ಬಡವನೆಂದು ಕಾರ್ ಶೋರೂಮ್ ಒಳಗಡೆ ಬಿಡದ ಮಾಲೀಕರು! ಆತ ಯಾರೆಂದು ಗೊತ್ತಾದ ಮೇಲೆ ಕಾಲಿಗೆ ಬಿದ್ದರು

ಇದು ಬಣ್ಣದ ಬಟ್ಟೆಗೆ,ಬಣ್ಣ ಬಣ್ಣದ ಮಾತಿಗೆ ಗೌರವಕೊಡುವ,ಮರುಳಾಗುವ ಕಾಲ.ವ್ಯಕ್ತಿಯ ವ್ಯಕ್ತಿತ್ವ ಗುಣ ದೊಡ್ಡತನವನ್ನು ಅವನು ಹಾಕುವ ಬಟ್ಟೆ,ತೊಡುವ ಒಡವೆ ನೋಡಿ ಗೌರವ ನೀಡುತ್ತಾರೆ.ಮುಖನೋಡಿ ಮಣೆ ಹಾಕಬಾರದು ಎಂಬ ಹಿರಿಯರ ವಾಣಿ ಅಂತೆ.ಆದರೆ ಈ ದೃಷ್ಟಿಕೋನ ಒಂದಲ್ಲಾ ಒಂದು ದಿನ ದೃಷ್ಟಿಯಲ್ಲಿರುವ ಪೊರೆಯನ್ನು ಕಳಚುವಂತೆ ವ್ಯಕ್ತಿಯ ಗುಣವನ್ನು ನೋಡಿ ವ್ಯಕ್ತಿಯ ದೊಡ್ಡತನವನ್ನು ಅಳೆಯುವಂತೆ ಮಾಡುತ್ತದೆ. ಸಮಾಜದಲ್ಲಿ ವ್ಯಕ್ತಿಯ ಆರ್ಥಿಕ ಪರಿಸ್ಥಿತಿ,ಅಂತಸ್ತು,ಅಧಿಕಾರವ ನೋಡಿ ಆ ವ್ಯಕ್ತಿಯನ್ನ ಅಳೆಯುತ್ತಾರೆ.ಅಂತೆಯೇ ಹೀಗೆ ಶ್ರೀಮಂತ ವ್ಯಕ್ತಿಯೊಬ್ಬ ಸಮಾಜದಲ್ಲಿ ಬಡ ಬಗ್ಗರಿಗೆ ನೀಡುವ ಗೌರವಾಧಾರಗಳು ಯಾವ ರೀತಿಯದ್ದಾಗಿರುತ್ತದೆ ಎಂದು ತಿಳಿಯಬೇಕು ಎಂದು ತನ್ನ ಶ್ರೀಮಂತ ಬದುಕಿನ ಶೈಲಿಯನ್ನ ಬಿಟ್ಟು,ತನ್ನ ಐಷಾರಾಮಿ ಕಾರು ಬಂಗಲೆಯಿಂದ ಹೊರ ಬಂದು ಒಬ್ಬ ಸಾಮಾನ್ಯ ಬಡ ವ್ಯಕ್ತಿಯ ರೀತಿಯಲ್ಲಿ ಪ್ರತಿಷ್ಟಿತ ಕಾರೊಂದರ ಶೋರೂಂ ಕಡೆ ಬರುತ್ತಾರೆ.

ಅಲ್ಲಿದ್ದಂತಹ ದುಬಾರಿ ಬೆಲೆಯ ಕಾರುಗಳನ್ನ ದಿಟ್ಟಿಸಿ ಆಸೆ ಗಣ್ಣಿನಿಂದ ನೋಡುತ್ತಾ ನಿಲುತ್ತಾರೆ.ಶೋರೂಂ ಬಳಿ ನಿಂತಿದ್ದ ಈ ವ್ಯಕ್ತಿಯನ್ನ ನೋಡಿ ಸೆಕ್ಯೂರಿಟಿ ಗಾರ್ಡ್ ಏನು ಬೇಕು ನಿಮಗೆ,ಇಲ್ಲಿ ಏಕೆ ನಿಂತಿದ್ದೀರಿ ನಡೆಯರಿ ಎಂದು ಹೇಳುತ್ತಾನೆ.ಅಲ್ಲಿಂದ ಹೋಗದೇ ಆ ವ್ಯಕ್ತಿ ಅಲ್ಲಿಯೇ ನಿಂತು ಈ ಕಾರುಗಳನ್ನು ನೋಡುತ್ತಲೇ ಇರುತ್ತಾನೆ.ಆಗ ನಾವು ನೀವು ಈ ಕಾರುಗಳನ್ನು ಖರೀದಿ ಮಾಡಲು ನಮಗೆ ಸಾಧ್ಯವಾಗುವುದಿಲ್ಲ.ಇರಲಿ ತಿಂಗಳಿಗೆ ನಿನ್ನ ಸಂಬಳ ಎಷ್ಟು,ಈ ಕಾರ್ ಕೊಳ್ಳುವುದರಿರಲಿ,ನೋಡಿ ಟೆಸ್ಟ್ ಡ್ರೈವ್ ಮಾಡುವುದಕ್ಕೂ ಕೊಡುವುದಿಲ್ಲ ಎನ್ನುತ್ತಾನೆ.ಈ ವ್ಯಕ್ತಿ ಆಗ ನನಗೆ ಈ ಕಾರ್ ಬೇಕು,ಎಷ್ಟು ಒಮ್ಮೆ ಟೆಸ್ಟ್ ಡ್ರೈವ್ ಮಾಡಬಹುದಾ ಎಂದು ಕೇಳಿದಾಗ ಸೆಕ್ಯೂರಿಟಿ ಗಾರ್ಡ್ ಈ ವ್ಯಕ್ತಿಯನ್ನ ಶೋರೂಂ ಒಳಗೆ ಹೋಗಲೂ ಕೂಡ ಬಿಡದೆ ಅವಮಾನಿಸಿ ತಡೆಯುತ್ತಾನೆ.

ಇದನ್ನ ಸಿಸಿ ಕ್ಯಾಮೆರಾದಲ್ಲಿ ಗಮನಿಸಿದ ಶೋರೂಂ ಮಾಲೀಕ ತಕ್ಷಣ ಮಾರುವೇಷದಲ್ಲಿದ್ದ ಈ ವ್ಯಕ್ತಿಯನ್ನ ಕಂಡು ಓಡೋಡಿ ಬಂದು ಸೆಕ್ಯೂರಿಟಿ ಗೆ ಬೈದು ಆ ವ್ಯಕ್ತಿಯ ಬಳಿ ಕ್ಷಮೆ ಕೇಳಿ ಒಳ ಬರಲು ವಿನಯವಾಗಿ ಬೇಡಿಕೊಳ್ಳುತ್ತಾನೆ.ಆದರೆ ಒಳ ಹೋಗದ ಈ ಸಾಮಾನ್ಯ ವ್ಯಕ್ತಿಯ ಹಾಗೆ ಮಾರುವೇಷದಲ್ಲಿದ್ದ ಶ್ರೀಮಂತ ವ್ಯಕ್ತಿ ತನ್ನ ಡ್ರೈವರ್ ಗೆ ಕರೆ ಮಾಡಿ ತನ್ನ ದುಬಾರಿ ಐಷಾರಾಮಿ ಕಾರೊಂದನ್ನ ಅದೇ ಶೋರೂಂ ಬಳಿ ತರಲು ಹೇಳುತ್ತಾರೆ.ಹೇಳಿದ ಕ್ಷಣಾರ್ಧದಲ್ಲಿ ದುಬಾರಿ ಐಷಾರಾಮಿ ಕಾರೊಂದು ಬಂದು ನಿಲ್ಲುತ್ತದೆ.ಆ ವ್ಯಕ್ತಿ ಸೆಕ್ಯೂರಿಟಿಗೆ ನೀತಿ ಪಾಠ ಹೇಳಿ ತನ್ನ ಕಾರಿನಲ್ಲಿ ಹೊರಡುತ್ತಾನೆ.ಅದಕ್ಕೆ ಅಲ್ಲವೇ ಮುಖ ನೋಡಿ ಮಣೆ ಹಾಕಬಾರದು ಎಂದು ನಮ್ಮ ಹಿರಿಯರು ಹೇಳುವುದು.ಇದು ಗಾದೆ ಆಗಿದ್ದರು ಕೂಡ ಇದು ನಮ್ಮ ಹಿರಿಯರ ಅನುಭವ ವಾಣಿಯಾಗಿದೆ.ಯಾರನ್ನೂ ಕೂಡ ಬಟ್ಟೆ ಬರೆ ನೋಡಿ ವ್ಯಕ್ತಿಯನ್ನ ಅಳೆಯಬಾರದು ಎಂಬುದಕ್ಕೆ ಈ ಒಂದು ಸಂಗತಿ ಉತ್ತಮ ನಿದರ್ಶನವಾಗಿದೆ.

Leave a Reply

%d bloggers like this: