ಭಾರತದ ಇತಿಹಾಸದಲ್ಲೇ ಮೊದಲ ಬಾರಿಗೆ ವೀಡಿಯೊ ಕಾಲ್ ಮೂಲಕ ನಿಶ್ಚಿತಾರ್ಥ ಮಾಡಿಕೊಂಡ ಕನ್ನಡ ಬಿಗ್ ಬಾಸ್ ಸ್ಪರ್ಧಿ.

ವೀಡಿಯೊ ಕಾಲ್ ಮೂಲಕ ನಿಶ್ಚಿತಾರ್ಥ ಮಾಡಿಕೊಂಡ ಬಿಗ್ ಬಾಸ್ ಸ್ಪರ್ಧಿ.ನಟಿ ಮತ್ತು ಕನ್ನಡ ಬಿಗ್ ಬಾಸ್ ಸೀಸನ್ 8 ರ ಸ್ಪರ್ಧಿ ವೈ ಜಯಂತಿ ವಾಸದೇವ್ ಅಡಿಗ ಅವರ ಈ ಆನ್ಲೈನ್ ಎಂಗೇಜ್ ಮೆಂಟ್ ಸುದ್ದಿ ಇದೀಗ ಸೋಶಿಯಲ್ ಮೀಡಿಯಾ ಪೂರ ಭಾರಿ ವೈರಲ್ ಆಗಿದೆ.ಹೌದು ಕೋವಿಡ್ ಸಂಧರ್ಭದಲ್ಲಿ ಇಂತಹ ಅನೇಕ ಆನ್ಲೈನ್ ಸಮಾರಂಭ ಸಂಗತಿಗಳು ನಡೆದಿದ್ದವು.ಕೋವಿಡ್ ಲಾಕ್ಡೌನ್ ಸಂಧರ್ಭ ಬಂಧು-ಮಿತ್ರರ ವಿವಾಹಕ್ಕೆ ಹೋಗಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಬಹಳಷ್ಟು ಮಂದಿ ಈ ಆನ್ಲೈನ್ ಮೂಲಕ ವಧು-ವರರಿಗೆ ಆಶೀರ್ವಾದ ಮಾಡಿ ಹರಸಿದ್ದರು.ಅದರಂತೆ ಇದೀಗ ಸ್ಯಾಂಡಲ್ ವುಡ್ ನಟಿ ವೈಜಯಂತಿ ಅಡಿಗ ಕೂಡ ಆನ್ಲೈನ್ ಮೂಲಕ ತಮ್ಮ ಪ್ರಿಯಕರನೊಂದಿಗೆ ಎಂಗೇಜ್ ಮೆಂಟ್ ಮಾಡಿಕೊಂಡಿದ್ದಾರೆ.ಹೌದು ವೈದೇಹಿ ಅವರ ಅಮ್ಮಚ್ಚಿಯೆಂಬ ನೆನಪು ಕಥೆಯನ್ನ ಚಂಪಾ ಪಿ.ಶೆಟ್ಟಿ ಸಿನಿಮಾ ಮಾಡಿದ್ದರು.

ಈ ಚಿತ್ರದಲ್ಲಿ ಒಂದು ಮೊಟ್ಟೆಯ ಕಥೆ ಸಿನಿಮಾ ಖ್ಯಾತಿಯ ರಾಜ್.ಬಿ.ಶೆಟ್ಟಿ ಮತ್ತು ವೈ ಜಯಂತಿ ಅಡಿಗ ಮುಖ್ಯ ಪಾತ್ರವೊಂದಲ್ಲಿ ಕಾಣಿಸಿಕೊಂಡಿದ್ದರು.ಇದಾದ ಬಳಿಕ ನಟಿ ವೈಜಯಂತಿ ಅಡಿಗ ಅವರು ಕನ್ನಡ ಕಿರುತೆರೆಯ ಜನಪ್ರಿಯ ರಿಯಾಲಿಟಿ ಶೋ ಬಿಗ್ ಬಾಸ್ ಸೀಸನ್ 8 ರಲ್ಲಿ ಸ್ಪರ್ಧಿಯಾಗಿ ‌ಭಾಗವಹಿಸಿದ್ದರು.ಆದರೆ ಅಲ್ಲಿನ ವಾತಾವರಣ ಇಷ್ಟವಾಗದ ಕಾರಣ ವೈಜಯಂತಿ ಸ್ವಯಂ ಪ್ರೇರಿತರಾಗಿ ದೊಡ್ಮನೆಯಿಂದ ಹೊರ ಬಂದು ಸುದ್ದಿಯಾಗಿದ್ದರು.ಇದೀಗ ಆನ್ಲೈನ್ ಮೂಲಕ ನಿಶ್ಚಿತಾರ್ಥ ಮಾಡಿಕೊಳ್ಳುವ ಮೂಲಕ ಸುದ್ದಿಯಾಗಿದ್ದಾರೆ.ಹೋಟೆಲ್ ಉದ್ಯಮದಲ್ಲಿ ಹೆಸರು ಮಾಡಿರುವ ವಾಸುದೇವ್ ಅಡಿಗ ಅವರ ಮಗಳಾದ ವೈಜಯಂತಿ ಅಡಿಗ ಸೂರಜ್ ಎಂಬುವರನ್ನ ಪ್ರೀತಿಸುತ್ತಿದ್ದರು.ಇವರ ಪ್ರೀತಿಗೆ ಎರಡೂ ಕುಟುಂಬ ಕೂಡ ಸಮ್ಮತಿಸಿ ಮದುವೆಗೆ ಒಪ್ಪಿಗೆ ನೀಡಿದ್ದರು.

ಅದರಂತೆ ನಿಶ್ಚಿತಾರ್ಥ ಮಾಡಿಕೊಳ್ಳುವ ಸಂಧರ್ಭ ಸೂರಜ್ ವಿದೇಶದಲ್ಲಿದಲ್ಲಿರುವುದರಿಂದ ವೀಡಿಯೋ ಕಾಲ್ ಮೂಲಕ ಎಂಗೇಜ್ ಮೆಂಟ್ ನಲ್ಲಿ ಪಾಲ್ಗೊಂಡರು.ನಟಿ ವೈಜಯಂತಿ ಅಡಿಗ ಕುಟುಂಬ ಮತ್ತು ಸೂರಜ್ ಅವರ ಕುಟುಂಬ,ಸ್ನೇಹಿತರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ಥರು.ಈ ಫೋಟೋಗಳನ್ನ ವೈಜಯಂತಿ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.ಈ ಫೋಟೋಗಳಿಗೆ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Leave a Reply

%d bloggers like this: