ಗೊತ್ತಾಗುವುದಿಲ್ಲ.ತಮ್ಮ ಸಿನಿಮಾಗಳ ಬಗ್ಗೆ ಮಾಹಿತಿ ಹಂಚಿಕೊಳ್ಳುವ ಬಹುತೇಕ ಸ್ಟಾರ್ಸ್ ತಮ್ಮ ವೈಯಕ್ತಿಕ ಬದುಕಿನ ಬಗ್ಗೆ ಮಾತ್ರ ಎಲ್ಲೂ ಕೂಡ ಮುಕ್ತವಾಗಿ ಮಾತನಾಡುವುದಿಲ್ಲ. ತಮ್ಮ ಪರ್ಸನಲ್ ವಿಚಾರಗಳನ್ನು ಆದಷ್ಟು ಗೌಪ್ಯವಾಗಿ ಕಾಪಾಡಿಕೊಂಡು ಬರುವ ಈ ಸ್ಟಾರ್ಸ್ ಕೆಲವೊಮ್ಮೆ ತಮ್ಮ ಸೋಶಿಯಲ್ ಮೀಡಿಯಾ ಖಾತೆಗಳಲ್ಲಿ ಪೋಸ್ಟ್ ಮಾಡುವ ಫೋಟೋಗಳು ಕೆಲವು ಪ್ರಶ್ನೆ ಮೂಡುವುದಕ್ಕೆ ಕಾರಣವಾಗುತ್ತವೆ.ಅದರಂತೆ ಇದೀಗ ಕೆಲವು ಫೋಟೋಗಳ ಮೂಲಕ ಸುದ್ದಿಯಾಗಿರುವುದು ಕನ್ನಡದ ಬಹು ಬೇಡಿಕೆಯ ನಟಿಯಾಗಿರುವ ಸುಪ್ರಸಿದ್ದ ನಟಿ ಹರಿಪ್ರಿಯಾ. ನಟಿ ಹರಿಪ್ರಿಯ ಸಾಲು ಸಾಲು ಸೂಪರ್ ಹಿಟ್ ಸಿನಿಮಾಗಳನ್ನು ನೀಡುವ ಮೂಲಕ ಸದ್ಯದ ಮಟ್ಟಿಗೆ ಸ್ಯಾಂಡಲ್ ವುಡ್ ನ ಬೇಡಿಕೆಯ ನಟಿಯಾಗಿ ಗುರುತಿಸಿಕೊಂಡಿದ್ದಾರೆ.

ಮನಸುಗಳ ಮಾತು ಮಧುರ ಎಂಬ ಚಿತ್ರದ ಮೂಲಕ ನಾಯಕಿಯಾಗಿ ಸ್ಯಾಂಡಲ್ ವುಡ್ ಎಂಟ್ರಿ ಪಡೆದ ಹರಿಪ್ರಿಯಾ ಉಗ್ರಂ,ರನ್ನ,ಅಂಜನಿಪುತ್ರ,ಭರ್ಜರಿ,ಬೆಲ್ ಬಾಟಮ್,ನೀರ್ ದೋಸೆ ಅಂತಹ ಸೂಪರ್ ಹಿಟ್ ಸಿನಿಮಾಗಳವರೆಗೆ ಕನ್ನಡದ ಸ್ಟಾರ್ ನಟರಾದ ಕಿಚ್ಚ ಸುದೀಪ್,ಧೃವಸರ್ಜಾ,ಶ್ರೀ ಮುರುಳಿ,ಪುನೀತ್ ರಾಜ್ ಕುಮಾರ್,ಜಗ್ಗೇಶ್,ರಕ್ಷಿತ್ ಶೆಟ್ಟಿ ರಿಷಭ್ ಶೆಟ್ಟಿ ಸೇರಿದಂತೆ ಅನೇಕ ನಟರ ಜೊತೆ ನಟಿಸಿ ಸೈ ಎನಿಸಿಕೊಂಡಿದ್ದಾರೆ. ನಟಿ ಹರಿಪ್ರಿಯಾ ಸಾಕಷ್ಟು ಸಿನಿಮಾಗಳಲ್ಲಿ ಬಿಝಿ಼ಯಾಗಿರವುದರ ನಡುವೆ ಸೋಶಿಯಲ್ ಮೀಡಿಯಾದಲ್ಲಿಯೂ ಕೂಡ ಸಖತ್ ಆಕ್ಟಿವ್ ಆಗಿದ್ದಾರೆ. ಇನ್ಸ್ಟಾದಲ್ಲಿ ಅರವತ್ತು ಲಕ್ಷಕ್ಕೂ ಅಧಿಕ ಫಾಲೋವರ್ಸ್ ಹೊಂದಿರುವ ನಟಿ ಹರಿಪ್ರಿಯಾ ಆಗಾಗ ಒಂದಷ್ಟು ರೀಲ್ಸ್ ಮೂಲಕ ವೀಡಿಯೊಗಳನ್ನು ಮಾಡಿ ಹಾಕುತ್ತಿರುತ್ತಾರೆ.

ಜೊತೆಗೆ ತಮ್ಮ ಫೋಟೋಗಳನ್ನು ಕೂಡ ಹಂಚಿಕೊಳ್ಳುವಂತೆ ಇತ್ತೀಚೆಗೆ ಹರಿಪ್ರಿಯಾ 2021 ರ ಹೊಸ ವರ್ಷದ ಕೇಕ್ ಮುಂಭಾಗ ಕುಳಿತಿರುವ ಫೋಟೋವೊಂದನ್ನ ಶೇರ್ ಮಾಡಿದ್ದರು. ಈ ಫೋಟೋದಲ್ಲಿ ಹರಿಪ್ರಿಯಾ ಜೊತೆಗೆ ಒಬ್ಬ ಕನ್ನಡದ ಖ್ಯಾತ ನಟ ಕೂಡ ಇದ್ದರು.ಈ ಫೋಟೋ ಗಾಂಧಿನಗರ ಮತ್ತು ಸೋಶಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗಿತ್ತು.ಹರಿಪ್ರಿಯಾ ಅವರ ಜೊತೆಗಿದ್ದ ನಟನೇ ಅವರ ಬಾಯ್ ಫ್ರೆಂಡ್ ಎಂದು ಒಂದಷ್ಟು ಮಂದಿ ಹೇಳುತ್ತಿದ್ದರು.ಅಷ್ಟಕ್ಕೂ ನಟಿ ಹರಿಪ್ರಿಯಾ ಜೊತೆಯಿದ್ದ ನಟ ಬೇರಾರು ಅಲ್ಲ.ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿದ್ದ ಜನಪ್ರಿಯ ಧಾರಾವಾಹಿ ನನ್ನರಸಿ ರಾಧೆ ಸೀರಿಯಲ್ ಯಲ್ಲಿ ಅಗಸ್ತ್ಯ ರಾಥೋಡ್ ಪಾತ್ರದ ಖ್ಯಾತಿಯ ನಟ ಅಭಿನವ್ ವಿಶ್ವನಾಥನ್.ಈ ಫೋಟೋ ಬಗ್ಗೆ ಹರಿಪ್ರಿಯಾರ ಅಭಿಮಾನಿಗಳು ಇವರು ನಿಮ್ಮ ಬಾಯ್ ಫ್ರೆಂಡಾ ಎಂದು ಪ್ರಶ್ನೆ ಮಾಡಿದ್ದಾರೆ.ಆದರೆ ಈ ಬಗ್ಗೆ ನಟ ಅಭಿನವ್ ಆಗಲೀ,ಹರಿಪ್ರಿಯಾರಾಗಲೀ ಯಾವುದೇ ಸ್ಪಷ್ಟನೆ ನೀಡಿಲ್ಲ.