ಬರೋಬ್ಬರಿ 600 ಸಂಚಿಕೆಗಳನ್ನು ಪೂರೈಸಿದ ಕನ್ನಡ ಕಿರುತೆರೆಯ ಜನಪ್ರಿಯ ಧಾರಾವಾಹಿ

ಕನ್ನಡ ಕಿರುತೆರೆಯಲ್ಲಿ ಇದೀಗ ಹೊಸ ಧಾರಾವಾಹಿಗಳ ಅಬ್ಬರ ಜೋರಾಗಿದೆ. ಇದರ ನಡುವೆ ವರ್ಷಾನುಗಟ್ಟಲೆಯಿಂದ ಕನ್ನಡ ಕಿರುತೆರೆಯ ವೀಕ್ಷಕರನ್ನ ರಂಜಿಸುತ್ತಾ ಬಂದಿರುವ ನಾಗಿಣಿ2 ಧಾರಾವಾಹಿ ಇದೀಗ ಆರುನೂರು ಕಂತುಗಳನ್ನು ಪೂರೈಸಿದೆ. ಈ ಹಿನ್ನೆಲೆಯಲ್ಲಿ ನಾಗಿಣಿ2 ಧಾರಾವಾಹಿ ತಂಡ ಸಂಭ್ರಮಾಚರಣೆ ಮಾಡಿದೆ. ಜೀ಼ಕನ್ನಡ ವಾಹಿನಿಯಲ್ಲಿ ಅನೇಕ ಹೊಸ ಹೊಸ ಬಗೆಯ ಧಾರಾವಾಹಿಗಳು ಪ್ರಸಾರವಾಗುತ್ತಿವೆ. ಅದರಂತೆ ನಾಗಿಣಿ2 ಧಾರಾವಾಹಿ ನಾಡಿನಾದ್ಯಂತ ಅಪಾರ ಪ್ರಸಿದ್ದತೆ ಪಡೆದುಕೊಂಡಿದೆ. ಈ ನಾಗಿಣಿ2 ಧಾರಾವಾಹಿ ಜೀ಼ಕನ್ನಡ ವಾಹಿನಿಯ ಅತ್ಯಂತ ಜನಪ್ರಿಯ ಧಾರಾವಾಹಿಯಾಗಿದೆ. ನಾಗಿಣಿ2 ಧಾರಾವಾಹಿ ಯಾವ ಮಟ್ಟಿಗೆ ಪ್ರಸಿದ್ದಿಯಾಗಿದೆ ಅಂದರೆ ಹಿಂದಿಗೂ ಕೂಡ ಡಬ್ ಆಗಿದೆ.

ತನ್ನ ಉತ್ತಮ ಗುಣಮಟ್ಟದ ಮೇಕಿಂಗ್, ಕೌತುಕತೆಯ ಕಥೆಯನ್ನಾಧಾರಿಸಿದ ಈ ನಾಗಿಣಿ2 ಧಾರಾವಾಹಿ ಕಿರುತೆರೆ ಪ್ರೇಕ್ಷರಿಗೆ ಭಾರಿ ಮನರಂಜನೆ ನೀಡುತ್ತಿದೆ. ನಾಗಿಣಿ/ಶಿವಾನಿ ಪಾತ್ರದಲ್ಲಿ ಪುಟ್ಟ ಗೌರಿ ಸೀರಿಯಲ್ ಖ್ಯಾತಿಯ ನಟಿ ನಮ್ರತಾ ಗೌಡ ನಟಿಸುತ್ತಿದ್ದಾರೆ. ಆದಿಶೇಷ/ನ ತ್ರಿಶೂಲ್ ಪಾತ್ರದಲ್ಲಿ ನಟ ನಿನಾದ್ ಹರಿತ್ಸಾ ನಟಿಸುತ್ತಿದ್ದರು. ಇದೀಗ ಕಾರಣಾಂತರಗಳಿಂದ ನಟ ನಿನಾದ್ ಅವರು ನಾಗಿಣಿ2 ಧಾರಾವಾಹಿಯಿಂದ ಹೊರ ನಡೆದಿದ್ದಾರೆ. ಈ ಬಗ್ಗೆ ತಾವು ಯಾವ ಕಾರಣಕ್ಕಾಗಿ ಧಾರಾವಾಹಿಯಿಂದ ಹೊರ ನಡೆದರು ಎಂಬುದನ್ನ ತಮ್ಮ ಸೋಶಿಯಲ್ ಮೀಡಿಯಾ ಖಾತೆಯ ಮೂಲಕ ಲೈವ್ ಬಂದು ಸ್ಪಷ್ಟನೆ ನೀಡಿದ್ದಾರೆ. ಇತ್ತೀಚೆಗೆ ನಾಗಿಣಿ2 ಧಾರಾವಾಹಿಯಲ್ಲಿ ಶಿವಾನಿ ಮತ್ತು ತ್ರಿಶೂಲ್ ರ ಮದುವೆಯ ದೃಶ್ಯ ಸನ್ನಿವೇಶವೊಂದು ಅದ್ದೂರಿಯಾಗಿ ಚಿತ್ರೀಕರವಾಗಿ ಭಾರಿ ಸುದ್ದಿಯಾಗಿತ್ತು.

ಯಾಕಂದ್ರೆ ಈ ಮದುವೆ ಸನ್ನಿವೇಶ ದೃಶ್ಯವು ಸಾಮಾನ್ಯ ಸೀರಿಯಲ್ ಮದುವೆಗಳಂತೆ ನಡೆಯದೆ ಅದ್ದೂರಿಯಾಗಿ ಹಳ್ಳಿಯೊಂದರಲ್ಲಿ ಸಹಜ ಮದುವೆಯಂತೆ ನಡೆದಿತ್ತು. ಈ ಮದುವೆ ಕಾರ್ಯಕ್ರಮದ ದೃಶ್ಯದಲ್ಲಿ ನಟ ನಿನಾದ್ ಮತ್ತು ನಟಿ ನಮ್ರತಾ ನಿಜವಾದ ವಧು ವರರಂತೆ ಮಿಂಚಿದ್ದರು.ಅದಲ್ಲದೆ ಇಬ್ಬರು ಕೂಡ ಒಂದಷ್ಟು ಸೆಲ್ಫಿಗೆ ಫೋಸ್ ನೀಡಿದ್ದರು. ಇನ್ನು ನಿನಾದ್ ಅವರ ಸ್ದಾನಕ್ಕೆ ನಟ ದೀಪಕ್ ಅವರು ಅಭಯ್ ಪಾತ್ರದ ಮೂಲಕ ನಾಗಿಣಿ ತಂಡಕ್ಕೆ ಆಗಮಿಸಿದ್ದಾರೆ. ಹತ್ತು ಹಲವು ರೋಚಕ ತಿರುವು ಪಡೆದುಕೊಳ್ಳುವ ಮೂಲಕ ನಾಗಿಣಿ2 ಧಾರಾವಾಹಿಯು ಇದೀಗ ಬರೋಬ್ಬರಿ ಆರುನೂರು ಸಂಚಿಕೆಗಳನ್ನ ಯಶಸ್ವಿಯಾಗಿ ಪೂರೈಸಿಕೊಂಡಿದೆ. ಹಾಗಾಗಿ ನಾಗಿಣಿ2 ಧಾರಾವಾಹಿ ತಂಡ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಲೈವ್ ಬಂದು ವೀಕ್ಷಕರ ಮುಂದೆಯೇ ಆರು ಸಂಚಿಕೆಗಳ ಯಶಸ್ವಿ ಪಯಣದ ಸಂಭ್ರಮವನ್ನು ಕೇಕ್ ಕಟ್ ಮಾಡಿ ಹಂಚಿಕೊಂಡಿದ್ದಾರೆ.

Leave a Reply

%d bloggers like this: