ಬರುವ ಸಂಕ್ರಾಂತಿಗೆ ಜಗತ್ತಿನಾದ್ಯಂತ ಬಿಡುಗಡೆ ಆಗುತ್ತಿದೆ ಭಾರತೀಯ ಚಿತ್ರರಂಗದ ಬಿಗ್ ಬಜೆಟ್ ಚಿತ್ರ

ಟಾಲಿವುಡ್ ಸ್ಟಾರ್ ನಟ ಪ್ರಭಾಸ್ ಅಭಿಮಾನಿಗಳಿಗೆ ಗುಡ್ ನ್ಯೂಸ್ ಅಂತಿದ್ದ ಆದಿ ಪುರುಷ್ ಸಿನಿಮಾದ ಫಸ್ಟ್ ಲುಕ್ ಪೋಸ್ಟರ್ ಫೇಕ್ ಎಂದು ತಿಳಿದು ಬಂದು ಇದೀಗ ಪ್ರಭಾಸ್ ಅಭಿಮಾನಿಗಳಿಗೆ ಭಾರಿ ಬೇಸರ ಮೂಡಿಸಿದೆ. ಹೌದು ಬಾಹುಬಲಿ ಚಿತ್ರದ ನಂತರ ನಟ ಪ್ರಭಾಸ್ ಅವರು ಕೇವಲ ತೆಲುಗು ಚಿತ್ರರಂಗ ಮಾತ್ರ ಅಲ್ಲ. ಇಡೀ ಭಾರತೀಯ ಚಿತ್ರರಂಗ ಮತ್ತು ವರ್ಲ್ಡ್ ವೈಡ್ ಬಾರಿ ಜನಪ್ರಿಯತೆ ಪಡೆದು ಸ್ಟಾರ್ ನಟರಾಗಿ ಮಿಂಚುತ್ತಿದ್ದಾರೆ. ಇಂದು ನಟ ಪ್ರಭಾಸ್ ಅವರು ಭಾರತೀಯ ಚಿತ್ರರಂಗದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುತ್ತಿರುವ ಮತ್ತು ಬಹು ಬೇಡಿಕೆಯ ನಟರಾಗಿ ಹೊರ ಹೊಮ್ಮಿದ್ದಾರೆ. ಕೋಟ್ಯಾಂತರ ಅಭಿಮಾನಿಗಳನ್ನ ಹೊಂದಿರುವ ನಟ ಪ್ರಭಾಸ್ ತಮ್ಮ ಚಿತ್ರಗಳ ಬಗ್ಗೆ ಆಗಾಗ ಒಂದಷ್ಟು ಮಾಹಿತಿಗಳನ್ನ ತಮ್ಮ ಸೋಶಿಯಲ್ ಮೀಡಿಯಾ ಮುಖಾಂತರ ಅಭಿಮಾನಿಗಳಿಗೆ ಹಂಚಿಕೆ ಮಾಡುತ್ತಿರುತ್ತಾರೆ.

ಭಾರತೀಯ ಸಿನಿ ಪ್ರೇಕ್ಷಕರು ಪ್ರಭಾಸ್ ಅವರ ಚಿತ್ರಗಳಿಗೆ ಕಾತುರದಿಂದ ಕಾಯುತ್ತಿದ್ದಾರೆ. ಅದರಂತೆ ಇದೀಗ ಸೋಶಿಯಲ್ ಮೀಡಿಯಾದಲ್ಲಿ ಆದಿಪುರುಷ್ ಚಿತ್ರದ ಫಸ್ಟ್ ಲುಕ್ ಪೋಸ್ಟರ್ ಅಂತ ಪ್ರಭಾಸ್ ಮತ್ತು ಕೃತಿ ಸನನ್ ಇರುವ ಒಂದಷ್ಟು ಐತಿಹಾಸಿಕ ಶೈಲಿಯ ಫೋಟೋಗಳು ವೈರಲ್ ಆಗಿವೆ. ಈ ಪೋಟೋಗಳನ್ನೆ ಬಹುತೇಕರು ಆದಿ ಪುರುಷ್ ಸಿನಿಮಾದ ಫಸ್ಟ್ ಲುಕ್ ಪೋಸ್ಟರ್ ಅಂತ ತಿಳಿದುಕೊಂಡು ಖುಷಿ ಪಟ್ಟು ಎಕ್ಸ್ಸೈಟ್ ಆಗಿದ್ದರು. ಇದೀಗ ಆದಿ ಪುರುಷ್ ಸಿನಿಮಾದ ನಿರ್ದೇಶಕ ಓಂ ರಾವುತ್ ಅವರು ಈ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ಸೋಶಿಯಲ್ ಮೀಡಿಯಾಗಳಲ್ಲಿ ಹರಿದಾಡುತ್ತಿರೋದು ಫೇಕ್ ಪೋಸ್ಟ್ ಎಂದು ತಿಳಿಸುವುದರ ಜೊತೆಗೆ ಆದಿಪುರುಷ್ ಸಿನಿಮಾ ಸದ್ಯಕ್ಕೆ ಚಿತ್ರೀಕರಣ ಮುಗಿಸಿಕೊಂಡು ಪೋಸ್ಟ್ ಪ್ರೊಡಕ್ಷನ್ ಕೆಲಸ ಕಾರ್ಯಗಳಲ್ಲಿ ನಿರತವಾಗಿದೆ.

ಅಕ್ಟೋಬರ್ 23ರಂದು ಆದಿಪುರುಷ್ ಸಿನಿಮಾದ ಫಸ್ಟ್ ಲುಕ್ ಪೋಸ್ಟರ್ ರಿಲೀಸ್ ಮಾಡುವ ಯೋಚನೆ ಅಲ್ಲಿದ್ದೇವೆ. ಯಾಕಂದ್ರೆ ಅಕ್ಟೋಬರ್23 ಪ್ರಭಾಸ್ ಅವರ ಜನ್ಮದಿನ. ಹಾಗಾಗಿ ಅವರ ಜನ್ಮದಿನಕ್ಕೆ ಆದಿಪುರುಷ್ ಚಿತ್ರದ ಫಸ್ಟ್ ಲುಕ್ ಪೋಸ್ಟರ್ ರಿಲೀಸ್ ಆಗಲಿದೆ. ಇನ್ನು ಅದೇ ರೀತಿ ಜನವರಿ12 ಅಂದರೆ ಸಂಕ್ರಾತಿ ಹಬ್ಬದಂದು ಆದಿಪುರುಷ್ ಸಿನಿಮಾ ವರ್ಲ್ಡ್ ವೈಡ್ ರಿಲೀಸ್ ಆಗಲಿದೆಯಂತೆ. ಬರೋಬ್ಬರಿ 500 ಕೋಟಿ ವೆಚ್ಚದಲ್ಲಿ ಆದಿಪುರುಷ್ ಸಿನಿಮಾ ಥ್ರೀಡಿಯಲ್ಲಿ ತಯಾರಾಗಿದೆಯಂತೆ. ಈ ಚಿತ್ರಕ್ಕೆ ಟಿ ಸೀರೀಸ್ ಸಂಸ್ಥೆಯಡಿ ಭೂಷಣ್ ಕುಮಾರ್, ಕೃಷ್ಣ ಕುಮಾರ್, ಓಂ ರಾವುತ್, ಪ್ರಸಾದ್ ಸುತಾರ್, ರಾಜೇಶ್ ನಾಯರ್ ಬಂಡವಾಳ ಹೂಡಿಕೆ ಮಾಡಿದ್ದಾರೆ. ಈ ಪೌರಾಣಿಕ ಕಥೆಯಾಧರಿತ ಆದಿಪುರುಷ್ ಸಿನಿಮಾದಲ್ಲಿ ರಾಮನಾಗಿ ಪ್ರಭಾಸ್ ಮಿಂಚಿದ್ದಾರೆ. ಪ್ರಮುಖ ಪಾತ್ರಗಳಲ್ಲಿ ಕೃತಿ ಸನೂನ್, ಸೈಫ್ ಅಲಿಖಾನ್, ಸನ್ನಿಸಿಂಗ್ ನಟಿಸಿದ್ದಾರೆ.

Leave a Reply

%d bloggers like this: