ಬರೊಬ್ಬರಿ 700 ಸಂಚಿಕೆಗಳನ್ನು ಯಶಸ್ವಿಯಾಗಿ ಪೂರೈಸಿದ ಕನ್ನಡದ ಜನಪ್ರಿಯ ಧಾರಾವಾಹಿ

ಕನ್ನಡ ಕಿರುತೆರೆಯಲ್ಲಿ ನಾಡಿನಾದ್ಯಂತ ಅತಿ ಹೆಚ್ಚು ಜನರು ವೀಕ್ಷಣೆ ಮಾಡುವ ವಾಹಿನಿ ಅಂದ್ರೆ ಅದು ಕಲರ್ಸ್ ಕನ್ನಡ ವಾಹಿನಿ. ಈ ವಾಹಿನಿಯನ್ನ ಜನ ಇಷ್ಟಪಟ್ಟು ನೋಡೋದಕ್ಕೆ ಪ್ರಮುಖ ಕಾರಣ ಅಂದ್ರೆ ಅದು ಈ ವಾಹಿನಿಯಲ್ಲಿ ಮೂಡಿ ಬರುವ ಕೌಟುಂಬಿಕ, ಪ್ರೇಮಾಧಾರಿತ ಧಾರಾವಾಹಿಗಳು ಮತ್ತು ರಿಯಾಲಿಟಿ ಶೋಗಳು. ಅದ್ರಂತೆ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ಬಹುತೇಕ ಧಾರಾವಾಹಿಗಳು ವಿಭಿನ್ನ ಕಥಾಹಂದರ ಹೊಂದಿರುತ್ತವೆ. ಕಲರ್ಸ್ ಕನ್ನಡದಲ್ಲಿ ಪ್ರಮುಖ ಧಾರಾವಾಹಿಗಳಲ್ಲಿ ಅತಿ ಹೆಚ್ಚು ಜನಪ್ರಿಯತೆ ಗಳಿಸಿರುವ ಧಾರಾವಾಹಿ ಅಂದರೆ ಅದು ಕನ್ನಡತಿ. ಈ ಕನ್ನಡತಿ ಧಾರಾವಾಹಿ ಕೇವಲ ಕಥಾ ನಾಯಕ ಮತ್ತು ನಾಯಕಿಯ ಮೇಲೆ ಕೇಂದ್ರಿತವಾಗಿಲ್ಲ. ಈ ಧಾರಾವಾಹಿಯಲ್ಲಿ ಬರುವ ಎಲ್ಲಾ ಪಾತ್ರಗಳಿಗೂ ಮಹತ್ವ ಅದರದ್ದೇ ಪ್ರಾಶಸ್ತ್ಯವನ್ನು ಒಳಗೊಂಡಿದೆ.

ಕಥೆ, ಚಿತ್ರಕಥೆ, ಅಪ್ಪಟ ಕನ್ನಡ ಭಾಷೆಯ ಸೊಗಸಾದ ಸಂಭಾಷಣೆಯ ಮೂಲಕ ಕನ್ನಡತಿ ಧಾರಾವಾಹಿ ಕಿರುತೆರೆ ವೀಕ್ಷಕರನ್ನ ಹಿಡಿದಿಟ್ಟುಕೊಂಡಿದೆ. ಹರ್ಷ ಮತ್ತು ಭುವಿ ಪಾತ್ರಗಳು ನಾಡಿನ ಮನೆ ಮಾತಾಗಿವೆ. ಕನ್ನಡತಿ ಧಾರಾವಾಹಿಗೆ ನಾಡಿನ ವೀಕ್ಷಕರು ಫಿಧಾ ಆಗಿದ್ದಾರೆ. ಇದೀಗ ಜನ ಮೆಚ್ಚುಗೆಯ ಕನ್ನಡತಿ ಧಾರಾವಾಹಿ ಹ್ಯಾಪಿ ನ್ಯೂಸ್ ವೊಂದನ್ನ ನೀಡಿದೆ. ಅದೇನಪ್ಪಾ ಅಂದ್ರೆ ಕನ್ನಡತಿ ಧಾರಾವಾಹಿ ಬರೋಬ್ಬರಿ ಏಳುನೂರು ಸಂಚಿಕೆಗಳನ್ನ ಯಶಸ್ವಿಯಾಗಿ ಪೂರೈಸಿದೆ. 700 ಸಂಚಿಕೆಗಳನ್ನ ಪೂರೈಸಿರೋ ಹಿನ್ನೆಲೆ ಕನ್ನಡತಿ ಧಾರಾವಾಹಿ ತಂಡ ಸಂಭ್ರಮದಲ್ಲಿದೆ. ಕನ್ನಡತಿ ಧಾರಾವಾಹಿಯನ್ನ ಯಶವಂತ್ ಪಾಂಡು ಅವರು ನಿರ್ದೇಶನ ಜವಬ್ದಾರಿ ಹೊಂದಿದ್ದು, ರಂಜಿನಿ ರಾಘವನ್, ಕಿರಣ್ ರಾಜ್, ಚಿತ್ಕಲ ಬಿರಾದರ್ ಸೇರಿದಂತೆ ಇನ್ನಿತರ ಕಲಾವಿದರು ನಟಿಸುತ್ತಿದ್ದಾರೆ.

Leave a Reply

%d bloggers like this: