ಬರೊಬ್ಬರಿ 9 ವರ್ಷಗಳ ನಂತರ ಮತ್ತೆ ಕನ್ನಡಕ್ಕೆ ಬಂದ ದಕ್ಷಿಣ ಭಾರತದ ಸ್ಟಾರ್ ನಟಿ

ಇಂದು ಕನ್ನಡ ಚಿತ್ರರಂಗದಿಂದ ಬಣ್ಣದ ಲೋಕಕ್ಕೆ ಪಾದಾರ್ಪಣೆ ಮಾಡಿರೋ ಅನೇಕ ನಟಿಯರು ದಕ್ಷಿಣ ಭಾರತ ಮಾತ್ರ ಅಲ್ಲದೇ ಭಾರತೀಯ ಚಿತ್ರರಂಗದಲ್ಲೇ ಅಪಾರ ಜನಪ್ರಿಯತೆ ಪಡೆದು ಬಹು ಬೇಡಿಕೆಯ ನಟಿಯರಾಗಿ ಮಿಂಚುತ್ತಿದ್ದಾರೆ. ಅದರಂತೆ ಬೇರೆ ಭಾಷೆಯ ನಟಿಯರು ಕೂಡ ಕನ್ನಡ ಸಿನಿಮಾಗಳಲ್ಲಿ ನಟಿಸಿ ಕನ್ನಡ ಸಿನಿ ಪ್ರೇಕ್ಷಕರ ಮನಗೆದ್ದು ಚಿತ್ರರಂಗದಲ್ಲಿ ಇದ್ದಾರೆ. ಅವರಂತೆಯೇ ಪರಭಾಷಾ ನಟಿಯಾಗಿ ಬಂದವರಲ್ಲಿ ಸೌತ್ ಸಿನಿ ರಂಗದ ಖ್ಯಾತ ನಟಿ ಶ್ರೀಯಾ ಶರಣ್ ಕೂಡ ಒಬ್ಬರು. ಬಾಲಿವುಡ್ ಮತ್ತು ದಕ್ಷಿಣ ಭಾರತ ಸಿನಿಮಾ ರಂಗದಲ್ಲಿ ಅತ್ಯಂತ ಜನಪ್ರಿಯ ಮತ್ತು ಬೇಡಿಕೆಯ ನಟಿಯರ ಪೈಕಿ ಮೊದಲ ಪಂಕ್ತಿಯಲ್ಲಿ ನಿಲ್ಲುವ ನಟಿಯರಲ್ಲಿ ಶ್ರೀಯಾ ಶರಣ್ ಕೂಡ ಪ್ರಮುಖರು ಎಂದು ಹೇಳಬಹುದು. ಶ್ರೀಯಾ ಹಿಂದಿ, ತೆಲುಗು, ತಮಿಳಿನಲ್ಲಿ ಅನೇಕ ಸೂಪರ್ ಹಿಟ್ ಸಿನಿಮಾಗಳಲ್ಲಿ ನಟಿಸಿದ್ದಾರೆ.

ಅದರಂತೆ ಕನ್ನಡದಲ್ಲಿಯೂ ಕೂಡ ನಟಿಸಿದ್ದಾರೆ. ಶ್ರೀಯಾ ಶರಣ್ ಮೊದಲ ಬಾರಿಗೆ ಕನ್ನಡದಲ್ಲಿ ತೆರೆ ಹಂಚಿಕೊಂಡಿದ್ದು ಅರಸು ಸಿನಿಮಾದಲ್ಲಿ . ಅಪ್ಪು ಅವರೊಟ್ಟಿಗೆ ತೆರೆ ಹಂಚಿಕೊಳ್ಳುವ ಮೂಲಕ ನಟಿ ಶ್ರೀಯಾ ಶರಣ್ ಚಂದನವನಕ್ಕೆ ಪಾದಾರ್ಪಣೆ ಮಾಡಿದರು. ಮಹೇಶ್ ಬಾಬು ಅವರ ನಿರ್ದೇಶನದಲ್ಲಿ ಮೂಡಿಬಂದ ಈ ಅರಸು ಸಿನಿಮಾದಲ್ಲಿ ವಿಶೇಷ ಅತಿಥಿ ಪಾತ್ರದಲ್ಲಿ ಶ್ರೀಯಾ ಶರಣ್ ಕಾಣಿಸಿಕೊಂಡಿದ್ದರು. ಅದಾದ ನಂತರ 2013 ರಲ್ಲಿ ರೂಪಾ ಅಯ್ಯರ್ ಅವರ ನಿರ್ದೇಶನದಲ್ಲಿ ಲವ್ಲೀ ಸ್ಟಾರ್ ಪ್ರೇಮ್ ನಟನೆಯ ಚಂದ್ರ ಎಂಬ ಸಿನಿಮಾದಲ್ಲಿ ನಟಿಸಿದರು. ಈ ಚಿತ್ರದಲ್ಲಿ ಯಶ್ ಅವರು ಕೂಡ ಡ್ಯಾನ್ಸ್ ವೊಂದರಲ್ಲಿ ಕಾಣಿಸಿಕೊಂಡಿರುತ್ತಾರೆ.

ನಟಿ ಶ್ರೀಯಾ ಶರಣ್ ಈ ಚಿತ್ರದಲ್ಲಿ ಯಶ್ ಜೊತೆ ಸಖತ್ ಸ್ಟೆಪ್ ಹಾಕಿ ಗಮನ ಸೆಳೆದಿರುತ್ತಾರೆ. ಇದೀಗ ಬರೋಬ್ಬರಿ ಒಂಭತ್ತು ವರ್ಷಗಳ ನಂತರ ಕಬ್ಜ ಸಿನಿಮಾದ ಮೂಲಕ ನಟಿ ಶ್ರೀಯಾ ಶರಣ್ ಕನ್ನಡ ಚಿತ್ರರಂಗಕ್ಕೆ ಮತ್ತೆ ರೀ ಎಂಟ್ರಿ ಆಗಿದ್ದಾರೆ. ಉಪೇಂದ್ರ ಅವರೊಟ್ಟಿಗೆ ತೆರೆ ಹಂಚಿಕೊಂಡಿರೋ ಶ್ರೀಯಾ ಶರಣ್ ಅವರಿಗೆ ಸಖತ್ ಖುಷಿ ಇದೆಯಂತೆ. ಕಬ್ಜ ಸಿನಿಮಾ ಪಂಚ ಭಾಷೆಯಲ್ಲಿ ಮಾತ್ರ ಅಲ್ಲ ಚೀನಿ ಮತ್ತು ಜಪಾನ್ ಭಾಷೆ ಸೇರಿದಂತೆ ಬರೋಬ್ಬರಿ ಒಂಭತ್ತು ಭಾಷೆಗಳಲ್ಲಿ ರಿಲೀಸ್ ಆಗುತ್ತಿದೆ. ಡಬ್ಬಿಂಗ್ ವಿಚಾರವಾಗಿ ಹೇಳೋದಾದ್ರೆ ಕನ್ನಡದಲ್ಲಿ ಡಬ್ಬಿಂಗ್ ಅನ್ನ ಶ್ರೀಯಾ ಶರಣ್ ಮಾಡ್ತಿಲ್ಲ. ಬಹುಶಃ ಹಿಂದಿ ಭಾಷೆಯಲ್ಲಿ ಮಾತ್ರ ಅವಕಾಶ ನೀಡಿದರೆ ಡಬ್ಬಿಂಗ್ ಮಾಡುತ್ತೇನೆ ಎಂದು ಖಾಸಗಿ ವಾಹಿನಿಯ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ.

Leave a Reply

%d bloggers like this: