ಬೀದಿನಾಯಿಗಳ ಸಂಖ್ಯೆ ತಗ್ಗಿಸಲು 15 ಕೋಟಿ ಖರ್ಚ್ ಮಾಡಿದ BBMP.. ಆದರೆ ಆಗಿದ್ದೇನು ಗೊತ್ತಾ?

ರಸ್ತೆ ಶ್ವಾನಗಳ ಸಂಖ್ಯೆಯನ್ನ ತಗ್ಗಿಸಲು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಏನು ಮಾಡಿದೆ ಗೊತ್ತೇ..! ನಿಯತ್ತು ಎಂಬ ಪರ್ಯಾಯ ಪದಕ್ಕೆ ಈ ಶ್ವಾನವನ್ನು ಉದಾಹರಣೆಯಾಗಿ ನೀಡುತ್ತಾರೆ. ಇಂದು ನಗರ ಇರಲಿ ಗ್ರಾಮೀಣ ಪ್ರದೇಶಗಳಲ್ಲಿ ಕೂಡ ಅನೇಕರು ನಾಯಿಗಳನ್ನ ಸಾಕುತ್ತಿದ್ದಾರೆ. ಕೆಲವರು ಇದನ್ನ ಪ್ರವೃತ್ತಿಯಾಗಿಸಿಕೊಂಡು ಆದಾಯದ ಒಂದು ಮೂಲವಾಗಿ ಕೂಡ ಮಾಡಿಕೊಂಡಿದ್ದಾರೆ. ಆದರೆ ಇದು ಪಾಶ್ಚಾತ್ಯ ತಳಿಗಳ ನಾಯಿಗಳ ಸ್ಥಿತಿ ಗತಿಯಾಗಿದೆ. ಆದರೆ ರಾಜಧಾನಿ ಬೆಂಗಳೂರು ಬೀದಿ ನಾಯಿಗಳ ಪರಿಸ್ಥಿತಿಯೇ ಬೇರೆ ಆಗಿದೆ. ಅದರಲ್ಲೂ ಕೆಲವು ಪ್ರದೇಶದ ಬೀದಿ ನಾಯಿಗಳಿಗೆ ತಿನ್ನಲು ಅಹಾರ ಸಿಗದೆ ಶೋಚನೀಯ ಸ್ಥಿತಿಯಲ್ಲಿ ಸಾವನ್ನಪ್ಪಿದ ಉದಾಹರಣೆ ಕೂಡ ಇದೆ. ಕೆಲವು ಪ್ರಾಣಿ ಪ್ರೀತಿ ಇರುವ ವ್ಯಕ್ತಿಗಳು ತಾವೇ ಸ್ವತಃ ಬೀದಿ ನಾಯಿಗಳು ಇರುವ ಸ್ಥಳಗಳಿಗೆ ಹೋಗಿ ಬಿಸ್ಕೆಟ್ ಅಥವಾ ಇನ್ನಿತರ ಆಹಾರ ಪದಾರ್ಥಗಳನ್ನು ನೀಡಿ ಬರುತ್ತಾರೆ.

ಇದೆಲ್ಲದರ ನಡುವೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಈ ಬೀದಿ ನಾಯಿಗಳ ಸಂತತಿಯನ್ನೇ ನಾಶ ಮಾಡಬೇಕು ಎಂದು ಸಂತತಿ ಹರಣ ಕಾರ್ಯಕ್ಕೆ ಮುಂದಾಗುತ್ತದೆ. ಇದು ಒಂದು ಮಾನವೀಯ ದೃಷ್ಟಿಯಲ್ಲಿ ತಪ್ಪು ಎಂದು ನೋಡಿದರು ಕೂಡ ಕೆಲವು ಕಾರಣಾಂತರಗಳಿಂದ ಈ ಬೀದಿ ನಾಯಿ ಸಂತತಿ ತಡೆಯಲು ಮುಂದಾಗಿದೆ. ಮೂರು ವರ್ಷಗಳ ಅವಧಿ ಹಿಂದೆ ಬೆಂಗಳೂರಿನಲ್ಲಿ ಸರಿ ಸುಮಾರು ಮೂರು ಲಕ್ಷ ಬೀದಿ ನಾಯಿಗಳು ಇದ್ದವು. ಆದರೆ ಇದೀಗ ರಾಜಧಾನಿ ಬೆಂಗಳೂರಿನಲ್ಲಿ ಬರೋಬ್ಬರಿ ಆರು ಲಕ್ಷಕ್ಕೂ ಅಧಿಕ ಬೀದಿ ನಾಯಿಗಳು ಏರಿಕೆ ಆಗಿದೆ. ಒಂದೆಡೆ ಬಿಬಿಎಂಪಿ ಈ ಬೀದಿ ನಾಯಿಗಳ ಸಂತಾನ ಹರಣ ಶಸ್ತ್ರಚಿಕಿತ್ಸೆಗೆ ಅಂತಾನೇ ಮೂರು ವರ್ಷಗಳಲ್ಲಿ ಬರೋಬ್ಬರಿ ಹದಿನೈದು ಕೋಟಿ ರೂ.ವೆಚ್ಚ ಮಾಡಲಾಗಿದೆ ಎಂದು ಜನ ಪ್ರತಿನಿಧಿಯೊಬ್ಬರು ಮಾಹಿತಿ ನೀಡಿದ್ದಾರೆ.

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯು ಈ ಬೀದಿ ನಾಯಿಗಳ ಸಂತಾನ ಹರಣ ಶಸ್ತ್ರಚಿಕಿತ್ಸೆಗೆ ಎಂದು 2019-20.ಸಾಲಿನಲ್ಲಿ 3,79,82,550.ರೂ.ವೆಚ್ಚ ಮಾಡಲಾಗಿದೆಯಂತೆ. ಅದೇ ರೀತಿಯಾಗಿ 2020-21 ರ ಅವಧಿಯಲ್ಲಿ 6,34,75, 200 ಕೋಟಿ. ರೂ. ವೆಚ್ಚ ಮಾಡಲಾಗಿದೆ. ಈ ಹಣಕಾಸಿನ ವೆಚ್ಚದಲ್ಲಿ ಬಿಬಿಎಂಪಿ ದುಂದು ವೆಚ್ಚ ಮಾಡಲಾಗಿದೆ ಎಂದು ಭಾರತೀಯ ಜನತಾ ಪಕ್ಷ ದ ಶಾಸಕರೊಬ್ಬರು ಆರೋಪ ಮಾಡಿದ್ದಾರೆ. ಈ ಅಂಕಿ ಅಂಶಗಳು ಮತ್ತು ಬೀದಿ ನಾಯಿಗಳ ಸಂತಾನ ಹರಣ ಶಸ್ತ್ರಚಿಕಿತ್ಸೆಗೆ ಕೋಟಿ ಕೋಟಿ ಖರ್ಚು ಮಾಡಿದ್ದಾರೆ ಎಂಬ ವಿಚಾರ ಪ್ರಾಣಿ ಪ್ರಿಯರಿಗೆ ಅಚ್ಚರಿ ಮೂಡಿಸಿದೆ. ಇನ್ನೊಂದೆಡೆ ಸಾರ್ವಜನಿಕ ವಲಯದಲ್ಲಿ ಈ ವಿಚಾರ ಭಾರಿ ಚರ್ಚೆಗೆ ಕಾರಣವಾಗಿದೆ.