ಬಹಳಷ್ಟು ಮಂದಿಗೆ ನನ್ನಲ್ಲಿರುವ ಶಕ್ತಿ ಏನೆಂಬುದೇ ತಿಳಿದಿಲ್ಲ ಎಂದು ಹೇಳಿದ ಕನ್ನಡ ಚಲನಚಿತ್ರರಂಗದ ಖ್ಯಾತ ಹಿರಿಯ ನಟ

ಬಹಳಷ್ಟು ಮಂದಿಗೆ ನನ್ನಲ್ಲಿರುವ ಶಕ್ತಿ ಏನೆಂಬುದೇ ತಿಳಿದಿಲ್ಲ ಎಂದು ಹೇಳಿದ ಕನ್ನಡ ಚಲನಚಿತ್ರರಂಗದ ಖ್ಯಾತ ಹಿರಿಯ ನಟ..! ಕನ್ನಡ ಚಿತ್ರರಂಗದಲ್ಲಿ ಡಾ.ಅಂಬರೀಶ್ ಕಾಲವಾದ ನಂತರ ನಾಯಕತ್ವದ ಕೊರತೆ ಎದ್ದು ಕಾಣುತ್ತಿರುವುದು ಸುಳ್ಳಲ್ಲ.ಕನ್ನಡ ಚಿತ್ರರಂಗ ಒಂದು ಕುಟುಂಬ ಇದ್ದಹಾಗೆ.ಅಲ್ಲಿ ಎಲ್ಲರನ್ನ ಕೂಡ ಸರಿದೂಗಿಸಿಕೊಂಡು ಹೋಗಬಲ್ಲ ನಟ ಅಗತ್ಯವಿದ್ದಾರೆ. ನಾಯಕತ್ವವುಳ್ಳ ನಟರಿಗೆ ಏನೂ ಕಡಿಮೆ ಇಲ್ಲ.ರವಿಚಂದ್ರನ್,ಶಿವರಾಜ್ ಕುಮಾರ್,ಅನಂತ್ ನಾಗ್,ಜಗ್ಗೇಶ್ ಅಂತಹ ದಿಗ್ಗಜ ನಟರು ಇದ್ದಾರೆ.ಅವರಲ್ಲಿ ನಟ ಜಗ್ಗೇಶ್ ತಮ್ಮ ವಿಶಿಷ್ಟ ಮಾತು,ಓದು,ಅವರ ತಿಳಿವಳಿಕೆಯ ಜ್ಞಾನ ಸೇರಿದಂತೆ ಕೆಲವು ವ್ಯಕ್ತಿತ್ವಗಳಿಂದ ವಿಭಿನ್ನವಾಗಿ ನಿಲ್ಲುತ್ತಾರೆ.ಸೋಶಿಯಲ್ ಮೀಡಿಯಾಗಳಲ್ಲಿ ಹೆಚ್ಚು ಸಕ್ರೀಯವಾಗಿರುವ ನಟ ಜಗ್ಗೇಶ್ ತಮ್ಮ ಜೀವನದ ಅನುಭವಗಳನ್ನ ಆಗಾಗ ಹಂಚಿಕೊಳ್ಳುತ್ತಿರುತ್ತಾರೆ.ತಮ್ಮ ಮುಂದಿನ ಪೀಳಿಗೆಯ ಬಗ್ಗೆ,ನಾಡಿನ ಭವಿಷ್ಯದ ಬಗ್ಗೆ ಕಾಳಜಿ ಮಾತುಗಳನ್ನಾಡುವ ನಟ ಜಗ್ಗೇಶ್ ಅಪಾರ ದೈವಭಕ್ತರು.ಡಾ.ರಾಜ್ ಕುಮಾರ್ ಅವರ ಅಪ್ಪಟ ಅಭಿಮಾನಿಯಾಗಿರುವ ಜಗ್ಗೇಶ್ ಅವರ ದಾರಿಯಂತೆ ಸಾಗಬೇಕು ಎಂಬ ಮನದಿಚ್ಚೆ ಹೊಂದಿದ್ದಾರೆ.ಅವರಿಗೆ ಆಧ್ಯಾತ್ಮ ವಿಚಾರಗಳಲ್ಲಿ ಅಪಾರ ಆಸಕ್ತಿಯೂ ಕೂಡ ಇದೆ.

ಯಾವುದೇ ಪಾತ್ರಗಳನ್ನು ಲೀಲಾಜಾಲವಾಗಿ ನಟಿಸಿ ಸೈ ಎನಿಸಿಕೊಳ್ಳುವ ನಟ ಜಗ್ಗೇಶ್ ಹಾಸ್ಯ ರಸವನ್ನ ಅದ್ಬುತವಾಗಿ ಅಳವಡಿಸಿಕೊಂಡು ಸಿನಿ ಪ್ರೇಕ್ಷಕರನ್ನ ನಾಲ್ಕು ದಶಕಗಳ ಕಾಲ ರಂಜಿಸಿದ್ದಾರೆ.ಇತ್ತೀಚೆಗೆ ಖಾಸಗಿ ಮಾಧ್ಯಮದ ಸಂದರ್ಶವೊಂದರಲ್ಲಿ ತಮ್ಮ ಕೊರಳಲ್ಲಿರುವ ರುದ್ರಾಕ್ಷಿ ಮಾಲೆಗಳು ಮತ್ತು ತಾಳಿಯ ಮಹತ್ವವನ್ನ ಹಂಚಿಕೊಂಡಿದ್ದಾರೆ. ಜಗ್ಗೇಶ್ ಗುರುರಾಯರ ಭಕ್ತರಾಗಿರುವುದರಿಂದ ಆಗಾಗ ರಾಯರ ಮಠಕ್ಕೆ ಭೇಟಿ ನೀಡುತ್ತಲೇ ಇರುತ್ತಾರೆ.ಅವರ ಕೊರಳಲ್ಲಿ ಇರುವ ರುದ್ರಾಕ್ಷಿ ಮಾಲೆಗಳು ಒಂದೊಂದು ಹಿನ್ನೆಲೆಯನ್ನ ಹೊಂದಿವೆ.ಈ ರುದ್ರಾಕ್ಷಿ ಮಾಲೆಗಳ ಜೊತೆಗೆ ಒಂದು ತಾಳಿಯೂ ಕೂಡ ಅವರ ಕುತ್ತಿಗೆಯಲ್ಲಿದೆ. ಆ ತಾಳಿ ಅವರ ತಾಯಿಯವರದ್ದಾಗಿದೆ.ಅವರ ತಾಯಿ ಅಂತಿಮ ಕ್ಷಣಗಳಲ್ಲಿ ಜಗ್ಗೇಶ್ ಅವರನ್ನ ತಮ್ಮ ಬಳಿ ಕರೆದು ಈ ತಾಳಿ ನಿಮ್ಮ ತಂದೆ 1953 ರಲ್ಲಿ ನನಗೆ ಕಟ್ಟಿದ್ದರು.ಇದರಲ್ಲಿ ನನ್ನ ಎಲ್ಲಾ ಸಾಧನೆಗಳಿದೆ.

ಇದನ್ನ ನಿನ್ನ ಬಳಿ ಇಟ್ಟಿಕೋ ಎಂದು ಜೀವ ಬಿಟ್ಟರಂತೆ.ಅಂದಿನಿಂದ ಜಗ್ಗೇಶ್ ಅವರ ಕುತ್ತಿಗೆಯಲ್ಲಿ ಅವರ ತಾಯಿಯ ತಾಳಿ ಇದೆಯಂತೆ.ಅವರ ಇಪ್ಪತನೇ ವರ್ಷದ ಜನ್ಮದಿನದಂದು ನನ್ನ ಮಗ ಹುಲಿಯಂತೆ ಬದುಕಬೇಕು ಎಂದು ಹುಲಿ ಉಗುರಿನಿಂದ ಚೈನ್ ಮಾಡಿಸಿ ಹಾಕಿದ್ದರಂತೆ.ಇನ್ನು ಅವರ ಕುತ್ತಿಗೆಯಲ್ಲಿರುವ ರುದ್ರಾಕ್ಷಿ ಮಾಲೆಯನ್ನ ಸ್ವತಃ ಕೇದಾರನಾಥ ಸ್ವಾಮಿಗಳು ನೀಡಿದ್ದಾರಂತೆ.ಒಮ್ಮೆ ಅವರೇ ಸ್ವತಃ ಕರೆ ಮಾಡಿ ನಿಮಗೆ ಶಿವನ ಆಜ್ಞೆ ಆಗಿದೆ ಬರುವುದಿಲ್ಲವೇ ಎಂದು ಹೇಳಿದಾಗ ತಕ್ಷಣ ರಾಯರ ಬಳಿ ಹೋದರಂತೆ.ಒಂದು ಮುಖದಿಂದ ಹದಿ ನಾಲ್ಕು ಮುಖ ಹೊಂದಿರುವ ಈ ವಿಶೇಷ ರುದ್ರಾಕ್ಷಿ ಮಾಲೆಯನ್ನು 48 ಗಂಟೆಗಳ ಕಾಲ ಅನುಷ್ಠಾನ ಮಾಡಿ ಜಗ್ಗೇಶ್ ಅವರಿಗೆ ದೀಕ್ಫೆ ನೀಡಿದ್ದಾರಂತೆ.ಅದೇ ರೀತಿಯಾಗಿ ಜೈನ ದಿಗಂಬರ ಸ್ವಾಮಿಗಳು ಜಗ್ಗೇಶ್ ಅವರನ್ನ ಹುಡುಕಿಕೊಂಡು ಬಂದು ಹಿಮಾಲಯದಿಂದ ತಂದಿದ್ದ ರುದ್ರಾಕ್ಷಿ ಮಾಲೆಯನ್ನ ನೀಡಿದ್ದಾರಂತೆ.ಹೀಗೆ ನಟ ಜಗ್ಗೇಶ್ ಅವರಿಗೆ ಆಧ್ಯಾತ್ಮಿಕವಾಗಿ ಒಂದಲ್ಲ ಒಂದು ರೀತಿಯಾಗಿ ಭಗವಂತನ ಅನುಗ್ರಹ ಆಗಿದ್ದು,ಅವರ ಜೊತೆಗೆ ಪರಮಾತ್ಮನ ಶಕ್ತಿ ಸದಾ ಇರುತ್ತದೆ ಎಂದು ತಿಳಿಸಿದ್ದಾರೆ.

Leave a Reply

%d bloggers like this: