ಬಹಳ ಆಸೆ ಇಟ್ಟುಕೊಂಡಿದ್ದ ತೆಲುಗು ಚಿತ್ರರಂಗದ ಕನಸು ಭಗ್ನ

ತೆಲುಗಿನ ಸೂಪರ್ ಸ್ಟಾರ್ ನಿರ್ದೇಶಕ ಎಸ್.ಎಸ್ ರಾಜಮೌಳಿ ಅವರ ನಿರ್ದೇಶನದಲ್ಲಿ ಮೂಡಿ ಬಂದಿದ್ದ ಥ್ರಿಬಲ್ ಆರ್ ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ಧೂಳೆಬ್ಬಿಸಿತ್ತು. ಜ್ಯೂನಿಯರ್ ಎನ್.ಟಿ.ಆರ್ ಮತ್ತು ರಾಮ್ ಚರಣ್ ತೇಜಾ ಇಬ್ಬರು ಸೂಪರ್ ಸ್ಟಾರ್ ನಟರು ನಟಿಸಿದ್ದ ಈ ಮಲ್ಟಿ ಸ್ಟಾರರ್ ಸಿನಿಮಾ ಆರ್.ಆರ್.ಆರ್. ಈ ಚಿತ್ರ ಪಂಚ ಭಾಷೆಗಳಲ್ಲಿ ರಿಲೀಸ್ ಆಗಿ ಥಿಯೇಟರ್ ನಲ್ಲಿ ಧೂಳೆಬ್ಬಿಸಿತ್ತು. ಚಿತ್ರದ ಮೇಕಿಂಗ್, ದಿಗ್ಗಜ ನಟರ ಅಮೋಘ ನಟನೆ ಕಂಡು ಈ ಆರ್.ಆರ್.ಆರ್ ಸಿನಿಮಾ ಖಂಡಿತಾ ಆಸ್ಕರ್ ಅವಾರ್ಡ್ ಗೆ ಹೋಗುತ್ತೆ ಅಂತ ಹೇಳಲಾಗಿತ್ತು. ಅದರ ಜೊತೆಗೆ ಬಾಲಿವುಡ್ ಬೇಡಿಕೆಯ ನಟಿಯಾಗಿ ಮಿಂಚುತ್ತಿರುವ ನಟಿ ಆಲಿಯಾ ಭಟ್ ನಟಿಸಿರುವ ಗಂಗೂಬಾಯಿ ಕಥಿಯಾವಾಡಿ ಸಿನಿಮಾ ಕೂಡ ಆಸ್ಕರ್ ಅವಾರ್ಡ್ ಪಡೆಯುತ್ತೆ ಅಂತ ಹೇಳಲಾಗಿತ್ತು.

ಯಾಕಂದ್ರೆ ಈ ಗಂಗೂಬಾಯಿ ಕಥಿಯಾವಾಡಿ ಸಿನಿಮಾದಲ್ಲಿ ಆಲಿಯಾಭಟ್ ಅವರ ನಟನೆಗೆ ಅಷ್ಟರ ಮಟ್ಟಿಗೆ ಅದ್ದೂರಿ ಆಗಿತ್ತು. ಅದ್ರಂತೆ ತೆಲುಗಿನ ಥ್ರಿಬಲ್ ಆರ್ ಸಿನಿಮಾದಲ್ಲಿ ಜ್ಯೂನಿಯರ್ ಎನ್ಟಿಆರ್ ಅವರ ನಟನೆಗೆ ಕೂಡ ಅಪಾರ ಪ್ರಶಂಸೆ ವ್ಯಕ್ತವಾಗಿತ್ತು. ಹಾಗಾಗಿ ಈ ಚಿತ್ರದ ಮೇಕಿಂಗ್, ಕಥೆ ಮತ್ತು ನಟರ ಅಮೋಘ ನಟನೆ ಪರಿಗಣಿಸಿ ಥ್ರಿಬಲ್ ಆರ್ ಸಿನಿಮಾ ಆಸ್ಕರ್ ಅವಾರ್ಡ್ ಗೆ ಎಂಟ್ರಿ ಆಗ್ಬೋದು ಅಂತ ಹೇಳಲಾಗ್ತಿತ್ತು. ಆದರೆ ಇದೀಗ ಥ್ರಿಬಲ್ ಆರ್ ಸಿನಿಮಾ ಆಸ್ಕರ್ ಅವಾರ್ಡ್ ಯಿಂದ ಹೊರ ಬಿದ್ದಿದೆ. ಈ ಸಿನಿಮಾದ ಬದಲಾಗಿ ಗುಜರಾತಿನ ಚೆಲೋ ಶೋ ಸಿನಿಮಾ ಆಸ್ಕರ್ ಅವಾರ್ಡ್ ಗೆ ಎಂಟ್ರಿ ಆಗಿದೆ.

ಇದೊಂದು ಗುಜರಾತಿನ ಹಳ್ಳಿಯಲ್ಲಿ ಚಿಕ್ಕ ಹುಡುಗ ಸಿನಿಮಾದ ಜೊತೆಗೆ ಹೊಂದಿರೋ ಪ್ರೇಮ ಸಂಬಂಧದ ಬಗ್ಗೆ ತೋರಿಸಲಾಗಿದೆ. ಈ ಚಿತ್ರ ನೋಡಿದ ಎಲ್ಲಾ ಕಡೆ ಅಧ್ಭುತ ವಿಮರ್ಶೆ ಪ್ರತಿಕ್ರಿಯೆ ಕೇಳಿ ಬಂದಿತ್ತು. ಅದರಂತೆ ಇದೀಗ 95ನೇ ಆಸ್ಕರ್ ಅವಾರ್ಡ್ ಗೆ ಈ ಗುಜರಾತಿ ಭಾಷೆಯ ಚೆಲೋ ಶೋ ಸಿನಿಮಾ ಪ್ರವೇಶ ಪಡೆದುಕೊಂಡಿದೆ. ಈ ವಿಚಾರವನ್ನ ಫಿಲ್ಮ್ ಫೆಡರೇಶನ್ ಆಫ್ ಇಂಡಿಯಾ ಇತ್ತೀಚೆಗೆ ತಾನೇ ಅಧಿಕೃತವಾಗಿ ಪ್ರಕಟಣೆ ಹೊರಡಿಸಿದೆ. ಹೀಗಾಗಿ ರಾಜಮೌಳಿ ಅವರ ನಿರ್ದೇಶನದಲ್ಲಿ ಮೂಡಿಬಂದಿದ್ದ ಥ್ರಿಬಲ್ ಆರ್ ಸಿನಿಮಾಗೆ ಹಿನ್ನೆಡೆಯಾಗಿದ್ದು, ರಾಜಮೌಳಿ ಮತ್ತು ಜ್ಯೂನಿಯರ್ ಎನ್ಟಿಆರ್, ರಾಮ್ ಚರಣ್ ತೇಜಾ ಅವರ ಅಭಿಮಾನಿಗಳಿಗೆ ಭಾರಿ ನಿರಾಸೆ ಮೂಡಿದೆ ಎಂದು ಹೇಳ್ಬೋದು. ಬಹಳ ಆಸೆ ಇಟ್ಟ್ಕೊಂಡಿದ್ದ ರಾಜಮೌಳಿ ಅವರಿಗೆ ಹಾಗೂ ತೆಲುಗು ಚಿತ್ರರಂಗಕ್ಕೆ ದೊಡ್ಡ ನಿರಾಸೆ ಉಂಟಾಗಿದೆ.