ಬರೋಬ್ಬರಿ 129 ಮಕ್ಕಳ ತಂದೆಯಾದ ವ್ಯಕ್ತಿ! ಮಹಾಭಾರತದ ಧೃತರಾಷ್ಟ್ರ ಅವರನ್ನು ಮೀರಿಸಿ ಈ ಕಲಿಯುಗದಲ್ಲಿ 150 ಮಕ್ಕಳ ತಂದೆ ಆಗಲು ಹೊರಟಿದ್ದಾನೆ ಈತ…!

ಮಹಾಭಾರತದ ಧೃತರಾಷ್ಟ್ರ ಮತ್ತು ಗಾಂಧಾರಿ ದಂಪತಿಗಳನ್ನ ಮೀರಿಸಿ ಈ ಕಲಿಯುಗದಲ್ಲಿ ನೂರೈವತ್ತು ಮಕ್ಕಳ ತಂದೆ ಆಗಲು ಹೊರಟಿದ್ದಾನೆ ಈತ…! ಮನೆಗೊಂದು ಮಗುವಿರಲಿ ಎಂಬುದು ಸರ್ಕಾರದ ವಾಕ್ಯ. ಆದರೆ ಇದನ್ನ ಎಲ್ಲರೂ ಪಾಲಿಸುವುದಿಲ್ಲ. ಕನಿಷ್ಟ ಅಂದರು ಇಬ್ಬರು ಮೂವರು ಮಕ್ಕಳನ್ನ ಪಡೆದೇ ಪಡೆಯುತ್ತಿದ್ದಾರೆ. ಬಹಳ ಹಿಂದೆ ಹೆಚ್ಚೇನೂ ಇಲ್ಲ ಕೇವಲ ಇಪ್ಪತ್ತು ಮೂವತ್ತು ವರ್ಷಗಳ ಹಿಂದೆ ಮನೆ ತುಂಬಾ ಮಕ್ಕಳಿರುತ್ತಿದ್ದರು.ಆಗ ದೊಡ್ಡ ಕುಟುಂಬವನ್ನು ನೋಡಬಹುದಾಗಿತ್ತು. ಆದರೆ ಇಂದಿನ ಆಧುನಿಕ ಜೀವನ ಶೈಲಿ ಒತ್ತಡದ ಬದುಕು ಆಹಾರ ಕ್ರಮದಿಂದಾಗಿ ಬಹುತೇಕರಿಗೆ ಮಕ್ಕಳೇ ಆಗುವುದಿಲ್ಲ. ಇಂತಹ ದಿನಮಾನಗಳಲ್ಲಿ ಈ ವ್ಯಕ್ತಿ ಬರೋಬ್ಬರಿ 129 ಮಕ್ಕಳ ಜನ್ಮಕ್ಕೆ ಕಾರಣನಾಗಿದ್ದಾನೆ. ಹಾಗಂತ ಈತ ಎಷ್ಟು ಮದುವೆ ಆಗಿರಬಹುದು ಎಂದು ಪ್ರಶ್ನೆ ಮೂಡಿಸಿಕೊಳ್ಳಬೇಡಿ. ಈತನಿಗೆ ಆಗಿದ್ದು ಒಂದೇ ಮದುವೆ. ಅದೇ ಅಲ್ಲದೆ ಅವಳ ಹೆಂಡತಿ ಇಂದ ಕೂಡ ಈಗ ದೂರ ಇದ್ದಾನೆ. ಹೀಗಿರುವಾಗ ಈ ವ್ಯಕ್ತಿಗೆ ಹೇಗೆ ಇಷ್ಟೊಂದು ಮಕ್ಕಳು ಎಂದು ಗೊಂದಲವಾಗಿದ್ದೀರಾ ಮುಂದೆ ಓದಿ.

ಬ್ರಿಟನ್ ದೇಶದ ಡರ್ಬಿಯ ಚಾಡೆಸ್ಡೆನ್ ನಿವಾಸಿಯಾಗಿರುವ ನಿವೃತ್ತ ಶಿಕ್ಷಕ ಕ್ಲೈವ್ಸ್ ಜೋನ್ಸ್ ಎಂಬ ಅರವತ್ತಾರು ವರ್ಷದ ಈ ವ್ಯಕ್ತಿ ಬರೋಬ್ಬರಿ 129 ಮಕ್ಕಳ ಜನ್ಮಕ್ಕೆ ಕಾರಣನಾಗಿದ್ದಾನೆ. ಹೇಗೆ ಗೊತ್ತಾ.. ಈತ ತನ್ನ ವೀರ್ಯಾವನ್ನು ಮಕ್ಕಳಿಲ್ಲದವರಿಗೆ ಉಚಿತವಾಗಿ ದಾನ ಮಾಡಿ ಬರೋಬ್ಬರಿ ನೂರಿಪ್ಪತ್ತು ಮಕ್ಕಳ ಹುಟ್ಟಿಗೆ ಕಾರಣನಾಗಿದ್ದಾನೆ. ಇನ್ನೂ ಕೆಲವೇ ವರ್ಷಗಳಲ್ಲಿ ತನ್ನ ಮಕ್ಕಳ ಸಂಖ್ಯೆಯನ್ನ ನೂರೈವತ್ತಿಗೆ ತಲುಪಿಸುವ ಗುರಿ ಹೊಂದಿದ್ದಾನಂತೆ ಕ್ಲೈವ್ ಜೋನ್ಸ್. ಈ ಕ್ಲೈವ್ ಜೋನ್ಸ್ ತನ್ನ ವೀರ್ಯ ವನ್ನು ಯಾರಿಗೆ ಅಗತ್ಯ ಇದ್ಯೋ ಅವರ ಮಾಹಿತಿ ತಿಳಿದುಕೊಂಡು ತಾನೇ ಸ್ವತಃ ಅವರ ಮನಗೆ ಭೇಟಿ ನೀಡಿ ದಂಪತಿಗಳ ಬಳಿ ಮಾತನಾಡಿ ತನ್ನ ಸ್ಪರ್ಮ್ ನೀಡಿ ಬರುತ್ತಾನಂತೆ. ಅಷ್ಟೇ ಅಲ್ಲದೆ ಈ ವ್ಯಕ್ತಿ ತನ್ನ ಫರ್ಮ್ ಇಂದ ಜನಿಸಿದ ಮಕ್ಕಳ ಬಗ್ಗೆಯೂ ಕೂಡ ಅಪ್ ಡೇಟ್ ಪಡೆಯುತ್ತಿರುತ್ತಾನಂತೆ.

ತನ್ನ ಸ್ಪರ್ಮ್ ಇಂದ ಜನಿಸಿದ ಮಕ್ಕಳನ್ನ ನೋಡಲು ಆಗಾಗ ಅವರ ಮನೆಗಳಿಗೆ ಹೋಗಿ ಕುಶಲೋಪರಿ ವಿಚಾರಿಸುತ್ತಾರಂತೆ. ಡೈಲಿಮೇಲ್ ವರದಿಯ ಪ್ರಕಾರ ಕ್ಲೈವ್ ಜೋನ್ಸ್ ಅವರಿಗೆ ಹೆಲ್ತ್ ಎಕ್ಸ್ ಪರ್ಟ್ ಗಳು ಅನುಮತಿ ಇಲ್ಲದ ಕ್ಲಿನಿಕ್ ಗಳ ಮೂಲಕ ಮಾತ್ರ ನೀವು ಸ್ಪರ್ಮ್ ನೀಡಬೇಕು ಎಂದು ಎಚ್ಚರಿಕೆ ನೀಡಿದ್ದರಂತೆ. ಆದರೆ ಜೋನ್ಸ್ ಅವರು ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಅಗತ್ಯ ಇರುವವರಿಗೆ ಉಚಿತವಾಗಿ ವೀರ್ಯ ನೀಡುವುದಾಗಿ ಪೋಸ್ಟ್ ಹಾಕುತ್ತಾರಂತೆ. ಈ ಮೂಲಕ ಮದುವೆಯಾಗಿ ಮಕ್ಕಳಿಲ್ಲದ ಅನೇಕರು ಇವರನ್ನ ನೇರವಾಗಿ ಭೇಟಿ ಮಾಡಿ ವೀರ್ಯವನ್ನು ಪಡೆಯುತ್ತಿದ್ದಾರೆ. ಇನ್ನು ಇದುವರೆಗೆ ಜನನವಾಗಿರುವ 129 ಮಕ್ಕಳು ಜಗತ್ತಿನ ಬರ್ಮಿಂಗ್ ಹ್ಯಾಮ್, ಸ್ಟೋಕ್, ನಾಟಿಂಗ್ಹ್ಯಾ ಸೇರಿದಂತೆ ವಿವಿಧ ದೇಶಗಳಲ್ಲಿ ನೆಲೆಸಿದ್ದಾರೆ.

Leave a Reply

%d bloggers like this: