ಬಾಹುಬಲಿ ಚಿತ್ರದ ಕಟ್ಟಪ್ಪ ಅವರು ಮಗಳು ನಿಜಕ್ಕೂ ಯಾರು ಗೊತ್ತಾ? ನೋಡಿ ಒಮ್ಮೆ ಅವಳ ಸೌಂದರ್ಯವನ್ನು ಹೇಗಿದ್ದಾಳೆ ಅಂತ

ದಕ್ಷಿಣ ಭಾರತೀಯ ಚಿತ್ರ ರಂಗದಲ್ಲಿ ಹೊಸ ಸಂಚಲನ ಉಂಟು ಮಾಡಿ ಇತಿಹಾಸ ಸೃಷ್ಟಿ ಮಾಡಿದ ಬಾಹುಬಲಿ ಸಿನಿಮಾ ಅನೇಕ ಕಲಾವಿದರು, ತಂತ್ರಜ್ಞರಿಗೆ ವೃತ್ತಿ ಜೀವನದಲ್ಲಿ ಹೊಸದೊಂದು ತಿರುವು ಕೊಟ್ಟಿತು. ಟಾಲಿವುಡ್ ಸ್ಟಾರ್ ನಿರ್ದೇಶಕ ಎಸ್.ಎಸ್. ರಾಜಮೌಳಿ ನಿರ್ದೇಶನದಲ್ಲಿ ಮೂಡಿಬಂದ ಈ ಬಾಹುಬಲಿ ಸಿನಿಮಾ ಎರಡು ಭಾಗಗಳಲ್ಲಿ ತೆರೆಕಂಡು ಬಾಕ್ಸ್ ಆಫೀಸ್ ಧೂಳಿಪಟ ಮಾಡಿತು. ಬಾಹುಬಲಿ ಸಿನಿಮಾ ನಿರ್ಮಾಣದ ಹಂತದಲ್ಲೇ ತನ್ನ ಮೇಕಿಂಗ್ ಝಲಕ್ ಮೂಲಕ ಇಡೀ ವಿಶ್ವದ ಚಿತ್ರರಂಗವೇ ತನ್ನತ್ತ ತಿರುಗಿ ನೋಡುವಂತೆ ಗಮನ ಸೆಳೆದಿತ್ತು. ಅದೇ ರೀತಿಯಾಗಿ ಸಿನಿಮಾ ರಿಲೀಸ್ ಆದ ನಂತರವೂ ಕೂಡ ಸಿನಿಮಾ ಉತ್ತಮ ಮೆಚ್ಚುಗೆ ಪಡೆದುಕೊಂಡಿತು. ಬಾಹುಬಲಿ ಸಿನಿಮಾದಲ್ಲಿ ನಟಿಸಿದ ನಟ ಪ್ರಭಾಸ್, ಖಳ ನಟ ರಾಣಾ ದಗ್ಗುಬಾಟಿ, ನಟಿಯರಾದ ಅನುಷ್ಕಾ ಶೆಟ್ಟಿ, ತಮನ್ಪಾ ಭಾಟಿಯಾ, ಕಾಲಕೇಯ ಪಾತ್ರದಲ್ಲಿ ಮಿಂಚಿದ್ದ ನಟ ಪ್ರಭಾಕರ್ ಸೇರಿದಂತೆ ಅನೇಕ ಪಾತ್ರಗಳು ಸಿನಿ ಪ್ರೇಕ್ಷಕರ ಮನದಲ್ಲಿ ಅಚ್ಚಳಿಯದೇ ಉಳಿಯುವಂತದ್ದಿವು.

ಅದೇ ರೀತಿಯಾಗಿ ಸಿನಿ ಪ್ರೇಕ್ಷಕರಿಗೆ ಬಾಹುಬಲಿ ಚಿತ್ರದಲ್ಲಿ ಕಾಡಿದಂತಹ ಪಾತ್ರ ಅಂದರೆ ಅದು ಕಟ್ಟಪ್ಪ. ಬಾಹುಬಲಿ ಸಿನಿಮಾದ ಮೊದಲ ಭಾಗದ ಅಂತ್ಯದಲ್ಲಿ ಬಾಹುಬಲಿಯನ್ನ ಕಟ್ಟಪ್ಪ ಬೆನ್ನಿಂದೆ ಚೂರಿ ಹಾಕಿ ಕೊಲ್ಲುತ್ತಾನೆ. ಬಾಹುಬಲಿಗೆ ನಿಷ್ಟೆ ತೋರುತ್ತಿದ್ದ ಕಟ್ಟಪ್ಪನೇ ಬಾಹುಬಲಿಯನ್ನ ಮೋಸದಿಂದ ಕೊಂದ ಕಾರಣ ಬಾಹುಬಲಿ ಸಿನಿಮಾದ ಕ್ಲೈಮ್ಯಾಕ್ಸ್ ಪ್ರತಿಯೊಬ್ಬ ಪ್ರೇಕ್ಷಕರಿಗೂ ಕುತೂಹಲ ತಂದೊಡ್ಡಿ ಕಟ್ಟಪ್ಪ ಬಾಹುಬಲಿಯನ್ನ ಯಾಕೆ ಕೊಂದ ಎಂಬ ಪ್ರಶ್ನೆ ಮೂಡುವಂತೆ ಮಾಡುತ್ತದೆ. ಈ ಕಟ್ಟಪ್ಪ ಪಾತ್ರಧಾರಿ ತಮಿಳಿನ ಖ್ಯಾತ ನಟ ಸತ್ಯರಾಜ್ ಅವರ ನಟನೆಗೆ ಪ್ರೇಕ್ಷಕ ಪ್ರಭು ಕ್ಲೀನ್ ಬೋಲ್ಡ್ ಆಗುತ್ತಾರೆ. ಅಷ್ಟರ ಮಟ್ಟಿಗೆ ಕಟ್ಟಪ್ಪ ಪಾತ್ರಕ್ಕೆ ನಟ ಸತ್ಯ ರಾಜ್ ಜೀವತುಂಬಿ ನಟಿಸಿರುತ್ತಾರೆ. ಇನ್ನು ಈ ಪ್ರತಿಭಾವಂತ ಕಲಾವಿದರಾದ ನಟ ಸತ್ಯರಾಜ್ ಅವರ ಬಗ್ಗೆ ಕೊಂಚ ತಿಳಿಯುವುದಾದರೆ ಇವರು ಮೂಲತಃ ತಮಿಳುನಾಡಿನವರು. ತಮಿಳುನಾಡಿನ ಕೊಯಮತ್ತೂರಿನ ಗಾಂಧಿಪುರಂನಲ್ಲಿ 1954 ರಲ್ಲಿ ಜನಿಸಿದ ಇವರಿಗೆ ಈಗ 67 ವರ್ಷ ವಯಸ್ಸು. ನಟ ಸತ್ಯರಾಜ್ ಅವರ ಮೂಲ ಹೆಸರು ರಂಗರಾಜ್ ಸುಬ್ಬಯ್ಯ. ಇವರು ತಮಿಳು ಚಿತ್ರರಂಗದ ಮೂಲಕ ಬಣ್ಣದ ಲೋಕಕ್ಕೆ ಹೆಜ್ಜೆ ಇಡುತ್ತಾರೆ.

ಇದುವರೆಗೆ ತಮಿಳು, ತೆಲುಗು, ಮಲೆಯಾಳಂ, ಹಿಂದಿ ಸೇರಿದಂತೆ ಬರೋಬ್ಬರಿ 230 ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿದ್ದಾರೆ. ತಮಿಳಿನಲ್ಲಿ ನಾಯಕ ನಟರಾಗಿ ಒಂದಷ್ಟು ಯಶಸ್ವಿ ಸಿನಿಮಾಗಳನ್ನ ಮಾಡಿದ್ದಾರೆ. ಇನ್ನು ಇವರ ವೈಯಕ್ತಿಕ ಜೀವನಕ್ಕೆ ಬರುವುದಾದರೆ 1979 ರಲ್ಲಿ ಮಹೇಶ್ವರಿ ಎಂಬುವರೊಟ್ಟಿಗೆ ದಾಂಪತ್ಯ ಜೀವನಕ್ಕೆ ಪ್ರವೇಶ ಮಾಡುತ್ತಾರೆ. ಸತ್ಯರಾಜ್ ಮತ್ತು ಮಹೇಶ್ವರಿ ದಂಪತಿಗಳಿಗೆ ಸಿಬಿರಾಜ್ ಎಂಬ ಒಬ್ಬ ಮಗ ಮತ್ತು ದಿವ್ಯಾ ಎಂಬ ಒಬ್ಬ ಮಗಳಿದ್ದಾರೆ. ಇನ್ನು ಸತ್ಯರಾಜ್ ಅವರ ಪುತ್ರ ಸಿಬಿರಾಜ್ ಕೂಡ ಟಾಲಿವುಡ್ ನಲ್ಲಿ ನಟನಾಗಿ ಮಿಂಚುತ್ತಿದ್ದಾರೆ. ಆದರೆ ಇವರ ಮಗಳು ದಿವ್ಯಾ ಮಾತ್ರ ಅಪ್ಪ ಹಾಕಿದ ಆಲದ ಮರ ಎಂದು ಬಣ್ಣದ ಲೋಕಕ್ಕೆ ಎಂಟ್ರಿಕೊಡದೇ ಬೇರೆ ಕ್ಷೇತ್ರ ಆಯ್ಕೆ ಮಾಡಿಕೊಂಡು ಸ್ವತಂತ್ರ ಜೀವನವನ್ನ ಕಟ್ಟಿಕೊಂಡಿದ್ದಾರೆ. ಸತ್ಯಾರಾಜ್ ಪುತ್ರಿ ದಿವ್ಯಾ ಅವರು ನೋಡಲು ಸೌಂದರ್ಯವತಿ ಆಗಿದ್ದ ಕಾರಣ ಬಹುತೇಕರು ದಿವ್ಯಾ ಕೂಡ ಚಿತ್ರರಂಗಕ್ಕೆ ಎಂಟ್ರಿ ಕೊಡುತ್ತಾರೆ ಎಂದು ಹೇಳುತ್ತಿದ್ದರು. ಆದರೆ ದಿವ್ಯಾ ಅವರು ಆಹಾರ ಪೌಷ್ಟಿಕ ತಜ್ಞೆಯಾಗಿ ವೃತ್ತಿ ಜೀವನ ಕಂಡುಕೊಂಡಿದ್ದಾರೆ.