ಬರೀ 199 ರೂಪಾಯಿ ಚಪ್ಪಲಿ ಹಾಕಿಕೊಂಡು ವೇದಿಕೆಗೆ ಬಂದ ದಕ್ಷಿಣ ಭಾರತದ ಸ್ಟಾರ್ ನಟ, ಕಾರಣ ಏನ್ ಗೊತ್ತಾ

ಸಿನಿಮಾ ಸೆಲೆಬ್ರಿಟಿಗಳು ಸಾಮಾನ್ಯವಾಗಿ ತಮ್ಮ ಸಿನಿಮಾ ಮತ್ತು ಅವುಗಳ ಪ್ರಚಾರ ಕಾರ್ಯದಲ್ಲಿ ಅವರು ತೊಡುವ ಉಡುಗೆ ತೊಡಗೆಗಳ ಮತ್ತು ಅವರ ವೈಯಕ್ತಿಕ ಜೀವನ, ಜೀವನ ಶೈಲಿ ಕುರಿತು ಭಾರಿ ಸುದ್ದಿ ಆಗುತ್ತಾರೆ. ಅದರಂತೆ ಇದೀಗ ತೆಲುಗಿನ ಸ್ಟಾರ್ ನಟ ವಿಜಯ್ ದೇವರಕೊಂಡ ಕೂಡ ತಾವು ಹಾಕೊಂಡಿದ್ದ ಚಪ್ಪಲಿ ವಿಚಾರವಾಗಿ ಇದೀಗ ಮಾಧ್ಯಮ ಮತ್ತು ಸೋಶಿಯಲ್ ಮೀಡಿಯಾಗಳಲ್ಲಿ ಭಾರಿ ಸುದ್ದಿಯಾಗುತ್ತಿದ್ದಾರೆ. ಅಂತಹ ವಿಷಯ ಏನಪ್ಪಾ ಅಂದರೆ ವಿಜಯ್ ದೇವರಕೊಂಡ ಅವರು ಸಾಮಾನ್ಯ ಕುಟುಂಬದಲ್ಲಿ ಬೆಳೆದು ಬಂದವರಾದರು ಕೂಡ ಇಂದು ಅವರು ತೆಲುಗು ಚಿತ್ರರಂಗದ ಸೂಪರ್ ಸ್ಟಾರ್ ನಟರಾಗಿ ಬೆಳೆದಿದ್ದಾರೆ. ಸಿನಿಮಾವೊಂದಕ್ಕೆ ಕೋಟಿ ಕೋಟಿ ಸಂಭಾವನೆ ಪಡೆಯುವ ವಿಜಯ್ ದೇವರಕೊಂಡ ಅವರು ಇದೀಗ ಸಾಲು ಸಾಲು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ.

ಅವುಗಳಲ್ಲಿ ಜನ ಗಣ ಮನ, ಖುಷಿ ಮತ್ತು ಲೈಗರ್. ಲೈಗರ್ ಚಿತ್ರ ಇದೀಗ ಬಿಡುಗಡೆಗೆ ಸಿದ್ದವಾಗಿದೆ. ಪ್ಯಾನ್ ಇಂಡಿಯಾ ಸಿನಿಮಾ ಆಗಿರುವ ಲೈಗರ್ ಚಿತ್ರ ಈಗಾಗಲೇ ಟ್ರೇಲರ್ ಮೂಲಕ ಭಾರಿ ನಿರೀಕ್ಷೆ ಹುಟ್ಟು ಹಾಕಿದೆ. ಅದರಂತೆ ಇತ್ತೀಚೆಗೆ ವಿಜಯ್ ದೇವರಕೊಂಡ ಅವರು ಹೈದರಾಬಾದ್ ನಲ್ಲಿ ಲೈಗರ್ ಚಿತ್ರದ ಟ್ರೇಲರ್ ಲಾಂಚ್ ಕಾರ್ಯಕ್ರಮದಲ್ಲಿ ತುಂಬಾ ಸಿಂಪಲ್ ಆಗಿ ಹವಾಯಿ ಚಪ್ಪಲಿ ಧರಿಸಿ ಬಂದಿದ್ದರು. ಇದನ್ನ ಕಂಡು ಎಲ್ಲಾರು ವಿಜಯ್ ದೇವರಕೊಂಡ ಅವರು ತೀರಾ ಸಿಂಪಲ್ ಆಗಿ ಹವಾಯಿ ಚಪ್ಪಲಿ ಧರಿಸಿ ಬಂದಿದ್ಯಾಕೆ ಎಂಬ ಗೊಂದಲ ಸೃಷ್ಟಿಸಿಕೊಂಡಿದ್ದಾರೆ. ಇತ್ತ ಹವಾಯಿ ಚಪ್ಪಲಿ ಧರಿಸಿ ವಿಜಯ್ ದೇವರಕೊಂಡ ಅವರು ಕ್ಯಾಮೆರಾಗೆ ಪೋಸ್ ಕೊಟ್ಟ ಫೋಟೋಗಳು ಸಾಕಷ್ಟು ಟ್ರೋಲ್ ಆಗಿ ಸೋಶಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗಿದ್ದವು.

ಅಸರಿ ವಿಚಾರ ಏನಪ್ಪಾ ಅಂದರೆ ಲೈಗರ್ ಚಿತ್ರದಲ್ಲಿ ವಿಜಯ್ ದೇವರಕೊಂಡ ಅವರು ಸಾಮಾನ್ಯ ಕುಟುಂಬದ ಯುವಕನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರಂತೆ. ಹಾಗಾಗಿ ಚಿತ್ರದ ಪಾತ್ರಕ್ಕೆ ಹತ್ತಿರವಾಗುವಂತಹ ಡ್ರೆಸ್ ರೆಡಿ ಮಾಡಬೇಕು ಎಂದು ಡಿಸೈನರ್ ಅವರಿಗೆ ಬೇಡಿಕೆ ಇಟ್ಟಿದ್ದರಂತೆ. ಅದರಂತೆ ಕಾಸ್ಟ್ಯುಮ್ ಡಿಸೈನರ್ ಅವರು ಕೂಡ ಲೈಗರ್ ಚಿತ್ರದ ಪಾತ್ರಕ್ಕೆ ಹತ್ತಿರವಾಗುವಂತೆ ವಿಜಯ್ ದೇವರಕೊಂಡ ಅವರ ವಸ್ತ್ರ ವಿನ್ಯಾಸ ಮಾಡಿ ಹವಾಯಿ ಚಪ್ಪಲಿ ಸೆಲೆಕ್ಟ್ ಮಾಡಿದ್ದರು. ಹಾಗಾಗಿ ವಿಜಯ್ ಅವರು ಕೂಡ ಹವಾಯಿ ಚಪ್ಪಲಿ ಧರಿಸಿ ಲೈಗರ್ ಚಿತ್ರ ಟ್ರೇಲರ್ ಲಾಂಚ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಇದೀಗ ಇದೇ ಹವಾಯಿ ಚಪ್ಪಲಿ ಧರಿಸಿದ ಫೋಟೋಗಳೇ ಕ್ಯಾಮೆರಾ ಕಣ್ಣಿಗೆ ಬಿದ್ದು ಭಾರಿ ಸುದ್ದಿಯಾಗಿ ವೈರಲ್ ಆಗಿದೆ.