ಬರೋಬ್ಬರಿ 15 ವರ್ಷಗಳ ಬಳಿಕ ಕನ್ನಡ ಚಿತ್ರದಲ್ಲಿ ದೀಪಿಕಾ ಪಡುಕೋಣೆ! ಯಾವ ಚಿತ್ರ ಗೊತ್ತಾ

ಬರೋಬ್ಬರಿ 15 ವರ್ಷಗಳ ಬಳಿಕ ಕನ್ನಡದಲ್ಲಿ ಬಾಲಿವುಡ್ ಡಿಂಪಿ…! ಬಾಲಿವುಡ್ ನ ಅತ್ಯಂತ ಜನಪ್ರಿಯ ಬಹು ಬೇಡಿಕೆಯ ನಟಿಯರಲ್ಲಿ ಒಬ್ಬರಾಗಿರುವ ನಟಿ ದೀಪಿಕಾ ಪಡಕೋಣೆ ಇದೀಗ ಕನ್ನಡ ಭಾಷೆಯಲ್ಲಿ ಬೆಳ್ಳಿ ತೆರೆಯ ಮೇಲೆ ಕಾಣಿಸಿಕೊಳ್ಳುತ್ತಿದ್ದಾರೆ. 2006 ರಲ್ಲಿ ಇಂದ್ರಜಿತ್ ಲಂಕೇಶ್ ನಿರ್ದೇಶನದಲ್ಲಿ ರಿಯಲ್ ಸ್ಟಾರ್ ಉಪೇಂದ್ರ ಅಭಿನಯದ ಐಶ್ವರ್ಯ ಸಿನಿಮಾದ ಮೂಲಕ ಸಿನಿಮಾ ಲೋಕಕ್ಕೆ ಪಾದಾರ್ಪಣೆ ಮಾಡಿದ ದೀಪಿಕಾ ಪಡುಕೋಣೆ ಈ ಚಿತ್ರದಲ್ಲಿ ಸಖತ್ ಬೋಲ್ಡ್ ಆಗಿಯೇ ನಟಿಸಿದ್ದರು. ಉಪೇಂದ್ರ, ದೀಪಿಕಾ ಪಡುಕೋಣೆ,ಡೈಸಿ ಬೋಪಣ್ಣ ಮುಖ್ಯ ಭೂಮಿಕೆಯ ಈ ಐಶ್ವರ್ಯ ಸಿನಿಮಾದ ಯಶಸ್ಸಿನ ನಂತರ ನಟಿ ದೀಪಿಕಾ ಪಡುಕೋಣೆ ಅವರಿಗೆ ಬಾಲಿವುಡ್ ನಲ್ಲಿ ಅವಕಾಶ ಸಿಗುತ್ತದೆ. ಬಾಲಿವುಡ್ ಪ್ರವೇಶ ಪಡೆದ ನಟಿ ದೀಪಿಕಾ ಪಡುಕೋಣೆ ಮತ್ತೆ ಸ್ಯಾಂಡಲ್ ವುಡ್ ಕಡೆಗೆ ತಿರುಗಿ ನೋಡಿದ್ದೇ ಇಲ್ಲ.

ಹಿಂದಿಯಲ್ಲಿ ನಟಿ ದೀಪಿಕಾ ಪಡುಕೋಣೆ ನಟಿಸಿದ ಸಿನಿಮಾಗಳು ಸಾಲು ಸಾಲು ಸೂಪರ್ ಹಿಟ್ ಆಗಿ ಬಾಲಿವುಡ್ ಬೇಡಿಕೆಯ ಜನಪ್ರಿಯ ನಟಿಯಾಗಿ ಹೊರ ಹೊಮ್ಮಿದ ದೀಪಿಕಾ ಪಡುಕೋಣೆ ಸ್ಟಾರ್ ನಟ ರಣ್ ವೀರ್ ಸಿಂಗ್ ಅವರನ್ನು ತಮ್ಮ ಬಾಳ ಸಂಗಾತಿಯಾಗಿ ಸ್ವೀಕರಿಸಿದ್ದಾರೆ. ಈ ಸ್ಟಾರ್ ಜೋಡಿ ಮದುವೆಯಾದ ಮೇಲೆ ಒಟ್ಟಿಗೆ ತೆರೆ ಹಂಚಿಕೊಳ್ಳುತ್ತಿರುವ ಮೊದಲ ಸಿನಿಮಾ ಅಂದರೆ ಅದು 83 ಎಂಬ ಸಿನಿಮಾ.1983 ರಲ್ಲಿ ನಡೆದ ವಿಶ್ವಕಪ್ ಕ್ರಿಕೆಟ್ ನಲ್ಲಿ ಕಪಿಲ್ ದೇವ್ ನಾಯಕತ್ವದಲ್ಲಿ ಭಾರತ ತಂಡ ವಿಶ್ವಕಪ್ ಗೆದ್ದಿತ್ತು. ಈ ರೋಚಕ ಪಂದ್ಯವನ್ನೇ ಕಥೆಯ ಎಳೆಯನ್ನಾಗಿ ಇಟ್ಟುಕೊಂಡು ಬಾಲಿವುಡ್ ಖ್ಯಾತ ನಿರ್ದೇಶಕ ಕಬೀರ್ ಖಾನ್ 83 ಎಂದು ಟೈಟಲ್ ಸಿನಿಮಾ ಮಾಡಿದ್ದಾರೆ. ಈ 83 ಚಿತ್ರದಲ್ಲಿ ಕಪಿಲ್ ದೇವ್ ಪಾತ್ರದಲ್ಲಿ ನಟ ರಣ್ ವೀರ್ ಸಿಂಗ್ ನಟಿಸಿದ್ದಾರೆ. ರಣ್ ವೀರ್ ಸಿಂಗ್ ಅವರಿಗೆ ಜೋಡಿಯಾಗಿ ದೀಪಿಕಾ ಪಡುಕೋಣೆ ಅಭಿನಯಿಸಿದ್ದಾರೆ.

ಈ 83 ಸಿನಿಮಾದ ಮುಖ್ಯಭೂಮಿಕೆಯಲ್ಲಿ ರಣ್ ವೀರ್ ಸಿಂಗ್, ದೀಪಿಕಾ ಪಡುಕೋಣೆ, ಜೀವಾ,ತಾಹೀರ್ ರಾಜ್ ಬಾಶಿನ್ ಕಾಣಿಸಿಕೊಂಡಿದ್ದಾರೆ. ಈ ಕ್ರೀಡಾಧಾರಿತ 83 ಸಿನಿಮಾಗೆ ಜ್ಯೂಲಿಯಸ್ ಪ್ಯಾಕಿಯಮ್ ಅವರ ರಾಗ ಸಂಯೋಜನೆಯಿದೆ. ಇದೇ ಡಿಸೆಂಬರ್ 24 ಕ್ರಿಸ್ ಮಸ್ ಹಬ್ಬದಂದು 83 ಸಿನಿಮಾ ಹಿಂದಿ ಸೇರಿದಂತೆ ಭಾರತದ ಎಲ್ಲಾ ಪ್ರಾದೇಶಿಕ ಭಾಷೆಗಳಿಗೆ ಡಬ್ ಆಗಿ ಬಿಡಗಡೆಯಾಗಲಿದೆ ಎಂದು ತಿಳಿದು ಬಂದಿದೆ. ಹೀಗಾಗಿ ನಟಿ ದೀಪಿಕಾ ಪಡುಕೋಣೆ ಅವರನ್ನ ಐಶ್ವರ್ಯ ಚಿತ್ರದ ನಂತರ ಕನ್ನಡ ಭಾಷೆಯ ಸಿನಿಮಾದಲ್ಲಿ ಕಾಣಬಹುದಾಗಿದೆ. ಇದು ಅವರ ಅಭಿಮಾನಿಗಳಿಗೆ ಸಖತ್ ಸುದ್ದಿಯಾಗಿದೆ.83 ಸಿನಿಮಾ ಬಿಡುಗಡೆಗೂ ಮುನ್ನ ಇದೇ ನವೆಂಬರ್ 30 ರಂದು ಟ್ರೇಲರ್ ಬಿಡುಗಡೆ ಮಾಡುವುದಾಗಿ ಚಿತ್ರತಂಡ ತಿಳಿಸಿದೆ. ಬಾಲಿವುಡ್ ಬಹು ನಿರೀಕ್ಷಿತ ಚಿತ್ರಗಳಲ್ಲಿ ಒಂದಾಗಿರುವ ಈ 83 ಸಿನಿಮಾಗೆ ವಿಷ್ಣುವರ್ಧನ್ ಇಂಧೂರಿ ಸೇರಿದಂತೆ ನಿರ್ದೇಶಕ ಕಬೀರ್ ಖಾನ್ ಮತ್ತು ನಟಿ ದೀಪಿಕಾ ಪಡುಕೋಣೆ ಕೂಡ ಬಂಡವಾಳ ಹೂಡಿದ್ದಾರೆ.