ಬರೊಬ್ಬರಿ 350 ಕೋಟಿ ವೆಚ್ಚದಲ್ಲಿ ಸ್ವಂತ ಸ್ಟುಡಿಯೋ ಕಟ್ಟಿಸಿದ ದಕ್ಷಿಣ ಭಾರತದ ಸ್ಟಾರ್ ನಟನ ತಂದೆ

ತೆಲುಗು ಚಿತ್ರರಂಗದ ಯೂಥ್ ಐಕಾನ್ ಅಂತಾನೇ ಕರೆಸಿಕೊಳ್ಳೋ ನಟ ಅಲ್ಲು ಅರ್ಜುನ್ ಅವರ ತಂದೆ ಇದೀಗ ಹೊಸದೊಂದು ಕೊಡುಗೆ ನೀಡುತ್ತಿದ್ದಾರೆ. ಅಲ್ಲು ಅರ್ಜುನ್ ಅವರ ತಂದೆ ಅಲ್ಲು ಅರವಿಂದ್ ಅವರಿಗೆ ಇದೊಂದು ಕನಸಿನ ಯೋಜನೆ ಆಗಿತ್ತಂತೆ. ಇದೀಗ ಆ ಯೋಜನೆಯನ್ನ ಅವರು ಈಡೇರಿಸಿ ಲೋಕಾರ್ಪಣೆ ಮಾಡಲು ಮುಂದಾಗುತ್ತಿದ್ದಾರೆ. ಅದೂ ಕೂಡ ದಸರಾ ಹಬ್ಬದಂದೇ ಅನ್ನೋದು ವಿಶೇಷ. ಅದೇನು ಅನ್ನೋದನ್ನ ಈ ಲೇಖನದಲ್ಲಿ ತಿಳಿಯೋಣ. ಟಾಲಿವುಡ್ ಸ್ಟೈಲೀಶ್ ಸ್ಟಾರ್ ನಟ ಅಲ್ಲು ಅರ್ಜುನ್ ಅವರು ಪ್ಯಾನ್ ಇಂಡಿಯಾ ಸಿನಿಮಾ ಪುಷ್ಪಾ ಸಿನಿಮಾದ ಯಶಸ್ಸಿನ ನಂತರ ದೇಶಾದ್ಯಂತ ಅಪಾರ ಜನಪ್ರಿಯತೆ ಮತ್ತು ಬೇಡಿಕೆಯ ನಟರಾಗಿ ಗುರುತಿಸಿಕೊಂಡಿದ್ದಾರೆ‌. ಅವರ ಮುಂದಿನ ಸಿನಿಮಾಗಾಗಿ ಅವರ ಅಭಿಮಾನಿಗಳು ಬಹಳ ಕಾತುರದಿಂದ ಕಾಯುತ್ತಿದ್ದಾರೆ.

ಅದ್ರಂತೆ ಪುಷ್ಪಾ ಭಾಗ-2 ಸಿನಿಮಾ ಕೂಡ ರಿಲೀಸ್ ಗೆ ರೆಡಿ ಆಗ್ತಾ ಇದೆ. ಇದರ ನಡುವೆ ಅಲ್ಲು ಕುಟುಂಬದಿಂದ ತೆಲುಗು ಚಿತ್ರರಂಗಕ್ಕೆ ಸರ್ಪ್ರೈಸ್ ವೊಂದು ಸಿಗ್ತಿದೆ. ಅದು ಬೇರೇನೂ ಅಲ್ಲ ಸಿನಿಮಾ ಸ್ಟೂಡಿಯೋ. ಪ್ರತಿಯೊಬ್ಬ ಸಿನಿಮಾ ಸ್ಟಾರ್, ನಿರ್ದೇಶಕ, ನಿರ್ಮಾಪಕರಿಗೆ ತಾವು ಸಿನಿಮಾ ರಂಗಕ್ಕೆ ಏನಾದರೊಂದು ಕೊಡುಗೆ ನೀಡಬೇಕು ಎಂಬ ಕನಸು ಇದ್ದೇ ಇರುತ್ತೆ. ಅದೇ ರೀತಿ ಕನಸು ಅಲ್ಲು ಅರ್ಜುನ್ ಅವರ ತಂದೆ ಅಲ್ಲು ಅರವಿಂದ್ ಅವರಿಗೂ ಕೂಡ ಇತ್ತು. ಹಾಗಾಗಿ ಅಲ್ಲು ಅರವಿಂದ್ ಅವರು ಎರಡು ವರ್ಷಗಳ ಹಿಂದೆ ಘೋಷಣೆ ಮಾಡಿದ ಹಾಗೆಯೇ ಬರೋಬ್ಬರಿ 350 ಕೋಟಿ ದುಬಾರಿ ವೆಚ್ಚದಲ್ಲಿ ಸ್ಟೂಡಿಯೋವೊಂದನ್ನ ನಿರ್ಮಿಸಿದ್ದಾರೆ. ಈ ಸ್ಟೂಡಿಯೋಗೆ ಅಲ್ಲು ಸ್ಟೂಡಿಯೋ ಅಂತಾನೇ ಹೆಸರಿಡಲಾಗಿದೆ. ಈ ಅಲ್ಲು ಸ್ಟೂಡಿಯೋ ದಸರಾ ಹಬ್ಬದ ಪ್ರಯುಕ್ತ ಅಕ್ಟೋಬರ್ 1ರಂದು ಲೋಕಾರ್ಪಣೆ ಆಗಲಿದೆ ಎಂದು ತಿಳಿದು ಬಂದಿದೆ. ಹೀಗಾಗಿ ಅಲ್ಲು ಅರವಿಂದ್ ಅವರ ಕನಸು ನನಸಾಗಿರುವುದಕ್ಕೆ ತೆಲುಗು ಚಿತ್ರರಂಗದ ಗಣ್ಯರು, ಅಲ್ಲು ಅರ್ಜುನ್ ಅವರ ಹಿತೈಷಿ ಅಭಿಮಾನಿಗಳು ಶುಭ ಹಾರೈಸಿದ್ದಾರೆ.

Leave a Reply

%d bloggers like this: