ಅವಳಿ ಜವಳಿ ಮಕ್ಕಳಿಗೆ ಜನ್ಮ ನೀಡಿದ ದಕ್ಷಿಣ ಭಾರತದ ಸುಪ್ರಸಿದ್ದ ನಟಿ

ದಕ್ಷಿಣ ಚಿತ್ರರಂಗದ ಮಾದಕ ತಾರೆ ಇದೀಗ ಅವಳಿ ಮಕ್ಕಳಿಗೆ ತಾಯಿ ಆಗಿದ್ದಾರೆ. ಇತ್ತೀಚೆಗೆ ಭಾರತೀಯ ಚಿತ್ರರಂಗದಲ್ಲಿ ಸಿವಿಮಾ ಸೆಲೆಬ್ರಿಟಿಗಳು ಮದುವೆ, ಬೇಬಿ ಬಂಪ್ ಪೋಟೋ ಶೂಪ್ ಮತ್ತು ಇನ್ನಿತರ ವೈಯಕ್ತಿಕ ವಿಚಾರಗಳಿಗೇನೆ ಸುದ್ದಿಯಲ್ಲಿದ್ದಾರೆ. ಇತ್ತೀಚೆಗಷ್ಟೇ ಕೃಷ್ಣ ಜನ್ಮಾಷ್ಟಮಿ ಹಬ್ಬದಂದು ಕನ್ನಡದ ನಟಿ ಅಮೂಲ್ಯ ಅವರು ತಮ್ಮ ಅವಳಿ ಮಕ್ಕಳ ಫೋಟೋವನ್ನ ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಶೇರ್ ಮಾಡಿಕೊಳ್ಳುವ ಮೂಲಕ ಸುದ್ದಿಯಾಗಿದ್ದರು. ಅದೇ ದಿನ ಸೌತ್ ಸಿನಿ ಇಂಡಸ್ಟ್ರಿಯ ಮಾದಕ ನಟಿ ಎಂದೇ ಹೆಸರಾಗಿರೋ ನಮಿತಾ ಕೂಡ ತಮಗೆ ಅವಳಿ ಗಂಡು ಮಕ್ಕಳು ಜನಿಸಿರೋ ವಿಚಾರವನ್ನು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ವೀಡಿಯೋ ಪೋಸ್ಟ್ ಮಾಡುವ ಮೂಲಕ ತಿಳಿಸಿದ್ದರು. ನಮಿತಾ ಅವರು ಕನ್ನಡದಲ್ಲಿ ದರ್ಶನ್ ಅವರ ಇಂದ್ರ, ರವಿ ಚಂದ್ರನ್ ಅವರ ನೀಲಕಂಠ, ಹೂ, ಸೇರಿದಂತೆ ಒಂದಷ್ಟು ಸಿನಿಮಾಗಳಲ್ಲಿ ನಟಿಸಿದ್ದಾರೆ. ಕನ್ನಡದಲ್ಲಿ ನಮಿತಾ ನಟಿಸಿದ ಕೊನೆಯ ಸಿನಿಮಾ ಅಂದರೆ ಅದು ಬೆಂಕಿ ಬಿರುಗಾಳಿ.

ಕನ್ನಡ, ತೆಲುಗು, ತಮಿಳು ಸಿನಿಮಾಗಳಲ್ಲಿ ನಟಿಸಿರುವ ನಮಿತಾ ಅವರು 2017ರಲ್ಲಿ ಮಲ್ಲಿರೆಡ್ಡಿ ವೀರೇಂದ್ರ ಚೌಧರಿ ಎಂಬುವರೊಟ್ಟಿಗೆ ಸಾಂಸಾರಿಕ ಜೀವನಕ್ಕೆ ಹೆಜ್ಜೆ ಇಡುತ್ತಾರೆ. ಮದುವೆಯಾದ ನಂತರ ಸಿನಿಮಾಗಳಲ್ಲಿ ನಟಿಸುವುದನ್ನ ಕಡಿಮೆ ಮಾಡಿರೋ ನಮಿತಾ ವರ್ಷಕ್ಕೆ ಒಂದಂತೆ ಸಿನಿಮಾ ಮಾಡುವುದರ ಜೊತೆಗೆ ಕಿರುತೆರೆ ರಿಯಾಲಿಟಿ ಶೋಗಳಲ್ಲಿ ಜಡ್ಜ್ ಆಗಿ ತೊಡಗಿಸಿಕೊಂಡಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಸಖತ್ ಆಕ್ಟೀವ್ ಆಗಿರೋ ನಮಿತಾ ಅವರು ತಮ್ಮ ಪತಿಯ ಜೊತೆ ಇರೋ ಮತ್ತು ತಮ್ಮ ಒಂದಷ್ಟು ಫೋಟೋ ಜೊತೆಗೆ ತಮ್ಮ ಸಿನಿಮಾ ಅಪ್ ಡೇಟ್ಸ್ ನೀಡುತ್ತಿರುತ್ತಾರೆ. ಅದೇ ರೀತಿಯಾಗಿ ಕೃಷ್ಣ ಜನ್ಮಾಷ್ಠಮಿ ಹಬ್ಬದ ದಿನದಂದು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹರೇ ಕೃಷ್ಣ ಈ ಶುಭದಿನದಂದು ನಾನು ಸಂತೋಷದ ಸುದ್ದಿಯೊಂದನ್ನ ನೀಡಲು ಇಷ್ಟ ಪಡುತ್ತೇವೆ. ನನಗೆ ಅವಳಿ ಗಂಡು ಮಕ್ಕಳು ಜನಿಸಿವೆ. ನಮ್ಮ ಕುಟುಂಬದ ಮೇಲೆ ಮತ್ತು ನಮ್ಮ ಮುದ್ದು ಮಕ್ಕಳ ಮೇಲೆ ನಿಮ್ಮ ಪ್ರೀತಿ ಅಭಿಮಾನ ಇರಲಿ ಎಂದು ವೀಡಿಯೋ ಮಾಡಿ ಪೋಸ್ಟ್ ಮಾಡಿದ್ದಾರೆ. ನಮಿತಾ ಅವರ ಈ ವೀಡಿಯೋ ಪೋಸ್ಟ್ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಅವರ ಅಭಿಮಾನಿಗಳು ಮತ್ತು ಅವರ ಸಹೋದ್ಯೋಗಿ ಕಲಾವಿದರು ಶುಭ ಹಾರೈಸಿದ್ದಾರೆ.

Leave a Reply

%d bloggers like this: