ಅವಕಾಶಗಳು ಸಿಗದೇ ಹೋದಾಗ ನಟಿ ಪವಿತ್ರಾ ಲೋಕೇಶ್ ಎಂತಹ ಕೆಲಸಕ್ಕೆ ಕೈ ಹಾಕಿದ್ರು ಗೊತ್ತಾ

ಬದುಕಿಗಾಗಿ ಹದಿ-ಹರೆಯದಲ್ಲಿ ಬಣ್ಣದ ಲೋಕಕ್ಕೆ ಹೆಜ್ಜೆ ಇಟ್ಟ ಇವರಿಗೆ ಎದುರಾಗಿದ್ದು ಸಾಲು ಸಾಲು ಅವಮಾನ ಸಂಕಷ್ಟಗಳು.ಈ ನಟಿಯ ತಂದೆ ಕನ್ನಡ ಚಲನ ಚಿತ್ರರಂಗದಲ್ಲಿ ಭಾರಿ ಜನಪ್ರಿಯ ಖಳ ಮತ್ತು ಹಾಸ್ಯ ನಟರಾಗಿದ್ದರು ಎಂಬುದು ದುರಂತದ ವಿಚಾರ. ತಂದೆ ಒಬ್ಬ ಜನಪ್ರಿಯ ನಟರಾಗಿದ್ದರು ಕೂಡ ಅವಕಾಶಕ್ಕಾಗಿ ಕಂಡ ಕಂಡವರಲ್ಲಿ ವಿನಂತಿ ಮಾಡುವ ಪರಿಸ್ಥಿತಿ ಎದುರಾಗಿದ್ದು ನಿಜಕ್ಕೂ ಬೇಸರದ ಸಂಗತಿಯೇ ಸರಿ‌.ಈ ನಟಿಗೆ ಸಿನಿಮಾಗಳಲ್ಲಿ ನಟಿಸುವ ಅವಕಾಶ ಕೊಡಿಸಿದ್ದು ಕಲಿಯುಗ ಕರ್ಣ ಎಂದೇ ಕರೆಸಿಕೊಳ್ಳುತ್ತಿದ್ದ ರೆಬೆಲ್ ಸ್ಟಾರ್ ಅಂಬರೀಷ್.ಇಂದು ಸ್ಯಾಂಡಲ್ ವುಡ್ ಮತ್ತು ಟಾಲಿವುಡ್ ನಲ್ಲಿ ಭಾರಿ ಬೇಡಿಕೆಯ ಯಶಸ್ವಿ ಪೋಷಕ ನಟಿಯಾಗಿ ಗುರುತಿಸಿಕೊಂಡಿರುವ ಪವಿತ್ರಾ ಲೋಕೇಶ್ ತನ್ನ ಕಷ್ಟದ ದಿನಗಳಲ್ಲಿ ಕೈ ಹಿಡಿದು ನೆರವಾಗಿದ ಅಂಬರೀಷ್ ಅವರನ್ನು ಸದಾ ನೆನೆಯುತ್ತಿರುತ್ತಾರೆ.

ಪವಿತ್ರಾ ಲೋಕೇಶ್ ಕನ್ನಡದ ಖ್ಯಾತ ನಟರಾದ ಮೈಸೂರ್ ಲೋಕೇಶ್ ಅವರ ಮಗಳು.ನಟರಾದ ಮೈಸೂರ್ ಲೋಕೇಶ್ ಡಾ.ರಾಜ್ ಕುಮಾರ್,ವಿಷ್ಣು ವರ್ಧನ್,ಅಂಬರೀಶ್,ಶಂಕರ್ ನಾಗ್,ವಿ‌.ರವಿಚಂದ್ರನ್ ಸೇರಿದಂತೆ ಅನೇಕ ದಿಗ್ಗಜ ನಟರೊಂದಿಗೆ ನಟಿಸಿದ್ದರು. ಮೈಸೂರ್ ಲೋಕೇಶ್ ಅವರು 1994 ರಲ್ಲಿ ನಿಧನರಾದ ಬಳಿಕ ಮನೆಯ ಹಿರಿಯ ಮಗಳಾಗಿದ್ದ ಪವಿತ್ರಾ ಲೋಕೇಶ್ ಅವರ ಮೇಲೆ ಕುಟುಂಬದ ಸಂಪೂರ್ಣ ಜವಾಬ್ದಾರಿ ಹೊರಬೇಕಾಯಿತು.ಆಗ ಪವಿತ್ರಾ ಲೋಕೇಶ್ ಅವರಿಗೆ ದುಡಿಯಲೇಬೇಕಾದ ಅನಿವಾರ್ಯ ಉಂಟಾಯಿತು.ಆಗ ತನ್ನ ತಂದೆ ಜನಪ್ರಿಯ ನಟರಾಗಿದ್ದಾರೆ,ಅವರ ಹಿನ್ನೆಲೆ ಆಧಾರದ ಮೇಲೆ ಸಿನಿಮಾಗಳಲ್ಲಿ ನಟಿಸಲು ಅವಕಾಶಕ್ಕಾಗಿ ಬಹುತೇಕ ನಿರ್ದೇಶಕ,ನಿರ್ಮಾಪಕರ ಬಳಿ ಅಲೆದರು.

ಆದರೆ ಯಾವುದೇ ಪ್ರತಿಫಲ ಸಿಗದೆ ಪವಿತ್ರಾ ನೋವರನ್ನು ನೋಡುವ ದೃಷ್ಟಿಕೋನವೇ ಬೇರೆಯದ್ದಾಗಿತ್ತು.ತನ್ನ ಕುಟುಂಬದ ಜೀವನ ಸಾಗಿಸುವುದಕ್ಕಾಗಿ ಹಲವು ಕಂಪನಿಗಳಲ್ಲಿ ಕೆಲಸ ಮಾಡಲು ಶುರು ಮಾಡಿದರು.ಇದರ ನಡುವೆ ಸಿನಿಮಾ ಅವಕಾಶಕ್ಕಾಗಿ ಪ್ರಯತ್ನ ಮಾಡುತ್ತಿದ್ದರು.ಇಂತಹ ಸಂಕಷ್ಟದ ಸಂಧರ್ಭದಲ್ಲಿ ಪವಿತ್ರಾ ಅವರಿಗೆ ನೆರವಾಗಿದ್ದು ರೆಬೆಲ್ ಸ್ಟಾರ್ ಅಂಬರೀಷ್.ಅಂಬರೀಷ್ ಅವರ ಪ್ರೋತ್ಸಾಹ ಸಲಹೆ ಮೇರೆಗೆ ಪವಿತ್ರಾ ಅವರಿಗೆ ಮಿಸ್ಟರ್ ಅಭಿಷೇಕ್ ಚಿತ್ರದಲ್ಲಿ ಪ್ರಮುಖ ಪಾತ್ರವೊಂದು ದಕ್ಕಿತು.ಇದಾದ ಬಳಿಕ ಒಂದಷ್ಟು ಸಿನಿಮಾಗಳಲ್ಲಿ ನಟಿಸಿದ ಪವಿತ್ರಾ ಲೋಕೇಶ್ ಅವರಿಗೆ ಹೇಳಿಕೊಳ್ಳುವಷ್ಟು ಯಶಸ್ಸು ದೊರೆಯಲಿಲ್ಲ.

ಹೇಗಿದ್ದರು ಹಣದ ಅವಶ್ಯಕತೆ ಇದ್ದ ಕಾರಣ ಪವಿತ್ರಾ ಲೋಕೇಶ್ ಅವರು ಕೇವಲ ನಟನೆ ಮಾತ್ರ ಅಲ್ಲದೆ ಸಿನಿಮಾದ ವಿವಿಧ ಭಾಗಗಳಲ್ಲಿ ದುಡಿಯಲು ಆರಂಭಿಸಿದರು.ತದ ನಂತರ ಪವಿತ್ರಾ ಲೋಕೇಶ್ ಅವರಿಗೆ ಹಲವಾರು ಸಿನಿಮಾಗಳಲ್ಲಿ ನಟಿಸಲು ಅವಕಾಶ ದೊರೆತು ಬೇಡಿಕೆಯ ನಟಿಯಾಗಿ ಗುರುತಿಸಿಕೊಂಡರು.ಪವಿತ್ರಾ ಲೋಕೇಶ್ ಅವರು ನಟಿಸಿದ ನಾಯಿ ನೆರಳು ಚಿತ್ರಕ್ಕೆ ಅತ್ಯುತ್ತಮ ನಟಿ ಪ್ರಶಸ್ತಿ ಲಭಿಸಿತು. 2006 ರ ಕರ್ನಾಟಕ ರಾಜ್ಯ ಫಿಲ್ಮ್ ಅವಾರ್ಡ್ ಅತ್ಯುತ್ತಮ ನಟಿ ಪ್ರಶಸ್ತಿ ಸಿಕ್ಕಿದೆ.ಇದುವರೆಗೂ 150 ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿರುವ ಪವಿತ್ರಾ ಲೋಕೇಶ್ ಅವರಿಗೆ ಕನ್ನಡ ಮತ್ತು ತೆಲುಗು ಸಿನಿಮಾ ಮತ್ತು ಧಾರಾವಾಹಿಗಳಲ್ಲಿ ಭಾರಿ ಬೇಡಿಕೆ ಇದೆ.

ಕಳೆದ 2020 ರ ವರ್ಷದ ಫೆಬ್ರವರಿಯಲ್ಲಿ ತೆರೆಕಂಡ ದಿಯಾ ಸಿನಿಮಾದಲ್ಲಿ ನಾಯಕನ ತಾಯಿಯ ಪಾತ್ರದಲ್ಲಿ ನಟಿಸಿದ ಪವಿತ್ರಾ ಲೋಕೇಶ್ ಅವರಿಗೆ ಬಹಳ ಮೆಚ್ಚುಗೆ ವ್ಯಕ್ತವಾಗಿತ್ತು.ಕೆ.ಎಸ್.ಅಶೋಕ್ ನಿರ್ದೇಶನದಲ್ಲಿ ಮೂಡಿಬಂದ ದಿಯಾ ಚಿತ್ರದಲ್ಲಿ ದೀಕ್ಷಿತ್ ಶೆಟ್ಟಿ,ಪೃಥ್ವಿ ಅಂಬರ್,ಖುಷಿ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದರು.ನಟಿ ಪವಿತ್ರಾ ಲೋಕೇಶ್ ಅವರು ಕನ್ನಡದ ಖ್ಯಾತ ನಟರಾದ ಸುಚೇಂದ್ರ ಪ್ರಸಾದ್ ಅವರೊಂದಿಗೆ ಸುಂದರ ದಾಂಪತ್ಯ ಜೀವನ ನಡೆಸುತ್ತಿದ್ದಾರೆ. ಈ ನಮ್ಮ ಲೇಖನ ನಿಮಗೆ ಇಷ್ಟವಾದಲ್ಲಿ ಶೇರ್ ಮಾಡಿ ಮತ್ತು ಲೈಕ್ ಮಾಡಿ. ಮತ್ತಷ್ಟು ಹೊಸ ಹೊಸ ಸುದ್ದಿಗಳಿಗಾಗಿ ನಮ್ಮ ಪೇಜ್ ನ್ನು ತಪ್ಪದೆ ಲೈಕ್ ಮಾಡಿ.

Leave a Reply

%d bloggers like this: