ಅವಕಾಶಗಳು ಸಿಗದೇ ಹೋದಾಗ ನಟಿ ಪವಿತ್ರಾ ಲೋಕೇಶ್ ಎಂತಹ ಕೆಲಸಕ್ಕೆ ಕೈ ಹಾಕಿದ್ರು ಗೊತ್ತಾ

ಇತ್ತೀಚಿಗೆ ತೀರಾ ಸುದ್ದಿಯಲ್ಲಿರುವ ಹೆಸರು ಪವಿತ್ರ ಲೋಕೇಶ್ ಇವರು ಯಾರು ಇವರ ಹಿನ್ನಲೇ ಏನು ? ಇವರು ಹೇಗೆ ಸಿನಿಮಾ ಕ್ಷೇತ್ರಕ್ಕೆ ಬಂದರು ? ಇವರ ವಯಕ್ತಿಕ ಜೀವನದ ಬಗ್ಗೆ ಹಿನ್ನಲೆಯ ಬಗ್ಗೆ ಇಲ್ಲಿದೆ ಹಲವಾರು ವಿಷಯಗಳು. ಪವಿತ್ರಾ ಲೋಕೇಶ್ ತಂದೆ ಮೈಸೂರು ಲೋಕೇಶ್ ಕನ್ನಡ ರಂಗಭೂಮಿ ಮತ್ತು ಚಲನಚಿತ್ರ ನಟರಾಗಿದ್ದರು. 10 ನೇ ತರಗತಿಯಲ್ಲಿ ತಂದೆ ಮೈಸೂರು ಲೋಕೇಶ್ ಅವರ ಹಠಾತ್ ಮರಣದ ನಂತರ, ಪವಿತ್ರಾ ಲೋಕೇಶ್ ತಮ್ಮ ಅಧ್ಯಯನವನ್ನು ಮುಂದುವರೆಸುವಾಗಲೇ ಚಲನಚಿತ್ರಗಳಿಗೆ ಕಾಲಿಟ್ಟರು. ಮೇಲಾಗಿ ಸಿನಿಮಾದಲ್ಲಿ ನಟಿಸುತ್ತಲೇ ಪದವಿ ಮುಗಿಸಿ ಸಿವಿಲ್ ಸರ್ವೀಸ್ ಪರೀಕ್ಷೆಯನ್ನೂ ಬರೆದಿದ್ದರು.

16ನೇ ವಯಸ್ಸಿನಲ್ಲಿ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು. 1994ರಲ್ಲಿ ಅಂಬರೀಶ್ ಅಭಿನಯದ ‘ಮಿಸ್ಟರ್ ಅಭಿಷೇಕ್’ ಚಿತ್ರದಲ್ಲಿ ನಟಿಸಿದ್ದರು. ಆ ನಂತರ ಅದೇ ವರ್ಷ ‘ಬಂಗಾರದ ಕಲಶ’ ಚಿತ್ರದಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದಾರೆ. 2006 ರ ಚಲನಚಿತ್ರ ‘ನಾಯಿ ನೆರಳು’ ಚಿತ್ರದಲ್ಲಿನ ಅಭಿನಯಕ್ಕಾಗಿ ಅವರು ಕರ್ನಾಟಕ ರಾಜ್ಯ ಪ್ರಶಸ್ತಿಯನ್ನು ಪಡೆದರು. ಪವಿತ್ರ ಲೋಕೇಶ್ ಅವರು ಕನ್ನಡ ಹಾಗೂ ತೆಲುಗು ಸಿನಿಮಾ ರಂಗದಲ್ಲಿ ಸುಮಾರು 150ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿ ಖ್ಯಾತ ಪೋಷಕ ನಟಿಯಾಗಿ.

ಇನ್ನೂ ಹಲವಾರು ಸಿನಿಮಾಗಳಲ್ಲಿ ಅಕ್ಕನ ಪಾತ್ರ, ತಾಯಿ ಪಾತ್ರ, ಅತ್ತಿಗೆ ಪಾತ್ರ ಹೀಗೆ ವಿವಿಧ ಪಾತ್ರಗಳಲ್ಲಿ ಜೀವ ತುಂಬುತ್ತ ಬಂದಿದ್ದು, ತೆಲುಗು ಚಿತ್ರರಂಗದಲ್ಲಂತೂ ತಮ್ಮದೇ ಆದ ಅಭಿಮಾನಿಗಳ ಬಳಗವನ್ನು ಕೂಡ ಹೊಂದಿದ್ದಾರೆ. ನಂತರ ವಾಣಿಜ್ಯ ವಿಷಯದಲ್ಲಿ ಪದವಿ ಮುಗಿಸಿದ ಅವರು ಒಂದು ಬಾರಿ ನಾಗರೀಕ ಸೇವಾ ಪರೀಕ್ಷೆಯನ್ನು ಎದುರಿಸುತ್ತಾರೆ ಆದರೆ ಮೊದಲ ಪ್ರಯತ್ನದಲ್ಲಿ ಅವರಿಗೆ ಅಷ್ಟೊಂದು ಯಶಸ್ಸು ಸಿಗುವುದಿಲ್ಲ ಆಗ ತಂದೆಯ ನಿಧನದ ನಂತರ ಮನೆಯ ಆರ್ಥಿಕ ಸ್ಥಿತಿಯು ಸರಿಯಾಗಿ ಇರ ಕಾರಣ ಅವರು ನಟನೆಗೆ ಇಳಿಯುತ್ತಾರೆ rebel star ಅಂಬರೀಷ್ ಸಲಹೆಯಂತೆ ಈ ಚಿತ್ರರಂಗಕ್ಕೆ ಬಂದ ಇವರು ಅಂಬರೀಷ್ ಅವರ Mister ಅಭಿಷೇಕ್ ಚಿತ್ರದಲ್ಲಿ ಚಿಕ್ಕ ಪಾತ್ರದಲ್ಲಿ ನಟಿಸುತ್ತಾರೆ .

ನಂತರ ಕೆಲವು ಚಿಕ್ಕ ಪಾತ್ರಗಳನ್ನು ನಟಿಸಿದರು ಮನ್ನಣೆ ಸಿಗದೇ ಇದ್ದಾಗ ಒಂದು MNC ಕಂಪನಿಯಲ್ಲಿ HR consulting ಆಗಿ ಕೆಲಸ ಕೂಡ ಮಾಡುತ್ತಾರೆ ಇವರ ಸಾಧಾರಣ ಇವತ್ತಿಗಿಂತ ಸ್ವಲ್ಪ ಎತ್ತರ ಇರುವದರಿಂದ ಇವರಿಗೆ ನಾಯಕ ನಟಿಯಾಗಿ ನಟಿಸುವ ಅವಕಾಶಗಳು ಸಿಗುತ್ತಿಲ್ಲ ಆದ್ದರಿಂದಲೇ ತಮಗೆ ಸಿಕ್ಕ ಸಿಕ್ಕ ಪಾತ್ರಗಳನ್ನು ಅವರು ನಟಿಸುತ್ತಾರೆ ಇವರಿಗೆ ಮನ್ನಣೆ ತಂದು ಕೊಟ್ಟಂತಹ ಚಿತ್ರ ಗಿರೀಶ್ ಕಾಸರವಳ್ಳಿ ನಿರ್ದೇಶನದ ನಾಯಿ ನೆರಳು ಈ ಚಿತ್ರದ ನಟನೆ ಕರ್ನಾಟಕ ರಾಜ್ಯ ಅತ್ಯುತ್ತಮ ನಟಿ ಪ್ರಶಸ್ತಿ ಕೂಡ ಇವರಿಗೆ ಲಭಿಸಿತ್ತು.

ಮುಂದೆ ಪವಿತ್ರ ಲೋಕೇಶ್ ಕಿರುತೆರೆಯಲ್ಲಿ ಕೂಡ ಸಕ್ರಿಯವಾಗಿದ್ದರು ಇವರು ನೂರಾರು ಧಾರಾವಾಹಿಗಳಲ್ಲೂ ಕೂಡ ನಟಿಸಿದ್ದಾರೆ. ಈ ನಮ್ಮ ಲೇಖನ ನಿಮಗೆ ಇಷ್ಟವಾದಲ್ಲಿ ಲೈಕ್ ಮಾಡಿ ಮತ್ತು ಶೇರ್ ಮಾಡಿ. ಮತ್ತಷ್ಟು ಹೊಸ ಹೊಸ ಸುದ್ದಿಗಳಿಗಾಗಿ ನಮ್ಮ ಪೇಜ್ ನ್ನು ತಪ್ಪದೆ ಲೈಕ್ ಮಾಡಿ.

Leave a Reply

%d bloggers like this: