ಬಹುಕಾಲದ ಗೆಳೆಯನ ಜೊತೆಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ನಟಿ

ಇತ್ತೀಚೆಗೆ ಭಾರತೀಯ ಚಿತ್ರರಂಗದಲ್ಲಿ ಇತ್ತೀಚೆಗೆ ಸಾಕಷ್ಟು ಯುವ ನಟ ನಟಿಯರು ಭಾರಿ ಸುದ್ದಿ ಆಗುತ್ತಿದ್ದಾರೆ. ಆದರೆ ಅದು ಅವರ ಸಿನಿಮಾಗಳ ಮುಖಾಂತರ ಅಲ್ಲ. ಸಿಂಗಲ್ ಲೈಫ್ ಇಂದ ಮ್ಯಾರೇಜ್ ಲೈಫ್ ಗೆ ಎಂಟ್ರಿ ಆಗುವ ಮೂಲಕ ಅನ್ನೋದು ವಿಶೇಷ. ಇದೀಗ ವೈವಾಹಿಕ ಜೀವನಕ್ಕೆ ಹೆಜ್ಜೆ ಇಡುತ್ತಿರೋ ನಟಿ ಬೇರಾರು ಅಲ್ಲ. ನಮ್ಮ ಕನ್ನಡದ ಖ್ಯಾತ ನಿರ್ದೇಶಕ ಇಂದ್ರಜಿತ್ ಲಂಕೇಶ್ ನಿರ್ದೇಶನ ಮಾಡಿದ ಶಕೀಲಾ ಸಿನಿಮಾದ ನಟಿ ರಿಚಾ ಚಡ್ಡಾ. ಹೌದು ನಟಿ ರಿಚಾ ಚಡ್ಡಾ ಅವರು ಅಲಿ ಫಸಲ್ ಎಂಬುವರೊಟ್ಟಿಗೆ ಸಪ್ತಪದಿ ತುಳಿಯುತ್ತಿದ್ದಾರೆ. ಈಗಾಗಲೇ ಮದುವೆಯ ಕಾರ್ಯಕ್ರಮಗಳು ಅದ್ದೂರಿಯಾಗಿ ನಡೆದಿವೆ. ಇತ್ತೀಚೆಗೆ ತಾನೇ ಹಳದಿ ಶಾಸ್ತ್ರ ಕೂಡ ಬಹಳ ಅದ್ದೂರಿಯಾಗಿ ನಡೆದಿದೆ. ಅದರ ಒಂದಷ್ಟು ಪೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿವೆ.

ಕೆಲವು ದಿನಗಳ ಹಿಂದೆ ನಟಿ ರಿಚಾ ಚಡ್ಡಾ ಮತ್ತು ಅಲಿ ಫಸಲ್ ನವ ಜೋಡಿಗಳು ದೆಹಲಿಯಲ್ಲಿ ಕಾಕ್ ಟೇಲ್ ಪಾರ್ಟಿಯನ್ನ ಗ್ರ್ಯಾಂಡ್ ಆಗಿ ಮಾಡಿಕೊಂಡಿಕೊಂಡಿದ್ರು. ದೆಹಲಿಯ ಓಲ್ಡ್ ಕ್ಲಬ್ ವೊಂದರಲ್ಲಿ ಇವರಿಬ್ಬರ ಮದುವೆ ಶಾಸ್ತ್ರ ಕಾರ್ಯಕ್ರಮಗಳು ಅದ್ದೂರಿಯಾಗಿ ನಡೆದಿವೆ. ಮದುಮಗಳಾದ ನಟಿ ರಿಚಾ ಚಡ್ಡಾ ಅವರು ಬಿಳಿ ಬಣ್ಣದ ಶೇರ್ವಾನಿಯಲ್ಲಿ ಸಖತ್ ಆಗಿ ಮಿಂಚಿದ್ದಾರೆ. ಈ ಹಳದಿ ಶಾಸ್ತ್ರ ಮತ್ತು ಇನ್ನಿತರ ಕಾರ್ಯಕ್ರಮದಲ್ಲಿ ಸಿನಿರಂಗದವರಿಗಿಂತ ಹೆಚ್ಛಾಗಿ ಅವರ ಆಪ್ತರು, ಕುಟುಂಬ ವರ್ಗದವರು ಮಾತ್ರ ಭಾಗವಹಿಸಿದ್ದರು. ಇನ್ನು ರಿಚಾ ಚಡ್ಡಾ ಮತ್ತು ಅಲಿ ಫಸಲ್ ಅವರು ಇಂದು ಅಂದರೆ ಅಕ್ಟೋಬರ್ 4ರಂದು ಸಪ್ತಪದಿ ತುಳಿದಿದ್ದಾರೆ. ಮೂಲಗಳ ಪ್ರಕಾರ ಈ ಮದುವೆ ಆದ ನಂತರ ಮುಂಬೈನಲ್ಲಿ ನಟಿ ರಿಚಾ ಚಡ್ಡಾ ಅವರು ಸಿನಿರಂಗದ ಗಣ್ಯರನ್ನ ಕರೆದು ಅದ್ದೂರಿಯಾಗಿ ರಿಸಪ್ಶನ್ ಮಾಡಿಕೊಳ್ಳಲಿದ್ದಾರೆ ಎಂದು ತಿಳಿದು ಬಂದಿದೆ. ಇನ್ನು ಒಟ್ಟಾರೆಯಾಗಿ ನಟಿ ರಿಚಾ ಚಡ್ಡಾ ಮತ್ತು ಅಲಿ ಫಸಲ್ ಅವರ ವೈವಾಹಿಕ ಜೀವನಕ್ಕೆ ಅವರ ಕುಟುಂಬ ವರ್ಗ, ಹಿತೈಷಿಗಳು, ಅಭಿಮಾನಿಗಳು ಶುಭ ಹಾರೈಸಿದ್ದಾರೆ.

Leave a Reply

%d bloggers like this: