ಬರೋಬ್ಬರಿ 900 ಸಂಚಿಕೆಗಳನ್ನು ಯಶಸ್ವಿಯಾಗಿ ಪೂರೈಸಿದ ಕನ್ನಡದ ಜನಪ್ರಿಯ ಧಾರಾವಾಹಿ

ಕೆಲವು ವಿವಾದಗಳ ನಡುವೆ ಕೂಡಾ 900 ಸಂಚಿಕೆ ಪೂರೈಸಿ ಸಂಭ್ರಿಮಿಸಿದೆ ಈ ಜನಪ್ರಿಯ ಧಾರಾವಾಹಿ. ಹೌದು ಈ ಧಾರಾವಾಹಿ ಬಗ್ಗೆ ಕೇಳಿಲ್ಲ ಅನ್ನೋರೇ ಇಲ್ಲ. ಅಷ್ಟರ ಮಟ್ಟಿಗೆ ಈ ಜನಪ್ರಿಯ ಧಾರಾವಾಹಿ ಕನ್ನಡ ಕಿರುತೆರೆಯಲ್ಲಿ ಸನ್ಶೇನಲ್ ಕ್ರಿಯೇಟ್ ಮಾಡಿತ್ತು. ಇಂದಿಗೂ ಕೂಡ ಈ ಧಾರಾವಾಹಿ ಟಾಪ್ ಧಾರಾವಾಹಿಗಳ ಪೈಕಿ ಮೊದಲ ಪಂಕ್ತಿಯಲ್ಲಿ ನಿಲ್ಲುತ್ತದೆ. ಅರೇ ಈ ಪರಿಯಾಗಿ ಕ್ರೇಜ಼್ ಹುಟ್ಟಿಸಿದ ಧಾರಾವಾಹಿ ಯಾವುದು ಅಂತ ನೀವ್ ಕುತೂಹಲ ವ್ಯಕ್ತ ಪಡಿಸಬಹುದು. ಆ ಧಾರಾವಾಹಿ ಬೇರಾವುದೂ ಅಲ್ಲ. ಅದೇ ಜೀ಼ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ಜೊತೆ ಜೊತೆಯಲಿ ಧಾರಾವಾಹಿ.

ಕನ್ನಡ ಕಿರುತೆರೆಯಲ್ಲಿ ಅದ್ದೂರಿ ಮೇಕಿಂಗ್ ಅಂತ ಏನಾದ್ರು ಅರಂಭ ಆಗಿದ್ದು ಅಂದ್ರೆ ಅದು ಈ ಜೊತೆ ಜೊತೆಯಲಿ ಧಾರಾವಾಹಿ ಮೂಲಕ ಅಂತೇಳಿದ್ರೇ ತಪ್ಪಾಗಲ್ಲ. ಹೌದು ಕನ್ನಡ ಕಿರುತೆರೆಯ ಜನಪ್ರಿಯ ಧಾರಾವಾಹಿಯಾದ ಜೊತೆ ಜೊತೆಯಲಿ ಧಾರಾವಾಹಿ ನಾಡಿನಾದ್ಯಂತ ಅಪಾರ ಜನಪ್ರಿಯತೆ ಪಡೆದುಕೊಂಡಿದೆ. ಅದೇ ರೀತಿಯಾಗಿ ಈ ಧಾರಾವಾಹಿ ಪ್ರಧಾನ ಪಾತ್ರಗಳಾದ ಆರ್ಯವರ್ಧನ್ ಮತ್ತು ಅನು ಸಿರಿ ಮನೆ ನಾಡಿನ ಮನೆ ಮನಗಳಲ್ಲಿ ಹೆಸರುವಾಸಿಯಾಗಿದ್ದಾರೆ. ನಿರಂತರವಾಗಿ ಮೂರು ವರ್ಷಗಳಿಂದ ಜೊತೆ ಜೊತೆಯಲಿ ಧಾರಾವಾಹಿ ಕಿರುತೆರೆಯಲ್ಲಿ ನಂಬರ್ ಒನ್ ಧಾರಾವಾಹಿಯಾಗಿ ಅತಿ ಹೆಚ್ಚು ಟಿ.ಆರ್.ಪಿ ಪಡೆಯುವ ಮೂಲಕ ಸಾಕಷ್ಟು ಹೆಸರಾಯಿತು.

ಇದರ ನಡುವೆ ಆರ್ಯವರ್ಧನ್ ಪಾತ್ರ ಮಾಡುತ್ತಿದ್ದ ನಟ ಅನಿರುದ್ದ್ ಅವರು ತಮ್ಮ ಪಾತ್ರದಿಂದ ಹೊರ ಬಂದು ಧಾರಾವಾಹಿ ಕೊಂಚ ವಿವಾದವನ್ನುಂಟು ಮಾಡಿಕೊಂಡಿತು. ಇದಾದ ಬಳಿಕ ಅನಿರುದ್ದ್ ಅವರ ಜಾಗಕ್ಕೆ ನಟ ಹರೀಶ್ ರಾಜ್ ಅವರು ಬಂದು ಆರ್ಯವರ್ಧನ್ ಪಾತ್ರ ನಿರ್ವಹಿಸುತ್ತಿದ್ದಾರೆ. ಅವರ ಜೊತೆಗೆ ಜೋಡಿ ಹಕ್ಕಿ ಧಾರಾವಾಹಿ ಖ್ಯಾತಿಯ ನಟಿ ಚೈತ್ರಾ ರಾವ್ ಸಹ ಆರಾಧನಾ ಪಾತ್ರದಲ್ಲಿ ಕಾಣಿಸಿಕೊಳ್ತಿದ್ದಾರೆ.

ಧಾರಾವಾಹಿಯಲ್ಲಿ ಅನು ಸಿರಿಮನೆ ಇದೀಗ ಗರ್ಭಿಣಿಯಾಗಿದ್ದು ಆರ್ಯವರ್ಧನ್ ತಂದೆಯಾಗುತ್ತಿರುವ ಸಂಭ್ರಮದಲ್ಲಿ ಇದ್ದಾರೆ. ಅನು ಮತ್ತು ಆರ್ಯವರ್ಧನ್ ಅವರ ಸುಂದರ ಸಂಸಾರವನ್ನ ನೋಡಿ ಆರಾಧನಾ ಅಸಮಾಧಾನಗೊಂಡು ಒಳಗೊಳಗೆ ಹೊಟ್ಟೆ ಕಿಚ್ಚು ಪಡುತ್ತಿದ್ದಾರೆ. ಹೀಗೆ ಈ ಧಾರಾವಾಹಿ ಪ್ರೇಕ್ಷಕರಿಗೆ ವಿಭಿನ್ನ ಮನರಂಜನೆ ನೀಡುತ್ತಿದೆ. ಒಟ್ಟಾರೆಯಾಗಿ ಆರೂರು ಜಗದೀಶ್ ಸಾರಥ್ಯದಲ್ಲಿ ಮೂಡಿ ಬರುತ್ತಿರುವ ಜೊತೆ ಜೊತೆಯಲಿ ಧಾರಾವಾಹಿ ಹೊಸ ಪಾತ್ರಗಳೊಟ್ಟಿಗೆ ಹೊಸ ಆಯಾಮ ಪಡೆದುಕೊಂಡು ಜನರ ಪ್ರೀತಿಯನ್ನ ಮತ್ತಷ್ಟು ಗಳಿಸಿ ಇದೀಗ ಈ ಧಾರಾವಾಹಿ ಬರೋಬ್ಬರಿ 900 ಸಂಚಿಕೆಗಳನ್ನ ಯಶಸ್ವಿಯಾಗಿ ಪೂರೈಸಿಕೊಂಡಿದೆ.

Leave a Reply

%d bloggers like this: