ಬರೊಬ್ಬರಿ 5 ರಾಷ್ಟ್ರ ಪ್ರಶಸ್ತಿಗಳನ್ನು ಬಾಚಿಕೊಂಡ ದಕ್ಷಿಣ ಭಾರತದ ಒಂದೇ ಚಿತ್ರ

ತಮಿಳಿನ ಸುಪ್ರಸಿದ್ದ ನಟ ಸೂರ್ಯ ಅವರಿಗೆ 47ನೇ ವರ್ಷದ ಜನ್ಮದಿನದ ಸಂಭ್ರಮ. ಈ ಸಂಭ್ರಮದ ಜೊತೆಗೆ ಇದೀಗ ಹೊಸದೊಂದು ಸಂತಸದ ಸುದ್ದಿ ಹೊರ ಬಿದ್ದಿದೆ. ಈ ಸುದ್ದಿ ತಿಳಿದರೆ ನಿಜಕ್ಕೂ ಕೂಡ ನಟ ಸೂರ್ಯ ಅವರ ಅಭಿಮಾನಿಗಳಿಗೆ ಸಖತ್ ಖುಷಿಯಾಗಲಿದೆ. ಆ ಸಂತಸದ ಸುದ್ದಿ ಏನು ಎಂಬುದನ್ನ ತಿಳಿಯುವ ಮೊದಲು ತಮಿಳು ಚಿತ್ರರಂಗದ ಜನಪ್ರಿಯ ನಟ ಸೂರ್ಯ ಅವರ ಬಗ್ಗೆ ಕೊಂಚ ತಿಳಿಯುವ ಪ್ರಯತ್ನ ಮಾಡೋಣ. ನಟ ಸೂರ್ಯ ಮತ್ತು ನಟ ಕಾರ್ತಿ ಇಬ್ಬರು ಅಣ್ಣ ತಮ್ಮಂದಿರು. ಇವರ ತಂದೆ ಶಿವಕುಮಾರ್ ಕೂಡ ಕಲಾವಿದರು. ಈ ಇಬ್ಬರು ಸೋದರರು ಸದ್ಯಕ್ಕೆ ತಮಿಳು ಚಿತ್ರರಂಗದ ಸ್ಟಾರ್ ನಟರಾಗಿ ಮಿಂಚುತ್ತಿದ್ದಾರೆ. ಸೂರ್ಯ ಪತ್ನಿ ನಟಿ ಜ್ಯೋತಿಕಾ ಕೂಡ ಮದುವೆಯ ನಂತರ ಕೆಲವು ಪ್ರಮುಖ ಪಾತ್ರಗಳಲ್ಲಿ ಮಾತ್ರ ನಟಿಸುತ್ತಾ ಸಿನಿಮಾ ನಿರ್ಮಾಣ ಮಾಡುತ್ತಿದ್ದಾರೆ.

ಇತ್ತೀಚೆಗೆ ಕೆಲವು ತಿಂಗಳಿಂದ ರಿಲೀಸ್ ಆಗಿ ದೇಶಾದ್ಯಂತ ಸಂಚಲನ ಉಂಟು ಮಾಡಿದ ಜೈ ಭೀಮ್ ಚಿತ್ರ ಸೂರ್ಯ ಅವರ ನಿರ್ಮಾಣ ಮತ್ತು ಅತ್ಯುತ್ತಮ ನಟನೆಯನ್ನ ಒಳಗೊಂಡಿತ್ತು. ಈ ಜೈ ಭೀಮ್ ಚಿತ್ರ ಆಸ್ಕರ್ ಅವಾರ್ಡ್ ಗೆ ನಾಮಿನೇಟ್ ಆಗಿತ್ತು. ನಟ ಸೂರ್ಯ ಅವರ ತಂದೆ ಕೂಡ ಒಬ್ಬ ನಟರಾಗಿದ್ದರು ಸಹ ಸೂರ್ಯ ಅವರು ಗಾರ್ಮೆಂಟ್ಸ್ ಎಕ್ಸ್ ಪೋರ್ಟ್ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿರುತ್ತಾರೆ. ತಾನು ಒಬ್ಬ ಸ್ಟಾರ್ ನಟನ ಮಗ ಎಂದು ಯಾರು ಕೂಡ ನೋಡಬಾರದು ಎಂಬ ಸದುದ್ದೇಶ ಅದರದಾಗಿರುತ್ತದೆ. ಇನ್ನು ನಟ ಸೂರ್ಯ ಅವರ ಮೊದಲ ಹೆಸರು ಸರವಣನ್ ಶಿವಕುಮಾರ್. ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ನಂತರ ಖ್ಯಾತ ನಿರ್ದೇಶಕ ಮಣಿರತ್ನಂ ಅವರ ಸಲಹೆಯ ಮೇರೆಗೆ ತಮ್ಮ ಹೆಸರನ್ನ ಸೂರ್ಯ ಎಂದು ಬದಲಾಯಿಸಿಕೊಳ್ಳುತ್ತಾರೆ. ಇವರ ಮೊದಲ ಚಿತ್ರ ನೆರುಕ್ಕು ನೇರ್ ಎಂಬುದು. ಈ ಚಿತ್ರವನ್ನು ಮಣಿರತ್ನಂ ಅವರೇ ನಿರ್ದೇಶನ ಮಾಡಿರುತ್ತಾರೆ.

ಇದಕ್ಕೂ ಮೊದಲು 1995ರಲ್ಲಿ ವಸಂತ್ ಅವರ ಆಸೈ ಚಿತ್ರಕ್ಕೆ ನಾಯಕರಾಗಿ ಆಯ್ಕೆ ಆಗಿರುತ್ತಾರೆ. ಆದರೆ ಇದು ರೊಮ್ಯಾಂಟಿಕ್ ಥ್ರಿಲ್ಲರ್ ಸಿನಿಮಾ ಆಗಿದ್ದರಿಂದ ಈ ಚಿತ್ರದಲ್ಲಿ ನಟಿಸಲು ಸೂರ್ಯ ಅವರು ಆಸಕ್ತಿ ತೋರುವುದಿಲ್ಲ. ಇದಾದ ನಂತರ ಸೂರ್ಯ ಅವರು ಮಣಿರತ್ನಂ ಅವರ ನೆರುಕ್ಕು ನೇರ್ ಚಿತ್ರದ ನಂತರ ಉನ್ನೈ ನೀನೈತು, ವಾರಣಂ ಅಯಿರಂ ಮತ್ತು ರಕ್ತ ಚರಿತ್ರೆ2, ಇತ್ತೀಚೆಗೆ ತೆರೆಕಂಡ ಸೂರರೈ ಪೊಟ್ರು, ಜೈ ಭೀಮ್ ಅಂತಹ ಸೂಪರ್ ಹಿಟ್ ಚಿತ್ರಗಳನ್ನ ಭಾರತೀಯ ಚಿತ್ರರಂಗದಲ್ಲಿ ಅಪಾರ ಜನಪ್ರಿಯತೆಯ ನಟರಾಗಿ ಗುರುತಿಸಿಕೊಂಡಿದ್ದಾರೆ. ಇದೀಗ ಸೂರರೈ ಪೊಟ್ರು ಸಿನಿಮಾದ ನಟನೆಗಾಗಿ ನಟ ಸೂರ್ಯ ಅವರಿಗೆ 68ನೇ ರಾಷ್ಟ್ರೀಯ ಪ್ರಶಸ್ತಿ ದೊರೆತಿದೆ. ಇದು ನಟ ಸೂರ್ಯ ಅವರಿಗೆ ಜನ್ಮದಿನದ ಸಂಭ್ರಮದ ಜೊತೆಗೆ ಮತ್ತೊಂದು ಸಂಭ್ರಮವಾಗಿದೆ. ಅವರ ಅಭಿಮಾನಿಗಳಂತು ತಮ್ಮ ನೆಚ್ಚಿನ ನಟನಿಗೆ ನ್ಯಾಶನಲ್ ಅವಾರ್ಡ್ ಬಂದಿರುವುದಕ್ಕೆ ಇದೀಗ ಸಖತ್ ಖುಷಿಯಾಗಿದ್ದಾರೆ.

Leave a Reply

%d bloggers like this: