ಬರೋಬ್ಬರಿ 44 ಕೋಟಿ ಕೊಟ್ಟು ಮನೆ ಖರೀದಿಸಿದ ಸುಪ್ರಸಿದ್ದ ನಟ

ಬಾಲಿವುಡ್ ಬೇಡಿಕೆಯ ಸ್ಟಾರ್ ನಟ ಇತ್ತೀಚೆಗೆ ಖ್ಯಾತ ನಟಿ ಜಾಹ್ನವಿ ಕಪೂರ್ ಅವರ ಐಷರಾಮಿ ಮನೆಯನ್ನ ಖರೀದಿ ಮಾಡಿ ಸುದ್ದಿಯಾಗಿದ್ದಾರೆ. ಹಿಂದಿ ಚಿತ್ರರಂಗದಲ್ಲಿ ಇದೀಗ ಸ್ಟಾರ್ ನಟ ನಟಿಯರು ದುಬಾರಿ ಬೆಲೆಯ ಐಷಾರಾಮಿ ಮನೆ ಖರೀದಿ ಮಾಡುವ ಮೂಲಕ ಬಿಟೌನ್ ನಲ್ಲಿ ಭಾರಿ ಸುದ್ದಿಯಾಗುತ್ತಿದ್ದಾರೆ. ಅದರಂತೆ ಇದೀಗ ಬಾಲಿವುಡ್ ನ ಸ್ಟಾರ್ ನಟ ರಾಜ್ ಕುಮಾರ್ ರಾವ್ ಕೂಡ ಮುಂಬೈನಲ್ಲಿ ಐಷಾರಾಮಿ ಮನೆಯೊಂದನ್ನು ಖರೀದಿ ಮಾಡಿದ್ದಾರೆ. ರಾಜ್ ಕುಮಾರ್ ರಾವ್ ಖರೀದಿ ಮಾಡಿರುವ ಈ ಮನೆ ನಟಿ ಜಾಹ್ನವಿ ಕಪೂರ್ ಅವರದ್ದು ಎಂಬುದೇ ವಿಶೇಷವಾದದ್ದು. ಹೌದು ನಟಿ ಜಾಹ್ನವಿ ಕಪೂರ್ ಮತ್ತು ರಾಜ್ ಕುಮಾರ್ ರಾವ್ ಅವರು ಒಟ್ಟಿಗೆ ಒಂದಷ್ಟು ಸಿನಿಮಾಗಳಲ್ಲಿ ನಟಿಸಿದ್ದಾರೆ. ಜಾಹ್ನವಿ ಕಪೂರ್ ಅವರು ಈ ಮನೆಯನ್ನು 39 ಕೋಟಿಗೆ ಖರೀದಿ ಮಾಡಿದ್ದರು.

ಒಂದಷ್ಟು ವರ್ಷಗಳ ಕಾಲ ವಾಸವಿದ್ದ ಈ ಮನೆಯನ್ನ ಇದೀಗ ತಮ್ಮ ಸಹ ನಟ ರಾಜ್ ಕುಮಾರ್ ರಾವ್ ಅವರಿಗೆ ಬರೋಬ್ಬರಿ 44 ಕೋಟಿಗೆ ಮಾರಾಟ ಮಾಡಿದ್ದಾರೆ. ಈ ಮೂಲಕ ನಟಿ ಜಾಹ್ನವಿ ಕಪೂರ್ ಅವರು ಐದು ಕೋಟಿ ಲಾಭ ಮಾಡಿಕೊಂಡಿದ್ದಾರೆ. ಜಾಹ್ನವಿ ಕಪೂರ್ ಮತ್ತು ರಾಜ್ ಕುಮಾರ್ ರಾವ್ ಅವರು ರೂಹಿ ಎಂಬ ಹಾಸ್ಯ ಪ್ರಧಾನ ಚಿತ್ರದಲ್ಲಿ ನಟಿಸಿದ್ದಾರೆ. ಇದರ ಜೊತೆಗೆ ಮತ್ತೆ ಶರಣ್ ಶರ್ಮಾ ನಿರ್ದೇಶನದ ಮಿಸ್ಟರ್ ಅಂಡ್ ಮಿಸಸ್ ಮಹಿ ಎಂಬ ಚಿತ್ರದಲ್ಲಿ ಜಾಹ್ನವಿ ಕಪೂರ್ ಮತ್ತು ರಾಜ್ ಕುಮಾರ್ ರಾವ್ ಜೋಡಿಯಾಗಿ ನಟಿಸಿದ್ದಾರೆ. ಇನ್ನು ರಾಜ್ ಕುಮಾರ್ ಅವರು ಖರೀದಿ ಮಾಡಿರುವ ಈ ಮನೆಯು 3456 ಚದರ ಅಡಿ ಸುತ್ತಳತೆ ಹೊಂದಿದ್ದು, ಪ್ರತಿ ಚದರ ಅಡಿಗೆ 1.27 ಲಕ್ಷರೂ ಮಾರುಕಟ್ಟೆ ಬೆಲೆಯನ್ನ ಹೊಂದಿದೆ.

ರಾಜ್ ಕುಮಾರ್ ರಾವ್ ಅವರು ಪತ್ರಲೇಖಾ ಎಂಬುವರನ್ನ ಮದುವೆಯಾದ ನಂತರ ಸಂಪೂರ್ಣ ವ್ಯಕ್ತಿಯಾಗಿದ್ದಾರಂತೆ. ಸದ್ಯಕ್ಕೆ ರಾಜ್ ಕುಮಾರ್ ರಾವ್ ಭಿಡೆ, ಸೆಕೆಂಡ್ ಇನ್ನಿಂಗ್ಸ್, ಗನ್ಸ್ ಅಂಡ್ ಗುಲಾಬ್ಸ್, ಶ್ರೀಕಾಂತ್ ಭೋಲಾ ಅವರ ಜೀವನಾಧರಿತ ಸಿನಿಮಾ ಸ್ವಾಗತ್ ಹೈ ಸೇರಿದಂತೆ ಸಾಲು ಸಾಲು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಇನ್ನು ರಾಜ್ ಕುಮಾರ್ ರಾವ್ ಮತ್ತು ಜಾಹ್ನವಿ ಕಪೂರ್ ಅವರು ಜೋಡಿಯಾಗಿ ನಟಿಸಿರುವ ಮಿಸ್ಟರ್ ಅಂಡ್ ಮಿಸಸ್ ಮಹಿ ಸಿನಿಮಾ ಇದೇ ಡಿಸೆಂಬರ್ ತಿಂಗಳಿನಲ್ಲಿ ರಿಲೀಸ್ ಆಗಲಿದೆ ಎಂದು ತಿಳಿದು ಬಂದಿದೆ. ಇನ್ನು ಮುಂಬೈನಲ್ಲಿ ಪ್ರಸಿದ್ದ ಅಪಾರ್ಟ್ ಮೆಂಟ್ ವೊಂದರಲ್ಲಿ ಇತ್ತೀಚೆಗೆ ರಣ್ ವೀರ್ ಸಿಂಗ್ ಕೂಡ ದುಬಾರಿ ಬೆಲೆಯ ಫ್ಲ್ಯಾಟ್ ವೊಂದನ್ನ ಖರೀದಿ ಮಾಡಿದ್ದರು‌. ಇದೀಗ ರಾಜ್ ಕುಮಾರ್ ರಾವ್ ಅವರು ಕೂಡ 44 ಕೋಟಿ ಮೌಲ್ಯದ ಮನೆ ಖರೀದಿ ಮಾಡಿ ಸುದ್ದಿಯಾಗಿದ್ದಾರೆ.

Leave a Reply

%d bloggers like this: