ಬಹಳ ದಿನಗಳ ನಂತರ ಮತ್ತೆ ಕಿರುತೆರೆಗೆ ಮರಳಿದ ಕನ್ನಡ ಕಿರುತೆರೆಯ ಜನಪ್ರಿಯ ನಟಿ

ಕುಲವಧು ಧಾರಾವಾಹಿ ಖ್ಯಾತಿಯ ನಟಿ ಅಮೃತಾ ರಾಮಮೂರ್ತಿ ತಾಯಿಯಾದ ನಂತರ ಮತ್ತೇ ಕಿರುತೆರೆಗೆ ರೀ ಎಂಟ್ರಿ ಕೊಡುತ್ತಿದ್ದಾರೆ. ಮದುವೆಯಾದ ನಂತರ ಸಾಕಷ್ಟು ನಟಿಯರು ತಮ್ಮ ನಟನಾ ವೃತ್ತಿಯನ್ನ ತೊರೆದು ಸಾಂಸಾರಿಕ ಜೀವನದಲ್ಲಿ ಸಂಪೂರ್ಣವಾಗಿ ತೊಡಗಿಕೊಳ್ಳುತ್ತಾರೆ. ಅವರಲ್ಲಿ ಕೆಲವರು ಮಾತ್ರ ಮದುವೆಯಾದ ನಂತರವೂ ಕೂಡ ನಟನೆಯಲ್ಲಿ ತೊಡಗಿಸಿಕೊಳ್ಳುತ್ತಾರೆ. ಅದೇ ರೀತಿಯಾಗಿ ನಟಿ ಅಮೃತಾ ಮೂರ್ತಿ ಮದುವೆ ಆಗಿ ಇದೀಗ ತಾಯಿಯಾಗಿ ತನ್ನ ಜವಬ್ದಾರಿಯ ನಡುವೆಯೂ ಕೂಡ ಮತ್ತೆ ಬಣ್ಣಹಚ್ಚಿದ್ದಾರೆ. ಅದೂ ಕೂಡ ಜೊತೆ ಜೊತೆಯಲಿ ಧಾರಾವಾಹಿ ಅನು ಸಿರಿ ಮನೆ ಖ್ಯಾತಿಯ ನಟಿ ಮೇಘಾ ಶೆಟ್ಟಿ ಅವರ ಪ್ರೊಡಕ್ಷನ್ ಹೌಸ್ ನಲ್ಲಿ ನಿರ್ಮಾಣ ಆಗುತ್ತಿರುವ ಕೆಂಡ ಸಂಪಿಗೆ ಧಾರಾವಾಹಿಯಲ್ಲಿ ವಿಶೇಷ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ನಟಿ ಅಮೃತಾ ರಾಮಮೂರ್ತಿ ಅವರು ಮದುವೆಯಾದ ಬಳಿಕವೂ ಕೂಡ ನಟಿಸುತ್ತಿದ್ದರು. ತದ ನಂತರ ತಾಯಿಯಾದ ಬಳಿಕ ಮಗುವಿನ ಹಾರೈಕೆ ಪೋಷಣೆಯಲ್ಲಿದ್ದ ಅಮೃತಾ ಬಣ್ಣದ ಲೋಕದಿಂದ ಅಂತರ ಕಾಯ್ದುಕೊಂಡಿದ್ದರು‌.

ಇದೀಗ ತುಂಬಾ ದಿನಗಳ ನಂತರ ಕೆಂಡ ಸಂಪಿಗೆ ಧಾರಾವಾಹಿಯ ಮೂಲಕ ಕಿರುತೆರೆಗೆ ರೀಎಂಟ್ರಿ ಕೊಟ್ಟಿದ್ದಾರೆ. ಈ ಕೆಂಡ ಸಂಪಿಗೆ ಧಾರಾವಾಹಿಯಲ್ಲಿ ಅಮೃತಾ ರಾಮಮೂರ್ತಿ ಅವರು ಹಿಂದೆಂದೂ ಮಾಡದಂತಹ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರಂತೆ. ನಟಿ ಅಮೃತಾ ರಾಮಮೂರ್ತಿ ಈ ಹಿಂದಿನ ಎಲ್ಲಾ ಧಾರಾವಾಹಿಗಳಲ್ಲಿ ಮನೆಮಗಳಂತಹ ಹೋಮ್ಲಿ ಪಾತ್ರಗಳಲ್ಲಿ ನಟಿಸಿದ್ದರು. ಈ ಮೂಲಕ ನಾಡಿನ ಮನೆ ಮನಗಳಲ್ಲಿ ಭಾರಿ ಜನಪ್ರಿಯತೆ ಪಡೆದಿದ್ದರು. ಇದೀಗ ಈ ಕೆಂಡ ಸಂಪಿಗೆ ಧಾರಾವಾಹಿಯಲ್ಲಿ ಅಮೃತಾ ರಾಮಮೂರ್ತಿ ಇದೇ ಮೊದಲ ಬಾರಿಗೆ ಬಿಝೆನೆಸ್ ವುಮೆನ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರಂತೆ. ಈ ಪಾತ್ರದಲ್ಲಿ ನಟಿಸುತ್ತೇನೆ ಅಂತ ಸ್ವತಃ ಅಮೃತಾ ಅವರಿಗೂ ಕೂಡ ನಿರೀಕ್ಷೆ ಇರಲಿಲ್ಲವಂತೆ. ಒಟ್ಟಾರೆಯಾಗಿ ಕೆಂಡ ಸಂಪಿಗೆಯ ಧಾರಾವಾಹಿಯ ಮೂಲಕ ನಟಿ ಅಮೃತಾ ರಾಮಮೂರ್ತಿ ಅವರು ಮತ್ತೆ ಧಾರಾವಾಹಿಗಳಲ್ಲಿ ನಟಿಸುತ್ತಿರುವುದಕ್ಕೆ ಅವರ ಅಭಿಮಾನಿಗಳು ಸಂತಸ ವ್ಯಕ್ತಪಡಿಸಿದ್ದಾರೆ.

Leave a Reply

%d bloggers like this: