ಬರೊಬ್ಬರಿ 1000 ಸಂಚಿಕೆಗಳನ್ನು ಯಶಸ್ವಿಯಾಗಿ ಪೂರೈಸಿದ ಕನ್ನಡದ ಮತ್ತೊಂದು ಜನಪ್ರಿಯ ಧಾರಾವಾಹಿ

ಕನ್ನಡದ ಮತ್ತೊಂದು ಜನಪ್ರಿಯ ಧಾರಾವಾಹಿಯೊಂದು ಸಾವಿರ ಸಂಚಿಕೆಗಳನ್ನ ಪೂರೈಸಿ ಇಡೀ ತಂಡ ಸಂಭ್ರಮಾಚರಣೆ ಮಾಡಿದೆ. ಕನ್ನಡದಲ್ಲಿ ಧಾರಾವಾಹಿಗಳು ಜನರ ಮನಸ್ಸನ್ನ ಗೆಲ್ಲೋದಕ್ಕೆ ಭಾರಿ ಹರ ಸಾಹಸ ಪಡುತ್ತಿವೆ. ಯಾಕಂದ್ರೆ ಇಂದು ಪರಭಾಷಾ ಧಾರಾವಾಹಿಗಳು ಡಬ್ಬಿಂಗ್ ಕನ್ನಡ ಕಿರುತೆರೆಗೆ ಭಾರಿ ಪೈಪೋಟಿ ನೀಡುತ್ತಿವೆ. ಅದರ ಜೊತೆಗೆ ರಿಯಾಲಿಟಿ ಶೋಗಳ ಭರ್ಜರಿ ಮನರಂಜನೆ ಇದೆಲ್ಲದರ ನಡುವೆ ಕನ್ನಡ ಧಾರಾವಾಹಿಗಳು ಕೂಡಾ ನಾವು ಯಾರಿಗೂ ಕಡಿಮೆ ಇಲ್ಲ ಎಂಬಂತೆ ಅದ್ಬುತವಾಗಿ ರಿಚ್ ಆಗಿಯೇ ಮೂಡಿಬರ್ತಿದೆ. ಹಾಗಾಗಿ ನಮ್ಮ ಕನ್ನಡ ಧಾರಾವಾಹಿಗಳಿಗೆ ಪೈಪೋಟಿ ಇದ್ದೇ ಇರುತ್ತದೆ. ಇಷ್ಟು ಪೈಪೋಟಿ ನಡುವೆ ಧಾರಾವಾಹಿ ನಾಡಿನಾದ್ಯಂತ ಅಪಾರ ಜನಪ್ರಿಯತೆ ಗಳಿಸಿ.

ನಿರಂತರವಾಗಿ ವೀಕ್ಷಕರನ್ನ ತಮ್ಮತ್ತ ಹಿಡಿದಿಟ್ಟುಕೊಂಡು ಸಾಗುತ್ತಿದೆ ಅಂದರೆ ಆ ಧಾರಾವಾಹಿ ನಿಜಕ್ಕೂ ಸಹ ಗುಣಮಟ್ಟದ ಧಾರಾವಾಹಿ ಅಂತ ಹೇಳ್ಬೋದು. ಅಂತಹ ಧಾರಾವಾಹಿಗಳ ಪೈಕಿ ಮೊದಲ ಪಂಕ್ತಿಯಲ್ಲಿ ನಿಲ್ಲೋದು ಅಂದ್ರೆ ಜೀ಼ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ಪಾರು ಧಾರಾವಾಹಿ ಸಹ ಒಂದಾಗಿದೆ. ಈ ಧಾರಾವಾಹಿ ಪ್ರತಿದಿನ ಸಂಜೆ 6.30ಕ್ಕೆ ಪ್ರಸಾರವಾಗಲಿದ್ದು, ಕನ್ನಡದ ಖ್ಯಾತ ಹಿರಿಯ ನಟಿ ವಿನಯಾ ಪ್ರಸಾದ್ ಅವರು ಅಖಿಲಾಂಡೇಶ್ವರಿ ಎಂಬ ಪ್ರಧಾನ ಪಾತ್ರದಲ್ಲಿ ನಟಿಸುತ್ತಿದ್ದಾರೆ. ನಟಿ ವಿನಯಾ ಪ್ರಸಾದ್ ಅವರ ನಟನೆಗೆ ವೀಕ್ಷಕರು ಫುಲ್ ಫಿಧಾ ಆಗಿದ್ದಾರೆ. ಆದಿ ಪಾತ್ರದಲ್ಲಿ ಶರತ್ ನಟಿಸುತ್ತಿದ್ದು, ಪಾರು ಪಾತ್ರದಲ್ಲಿ ಮೋಕ್ಷಿತಾ ಪೈ ಅವರು ತಮ್ಮ ಪಾತ್ರಕ್ಕೆ ಜೀವ ತುಂಬಿ ನಟಿಸುತ್ತಿದ್ದಾರೆ.

ಈ ಪಾರು ಪಾತ್ರದ ಮೂಲಕ ನಟಿ ಮೋಕ್ಷಿತಾ ಪೈ ಅವರು ನಾಡಿನ ಮನೆ ಮನಮಗಳಾಗಿ ಗುರುತಿಸಿಕೊಂಡಿದ್ದಾರೆ. ಪಾರು ಧಾರಾವಾಹಿಯ ವಿಶೇಷತೆ ಅಂದರೆ ಪ್ರಮುಖ ತಾರಾಗಣದಲ್ಲಿ ಕಲಾ ಸಾಮ್ರಾಟ್ ಎಸ್.ನಾರಾಯಣ್, ನಾಗೇಂದ್ರ ಶಾ, ನಾಗೇಶ್ ಯಾದವ್, ರಘುರಾಮ್ ಅವರಂತಹ ಹಿರಿಯ ಅನುಭವಿ ಕಲಾವಿದರು ಪಾರು ಧಾರಾವಾಹಿಗೆ ಪ್ಲಸ್ ಪಾಯಿಂಟ್ ಆಗಿದ್ದಾರೆ. ಪಾರು ಧಾರಾವಾಹಿ ಯಾವ ಸಿನಿಮಾದ ಸೆಟ್ ಗೂ ಕಡಿಮೆ ಇಲ್ಲ ಅಷ್ಟರ ಮಟ್ಟಿಗೆ ಪಾರು ಧಾರಾವಾಹಿ ಅದ್ದೂರಿಯಾಗಿ ಮೂಡಿ ಬರುತ್ತಿದೆ. ಇದೀಗ ಈ ಪಾರು ಧಾರಾವಾಹಿ ಬರೋಬ್ಬರಿ ಒಂದು ಸಾವಿರ ಸಂಚಿಕೆಗಳನ್ನ ಪೂರೈಸಿದ್ದು, ಇಡೀ ಧಾರಾವಾಹಿ ತಂಡ ಸಂಭ್ರಮಾಚರಣೆ ಮಾಡಿದೆ.

Leave a Reply

%d bloggers like this: