ಬಾಹುಬಲಿ ಚಿತ್ರದ ಕಾಲಕೇಯ ಪತ್ನಿ ನಿಜಕ್ಕೂ ಯಾರು ಗೊತ್ತಾ? ನೋಡಿ ಒಮ್ಮೆ ಎಷ್ಟು ಸುಂದರವಾಗಿದ್ದರೆ ಅಂತ

ಭಾರತೀಯ ಚಿತ್ರರಂಗದಲ್ಲಿ ಇತಿಹಾಸ ನಿರ್ಮಾಣ ಮಾಡಿದ ಬಾಹುಬಲಿ ಸಿನಿಮಾದಲ್ಲಿ ಅಭಿನಯಿಸಿದ ಪ್ರತಿಯೊಬ್ಬ ಕಲಾವಿದರಿಗೂ ಕೂಡ ಬಹು ದೊಡ್ಡ ಬ್ರೇಕ್ ದೊರೆಯಿತು. ನಾಯಕ ನಟ ಪ್ರಭಾಸ್ ಅವರಿಗಂತೂ ಕೇವಲ ಟಾಲಿವುಡ್ ನಲ್ಲಿ ಮಾತ್ರ ಸ್ಟಾರ್ ನಟ ಆಗಿದ್ದವರನ್ನ ಒಮ್ಮೆಲೆ ಬಾಲಿವುಡ್ ನಲ್ಲಿ ದಿಗ್ಗಜ ನಟರಿಗೂ ಪೈಪೋಟಿ ನೀಡುವಂತಹ ಮಟ್ಟಿಗೆ ಸ್ಟಾರ್ ಢಂ ಬೆಳೆಯಲು ಕಾರಣವಾಯಿತು ಈ ಬಾಹುಬಲಿ ಸಿನಿಮಾ. ನಿರ್ದೇಶಕ ಎಸ್.ಎಸ್. ರಾಜಮೌಳಿ ಅವರ ನಿರ್ದೇಶನದಲ್ಲಿ ಮೂಡಿ ಬಂದ ಈ ಬಾಹುಬಲಿ ಸಿನಿಮಾ ಮೇಕಿಂಗ್ ಮತ್ತು ಕಲೆಕ್ಷನ್ ವಿಚಾರದಲ್ಲಿ ದಾಖಲೆಯನ್ನೆ ಮಾಡಿತು.ರಾಜಮೌಳಿ ಅವರ ಕಲ್ಪನಾಶಕ್ತಿಗೆ ಇಡೀ ವಿಶ್ವದ ಚಿತ್ರರಂಗವೇ ಸಲಾಂ ಹೊಡೆದಿತ್ತು.ಬಾಹುಬಲಿ ಭಾಗ 1 ಮತ್ತು ಬಾಹುಬಲಿ 2 ಸಿನಿಮಾದಲ್ಲಿ ಪ್ರಮುಖವಾಗಿ ನಾಯಕ ನಟ ಪ್ರಭಾಸ್, ರಾಣಾ ದಗ್ಗುಬಾಟಿ, ರಮ್ಯಾ ಕೃಷ್ಣ, ಅನುಷ್ಕಾ ಶೆಟ್ಟಿ, ತಮನ್ನಾ, ಕಟ್ಟಪ್ಪ ಪಾತ್ರಧಾರಿ ಸತ್ಯರಾಜ್, ನಾಸಿರ್ ಜೊತೆಗೆ ಮತ್ತೊಂದು ಪಾತ್ರ ಗಮನ ಸೆಳೆದದ್ದು ಅಂದರೆ ಅದು ಕಾಲಕೇಯ ಪಾತ್ರ. ಈ ಕಾಲಕೇಯ ಪಾತ್ರದಲ್ಲಿ ಅಭಿನಯಿಸಿದ್ದು ನಟ ಪ್ರಭಾಕರ್.

ನಟ ಪ್ರಭಾಕರ್ ಬಾಹುಬಲಿ ಸಿನಿಮಾದ ನಂತರ ಅಪಾರ ಜನಪ್ರಿಯತೆ ಪಡೆದುಕೊಂಡರು. ದಕ್ಷಿಣ ಭಾರತದ ಮೊದಲ ಪ್ಯಾನ್ ಇಂಡಿಯಾ ಸಿನಿಮಾವಾಗಿ ಮೂಡಿಬಂದ ಬಾಹುಬಲಿ ಸಿನಿಮಾ ಇಡೀ ವಿಶ್ವದೆಲ್ಲೆಡೆ ರಿಲೀಸ್ ಆದ್ದರಿಂದ ಕಾಲಕೇಯ ಪಾತ್ರ ಎಲ್ಲೆಗೆ ಗಮನ ಸೆಳೆದು ಪ್ರಭಾಕರ್ ಅವರಿಗೆ ಭಾರತದ ವಿವಿಧ ಭಾಷೆಯ ಸಿನಿಮಾರಂಗದಲ್ಲೂ ಕೂಡ ಅವಕಾಶ ಹರಸಿಬಂತು.ಅದರಲ್ಲಿಯೂ ನಟ ಪ್ರಭಾಕರ್ ಅವರು ಬಾಹುಬಲಿ ಚಿತ್ರಕ್ಕೆ ಆಯ್ಕೆಯಾದ ಸಂಗತಿಯೇ ಆಕಸ್ಮಿಕವಾದದ್ದು. ನಟ ಪ್ರಭಾಕರ್ ಅವರು ತೆಲಂಗಾಣದವರು. ಅವರಿಗೆ ಕ್ರಿಕೆಟ್ ನಲ್ಲಿ ಅಪಾರ ಹುಚ್ಚು ಪ್ರೀತಿ. ಅವರಿಗೆ ಹೀಗೆ ಅಚಾನಕ್ ಆಗಿ ಟಾಲಿವುಡ್ ಸ್ಟಾರ್ ನಟ ಮಹೇಶ್ ಬಾಬು ಅವರ ಅತಿಥಿ ಎಂಬ ಚಿತ್ರದಲ್ಲಿ ಪುಟ್ಟ ಪಾತ್ರವೊಂದರ ಅವಕಾಶ ಸಿಗುತ್ತದೆ. ಈ ಚಿತ್ರದಲ್ಲಿ ನಟಿಸಿದ ನಂತರ ರಾಜಮೌಳಿ ಅವರ ಮಗಧೀರ ಸಿನಿಮಾದ ಆಡಿಶನ್ ನಡೆಯುತ್ತಿರುವ ವಿಚಾರ ತಿಳಿದು ಆಡಿಶನ್ ನಲ್ಲಿ ಪಾಲ್ಗೊಳ್ಳುತ್ತಾರೆ.

ಇಲ್ಲಿ ಅವರು ಆಯ್ಕೆ ಆಗುವುದಿಲ್ಲ. ಮಗಧೀರ ಚಿತ್ರದ ಆಡಿಶನ್ ನಲ್ಲಿ ಇವರ ಅಭಿನಯದ ಬಗ್ಗೆ ಒಳ್ಳೆಯ ಅಭಿಪ್ರಾಯ ಹೊಂದಿದ್ದ ರಾಜಮೌಳಿ ಅವರು ತಮ್ಮ ಮರ್ಯಾದೆ ರಾಮಣ್ಣ ಚಿತ್ರದಲ್ಲಿ ಅವಕಾಶ ನೀಡುತ್ತಾರೆ. ಅಲ್ಲಿಂದ ನಟ ಪ್ರಭಾಕರ್ ಅವರು ರಾಜಮೌಳಿ ಕ್ಯಾಂಪೇನ್ ನಲ್ಲಿ ಒಬ್ಬ ಸದಸ್ಯರಾಗುತ್ತಾರೆ. ಇದಾದ ಬಳಿಕ ಬಾಹುಬಲಿ ಸಿನಿಮಾದಲ್ಲಿಯೂ ಕೂಡ ಪ್ರಭಾಕರ್ ಅವರಿಗೆ ಒಂದು ಉತ್ತಮ ಪಾತ್ರ ನೀಡುವ ಮೂಲಕ ರಾಜಮೌಳಿ ಅವರು ನಟ ಪ್ರಭಾಕರ್ ಅವರ ಜೀವನದ ಹೊಸ ತಿರುವಿಗೆ ಕಾರಣಕರ್ತರಾಗುತ್ತಾರೆ.ನಟ ಪ್ರಭಾಕರ್ ಅವರು ಇದೀಗ ಲಕ್ಷ್ಮೀ ಎಂಬುವವರನ್ನ ಮದುವೆಯಾಗಿ ಎರಡು ಮಕ್ಕಳ ತಂದೆಯಾಗಿ ಸುಂದರ ಬದುಕನ್ನ ಕಟ್ಟಿಕೊಂಡಿದ್ದಾರೆ. ಇಂದು ನಟ ಪ್ರಭಾಕರ್ ಇಷ್ಟು ದೊಡ್ಡ ಮಟ್ಟದ ಕಲಾವಿದನಾಗಿ ಬೆಳೆದಿರುವುದಕ್ಕೆ ನೇರ ಕಾರಣ ರಾಜಮೌಳಿ ಅಂದರೆ ತಪ್ಪಾಗುವುದಿಲ್ಲ. ನಟ ಪ್ರಭಾಕರ್ ರಾಜಮೌಳಿ ಅವರ ಈ ಋಣ ತೀರಿಸುವ ನಿಟ್ಟಿನಲ್ಲಿ ತನ್ನ ಮೊದಲ ಪುತ್ರನಿಗೆ ಶ್ರೀರಾಮ್ ರಾಜಮೌಳಿ ಎಂದೇ ಹೆಸರಿಟ್ಟಿದ್ದಾರೆ.