ಬರೋಬ್ಬರಿ ಏಳು ವರ್ಷಗಳ ನಂತರ ಮತ್ತೆ ಕನ್ನಡ ಕಿರುತೆರೆಗೆ ಎಂಟ್ರಿ ಕೊಟ್ಟ ಖ್ಯಾತ ನಟಿ

ದಶಕಗಳ ಹಿಂದೆ ಕಿರುತೆರೆಯಲ್ಲಿ ಅನೇಕ ನಟ ನಟಿಯರು ಮಿಂಚಿ ಕನ್ನಡ ನಾಡಿನ ಮನೆ ಮನಗಳಲ್ಲಿ ತಮ್ಮ ಮನೆ ಮಕ್ಕಳಂತೆ ಸ್ಥಾನ ಪಡೆದಕೊಂಡು ಅಪಾರ ಜನಪ್ರಿಯತೆ ಗಳಿಸಿದ್ದರು. ಕಾಲಾನುಕ್ರಮದಲ್ಲಿ ಧಾರಾವಾಹಿಗಳು ಮುಗಿದ ನಂತರ ಆ ಧಾರಾವಾಹಿಯ ಕಲಾವಿದರು ಕೂಡ ಬೇರೆ ಬೇರೆ ಕ್ಷೇತ್ರಗಳತ್ತ ಮುಖ ಮಾಡುತ್ತಾರೆ. ಅವರಲ್ಲಿ ಕೆಲವು ಕಲಾವಿದರು ಒಂದಷ್ಟು ಧಾರಾವಾಹಿಗಳಲ್ಲಿ ಅವಾಕಾಶ ಪಡೆದುಕೊಂಡು ನಟಿಸುತ್ತಾ ಕಿರುತೆರೆಯಲ್ಲಿ ಉಳಿದುಕೊಳ್ಳುತ್ತಾರೆ. ಆದರೆ ಕೆಲವರು ಒಂದು ಧಾರಾವಾಹಿಯಲ್ಲಿ ಸಿಕ್ಕಂತಹ ಜನಪ್ರಿಯತೆ ನಂತರ ಯಾರಿಗೂ ಕೂಡ ಕಾಣದಂತೆ ಮಾಯವಾಗಿ ಬಿಡುತ್ತಾರೆ. ಹಾಗಂತ ಅವರಿಗೆ ಅವಕಾಶದ ಕೊರತೆ ಇತ್ತು ಅಂತಲ್ಲ. ಅವರ ಕೆಲವು ಅಭಿರುಚಿಗಳು ಅವರನ್ನ ಬೇರೆ ಬೇರೆ ಕಡೆ ಗಮನ ಹರಿಸುವಂತೆ ಮಾಡಿರುತ್ತದೆ. ಅಂತಹ ನಟಿಯರ ಪೈಕಿ ಕೃತಿಕಾ ಕೂಡ ಒಬ್ಬರು. ನಟಿ ಕೃತಿಕಾ ಅವರು ರಾಧಾ ಕಲ್ಯಾಣ ಧಾರಾವಾಹಿಯ ಮೂಲಕ ಅಪಾರ ಜನಪ್ರಿಯತೆ ಗಳಿಸಿದ್ದರು.

ಅದಕ್ಕೂ ಮುನ್ನ ಅವರು ತಮ್ಮ 14ನೇ ವಯಸ್ಸಿನಲ್ಲಿಯೇ ಪಟ್ರೆ ಲವ್ಸ್ ಪದ್ಮ ಎಂಬ ಚಿತ್ರದಲ್ಲಿ ನಾಯಕಿಯಾಗಿ ನಟಿಸುತ್ತಾರೆ. ತದ ನಂತರ ಬೆಳ್ಳಿತೆರೆಯಿಂದ ಮನೆ ಮಗಳು ಎಂಬ ಧಾರಾವಾಹಿಯ ಮೂಲಕ ಕಿರುತೆರೆಗೆ ಎಂಟ್ರಿ ಕೊಟ್ಟರು. ಒಂದಷ್ಟು ಧಾರಾವಾಹಿಯಲ್ಲಿ ನಟಿಸಿದರು ಕೂಡ ನಟಿ ಕೃತಿಕಾ ರವೀಂದ್ರ ಅವರಿಗೆ ಹೆಸರು ತಂದುಕೊಟ್ಟದ್ದು ಅಂದರೆ 2011ರಲ್ಲಿ ಜೀ಼ ಕನ್ನಡದಲ್ಲಿ ಪ್ರಸಾರವಾಗುತ್ತಿದ್ದ ರಾಧಾಕಲ್ಯಾಣ ಧಾರಾವಾಹಿಯ ಮೂಲಕ. ಇನ್ನು ನಟಿ ಕೃತಿಕಾ ಅವರು ಬಿಗ್ ಬಾಸ್ 5 ಸೀಸನ್ ನಲ್ಲಿಯೂ ಕೂಡ ಭಾಗವಹಿಸಿ ಯಾವುದೇ ವಿವಾದ ಇಲ್ಲದೆ ಒಂದಷ್ಟು ವಾರಗಳ ಕಾಲ ಇದ್ದು ಬಂದರು. ಇದಾದ ನಂತರ ಮತ್ತೆ ಒಂದೆರಡು ಸಿನಿಮಾಗಳಲ್ಲಿ ನಟಿಸಿದರು ಕೂಡ ಯಶಸ್ಸು ಕಾಣದ ನಟಿ ಕೃತಿಕಾ ಅವರು ಸೋಶಿಯಲ್ ಮೀಡಿಯಾಗಳಲ್ಲಿ ಸಖತ್ ಆಕ್ಟೀವ್ ಆದರು.

ಕೃತಿಕಾ ಅವರಿಗೆ ಉತ್ತಮ ನೇಮ್ ಫೇಮ್ ಇದ್ದರು ಕೂಡ ಯಾವುದೇ ಸಿನಿಮಾ ಮತ್ತು ಧಾರಾವಾಹಿಗಳಲ್ಲಿ ಕಾಣಿಸಿಕೊಂಡಿರಲಿಲ್ಲ. ಸೋಶಿಯಲ್ ಮೀಡಿಯಾಗಳಲ್ಲಿ ಈ ಬಗ್ಗೆ ಒಂದಷ್ಟು ಮಂದಿ ರಾಧೆ ಏಕೆ ಮೌನ ತಾಳಿದೆ ಎಂಬ ಕಮೆಂಟ್ ಕೂಡ ಮಾಡಿದ್ದರು. ಇದೀಗ ಕೃತಿಕಾ ಅವರು ಉತ್ತರ ನೀಡಿದ್ದಾರೆ. ಹೌದು ನಟಿ ಕೃತಿಕಾ ರವೀಂದ್ರ ಅವರು ಇದೀಗ ಬರೋಬ್ಬರಿ ಏಳು ವರ್ಷಗಳ ನಂತರ ಕಿರುತೆರೆಯಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ರಾಘವೇಂದ್ರ ರಾಜ್ ಕುಮಾರ್ ಅವರ ಪೂರ್ಣಿಮಾ ಎಂಟರ್ ಪ್ರೈಸಸ್ ನಿರ್ಮಾಣ ಸಂಸ್ಥೆಯಿಂದ ತಯಾರಾಗುತ್ತಿರುವ ವಿಜಯ ದಶಮಿ ಎಂಬ ಧಾರಾವಾಹಿಯ ಮೂಲಕ ಕಿರುತೆರೆಗೆ ರೀ ಎಂಟ್ರಿ ಕೊಡುತ್ತಿದ್ದಾರೆ. ಈ ಹೊಸ ವಿಜಯ ದಶಮಿ ಧಾರಾವಾಹಿಯು ಆಗಸ್ಟ್1 ಸೋಮವಾರದಿಂದ ಪ್ರತಿ ದಿನ ರಾತ್ರಿ 8.30ಕ್ಕೆ ಸಿರಿ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗಲಿದೆ. ಈ ವಿಷಯವನ್ನು ನಟಿ ಕೃತಿಕಾ ರವೀಂದ್ರ ಅವರು ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ.