ಬರೋಬ್ಬರಿ 3 ವರ್ಷಗಳ ಬಳಿಕ ಗುಡ್ ನ್ಯೂಸ್ ಕೊಟ್ಟ ಮೇಘನಾ ರಾಜ್! ಎಲ್ಲರು ಖುಷಿಪಡುವ ಸುದ್ದಿ

ಕನ್ನಡ ಚಿತ್ರರಂಗದ ಖ್ಯಾತ ಹಿರಿಯ ಕಲಾವಿದರಾದ ನಟ ಸುಂದರ್ ರಾಜ್ ಮತ್ತು ನಟಿ ಪ್ರಮೀಳಾ ಜೋಶಿ ಅವರ ಪುತ್ರಿ ಮೇಘನಾ ರಾಜ್ ಕೂಡ ತಮ್ಮ ಪೋಷಕರಂತೆ ಬಣ್ಣದ ಕ್ಷೇತ್ರಕ್ಕೆ ಹೆಜ್ಜೆ ಇಟ್ಟು ತಮ್ಮ ನಟನಾ ಪ್ರತಿಭೆಯಿಂದಾಗಿ ಕನ್ನಡ ಮಾತ್ರ ಅಲ್ಲದೆ ಮಲೆಯಾಳಂ ಚಿತ್ರರಂಗದಲ್ಲಿಯೂ ಕೂಡ ನಟಿಸಿ ಸೈ ಎನಿಸಿಕೊಂಡಿದ್ದಾರೆ.ಅಂತೆಯೇ ನಟಿ ಮೇಘನಾ ರಾಜ್ ಅವರು ತಮ್ಮ ಸಿನಿ ವೃತ್ತಿ ಜೀವನದಲ್ಲಿ ಯಶಸ್ಸು ಪಡೆಯುತ್ತಾರೆ. ಇದರ ನಡುವೆ ಯುವ ಸಾಮ್ರಾಟ್ ಖ್ಯಾತಿಯ ನಟ ಚಿರಂಜೀವಿ ಸರ್ಜಾ ಅವರನ್ನು ಒಂದಷ್ಟು ವರ್ಷಗಳ ಕಾಲ ಪ್ರೀತಿಸಿ ತದನಂತರ ಕುಟುಂಬದ ಒಪ್ಪಿಗೆ ಪಡೆದು ಮದುವೆಯನ್ನು ಕೂಡ ಆಗುತ್ತಾರೆ‌. ಆದರೆ ಮದುವೆಯಾದ ಎರಡೇ ವರ್ಷದಲ್ಲಿ ನಟ ಚಿರಂಜೀವಿ ಸರ್ಜಾ ಅವರು ನಿಧನ ಹೊಂದುತ್ತಾರೆ. ಇದು ಮೇಘನಾ ರಾಜ್ ಅವರು ಬದುಕಿನಲ್ಲಿ ಘೋರ ದುರಂತವಾಗಿ ಬಿಡುತ್ತದೆ.

ಏಕೆಂದರೆ ಚಿರಂಜೀವಿ ಸರ್ಜಾ ನಿಧನರಾದಾಗ ಮೇಘನಾ ರಾಜ್ ತುಂಬು ಗರ್ಭಿಣಿ ಆಗಿರುತ್ತಾರೆ. ಇಂತಹ ಸಮಯದಲ್ಲಿಯೇ ತನ್ನ ಪ್ರೀತಿಯ ಪತಿ ದೂರ ಆದಾಗ ಆ ನೋವು ಆ ಹೆಣ್ಣು ಮಗಳಿಗೆ ಮಾತ್ರ ತಿಳಿಯುತ್ತದೆ. ಇದೆಲ್ಲದರ ಕೆಟ್ಟ ಘಟನೆಗಳಿಂದ ಮನನೊಂದ ನಟಿ ಮೇಘನಾ ರಾಜ್ ಅವರು ಬಣ್ಣದ ಲೋಕದಿಂದ ಅಂತರ ಕಾಯ್ದುಕೊಂಡಿರುತ್ತಾರೆ. ಇದೀಗ ಮತ್ತೆ ನಟಿ ಮೇಘನಾರಾಜ್ ಅವರು ಬಣ್ಣ ಹಚ್ಚಲು ಸಿದ್ದವಾಗಿದ್ದಾರೆ. ಅದರ ಹಿನ್ನೆಲೆಯಾಗಿ ಈಗಾಗಲೇ ಕೆಲವು ಜಾಹೀರಾತು ಮತ್ತು ಒಂದೆರಡು ಚಿತ್ರಗಳಿಗೆ ಸಹಿ ಕೂಡ ಮಾಡಿದ್ದಾರೆ. ಇದರ ಜೊತೆಗೆ ಕಿರುತೆರೆಯ ಡ್ಯಾನ್ಸಿಂಗ್ ರಿಯಾಲಿಟಿ ಶೋ ವೊಂದರ ಜಡ್ಜ್ ಆಗಿ ಬರುತ್ತಿದ್ದಾರೆ.ಹೌದು ಸದ್ಯದ ದಿನಮಾನಗಳಲ್ಲಿ ಕನ್ನಡ ಕಿರುತೆರೆ ಕ್ಷೇತ್ರದಲ್ಲಿ ಹೊಸ ವಿಭಿನ್ನ ಧಾರಾವಾಹಿ ಮತ್ತು ರಿಯಾಲಿಟಿ ಶೋ ಗಳ ಮೂಲಕ ನಾಡಿನ ಮನೆ ಮಾತಾಗಿ ಅಪಾರ ಜನಪ್ರಿಯತೆ ಪಡೆದಿರುವ ವಾಹಿನಿ ಅಂದರೆ ಅದು ಕಲರ್ಸ್ ಕನ್ನಡ ವಾಹಿನಿ.

ಈ ಕಲರ್ಸ್ ಕನ್ನಡ ವಾಹಿನಿಯಲ್ಲಿ ಡ್ಯಾನ್ಸಿಂಗ್ ಚಾಂಪಿಯನ್ ಎಂಬ ಹೊಸ ಶೋ ಆರಂಭವಾಗಲಿದ್ದು, ಈ ಡ್ಯಾನ್ಸಿಂಗ್ ಚಾಂಪಿಯನ್ ಜಡ್ಜ್ ಗಳಾಗಿ ಮೂವರು ನಿರ್ಣಾಯಕರು ಇರುತ್ತಾರೆ. ಅವರಲ್ಲಿ ಚಂದನವನದ ಚಿನ್ನಾರಿ ಮುತ್ತಾ ಖ್ಯಾತಿಯ ನಟ ವಿಜಯ್ ರಾಘವೇಂದ್ರ ಮತ್ತು ಖ್ಯಾತ ಡ್ಯಾನ್ಸರ್ ಮಯೂರಿ ಭಾಗವಹಿಸುತ್ತಿದ್ದಾರೆ. ಇವರ ಜೊತೆಗೆ ಮೂರನೇ ತೀರ್ಪುಗಾರರಾಗಿ ಇದೀಗ ಸ್ಯಾಂಡಲ್ ವುಡ್ ನ ಖ್ಯಾತ ನಟಿ ಯಾದ ಮೇಘನಾ ರಾಜ್ ಭಾಗವಹಿಸುತ್ತಿದ್ದಾರೆ. ಈ ಮೂಲಕ ಮೇಘನಾ ರಾಜ್ ಅವರು ಮತ್ತೆ ಬಣ್ಣದ ಲೋಕಕ್ಕೆ ಎಂಟ್ರಿಯಾಗಿದ್ದಾರೆ. ಇದು ಅವರ ಅಭಿಮಾನಿಗಳಿಗೆ ಸಂತಸದ ವಿಚಾರವಾಗಿದೆ.

Leave a Reply

%d bloggers like this: