ಆಟೋ ಮೊಬೈಲ್ ಕ್ಷೇತ್ರದಲ್ಲಿ ಭಾರತದಲ್ಲಿ ಹೊಸ ಸಂಚಲನ ಮೂಡಿಸಿದ ಕಾರು ಕಂಪನಿ

ಎಲ್ಲಾ ಕ್ಷೇತ್ರಗಳಲ್ಲಿ ಇರುವಂತೆ ಆಟೋಮೊಬೈಲ್ ಕ್ಷೇತ್ರ ಕೂಡ ದಿನ ಕಳೆದಂತೆ ಹೊಸ ತಂತ್ರಜ್ಞಾನಕ್ಕೆ ಒಗ್ಗಿಸಿಕೊಂಡು ಗ್ರಾಹಕರ ಬೇಡಿಕೆ ಮತ್ತು ಅವರ ಅಭಿರುಚಿಗೆ ತಕ್ಕಂತಹ ಕಾರುಗಳನ್ನ ತಯಾರಿಸಿ ಮಾರುಕಟ್ಟೆ ಬಿಡುಗಡೆ ಮಾಡುತ್ತಿದ್ದಾರೆ. ಹಾಗಾಗಿಯೇ ಎಲ್ಲಾ ಕಾರು ಕಂಪನಿಗಳಲ್ಲಿ ಭಾರಿ ಪೈಪೋಟಿ ಏರ್ಪಟ್ಟಿದೆ. ತಿಂಗಳಿಗೊಮ್ಮೆ ಒಂದೊಂದು ಕಾರು ಕಂಪನಿಯು ನಂಬರ್ ಒನ್ ಪಟ್ಟ ಏರುತ್ತಿದ್ದು. ಯಾವ ಕಂಪನಿ ಕಾರು ಆಯಾಯ ತಿಂಗಳಿನಲ್ಲಿ ಅತಿ ಹೆಚ್ಚು ಮಾರಾಟ ಆಗಿವೆ ಅನ್ನೋದೇ ಇದೀಗ ಭಾರಿ ಸುದ್ದಿಯಾಗುತ್ತಿವೆ. ಅದರಂತೆ ಇದೀಗ ಕಳೆದ ಜುಲೈ ತಿಂಗಳಿನಲ್ಲಿ ಬರೋಬ್ಬರಿ ಐವತ್ತು ಸಾವಿರ ಯೂನಿಟ್ ಮಾರಾಟವಾಗಿ ನಿಸ್ಸಾನ್ ಮ್ಯಾಗ್ನೈಟ್ ಕಾರು ಸುದ್ದಿಯಲ್ಲಿದೆ. ಈ ನಿಸ್ಸಾನ್ ಕಂಪನಿಯ ಕಿಕ್ಸ್ ಕಂಪ್ಯಾಕ್ಟ್ ಎಸ್.ಯೂ.ವಿ ಮತ್ತು ಮ್ಯಾಗ್ನೈಟ್ ಸಬ್ ಫೋರ್ ಮೀಟರ್ ಕಂಪ್ಯಾಕ್ಟ್ ಎಸ್ಯೂವಿಯು ಕಾರು ಅತ್ಯಧಿಕ ಮಾರಾಟ ಪಡೆದುಕೊಂಡಿದೆ.

ಕಳೆದ ಎರಡು ವರ್ಷಗಳ ಹಿಂದೆ ಅಂದರೆ 2020ರ ಡಿಸೆಂಬರ್ ತಿಂಗಳಿನಲ್ಲಿ ಈ ನಿಸ್ಸಾನ್ ಮ್ಯಾಗ್ನೈಟ್ ಕಾರು ಭಾರತೀಯ ಮಾರುಕಟ್ಟೆಗೆ ಬಿಡುಗಡೆ ಆಗಿತ್ತು. ಈ ಹೊಸ ಕಾರು ಇನ್ನಿತರ ಕಾರುಗಳಿಗಿಂತ ಕಡಿಮೆ ಬೆಲೆಯಲ್ಲಿ ಅತ್ಯಧುನಿಕ ಫೀಚರ್ ಹೊಂದಿರುವ ಕಾರಾಗಿರುವ ಕಾರಣ ಕಾರು ಪ್ರಿಯರು ಈ ಕಾರನ್ನ ಕೊಳ್ಳಲು ಬಹಳ ಉತ್ಸುಕತೆಯನ್ನ ತೋರುತ್ತಿದ್ದಾರೆ. ದೆಹಲಿಯಲ್ಲಿ ಈ ಕಾರಿನ ಎಕ್ಸ್ ಶೋರೂಮಿನ ಬೆಲೆ 5.88 ಲಕ್ಷದಿಂದ ಆರಂಭವಾಗಿ ಟಾಪ್ ಎಂಡ್ ಮಾದರಿಯ ಕಾರು 10.56 ಲಕ್ಷವನ್ನೊಂದಿರುತ್ತದೆ. ಇದೇ ನಿಸ್ಸಾನ್ ಕಂಪನಿಯು ಇತ್ತೀಚೆಗೆ 7,86,500 ಮೌಲ್ಯದ ಸ್ಪೆಷಲ್ ಎಡಿಶನ್ ಕಾರೊಂದನ್ನ ಮಾರುಕಟ್ಟೆಗೆ ಪರಿಚಯಿಸಲಾಯಿತು. ಈ ಹೊಸ ಎಡಿಶನ್ ನಲ್ಲಿ ಮೂರು ವಿವಿಧ ರೀತಿಯ ವೇರಿಯೇಂಟ್ ಗಳನ್ನ ಹೊಂದಿದ್ದವು. ಅದರಂತೆ ವಿವಿಧ ಬೆಲೆಗಳನ್ನ ಹೊಂದಿದ್ದಾವೆ ಈ ಕಾರುಗಳು. ಇನ್ನು ಈ ನಿಸ್ಸಾನ್ ಇಂಡಿಯಾ ಮ್ಯಾಗ್ನೈಟ್ ಕಾರಿನ ವಿಶೇಷತೆಗಳನ್ನ ಗಮನಿಸುವುದಾದರೆ 1.0 ಲೀಟರಿನ ಬಿಫೋರ್ ಡಿ ಪೆಟ್ರೋಲ್ ಇಂಜಿನ್ ಮತ್ತು ಹೆಚ್ ಆರ್ಎಓ 1.0 ಲೀಟರಿನ ಟರ್ಬೋ ಪೆಟ್ರೋಲ್ ಮಾದರಿಗಳನ್ನ ಹೊಂದಿದೆ.

5ಸ್ಪೀಡ್ ಮ್ಯಾನ್ಯುವಲ್ ಅಥವಾ ಫೈವ್ ಸ್ಪೀಡ್ ಟ್ರಾನಿಕ್ ಆಟೋಮ್ಯಾಟಿಕ್ ಗೇರ್ ಬಾಕ್ಸ್ ನೊಟ್ಟಿಗೆ 100 ಬಿಎಚ್ಪಿ. ಪವರ್ ಮತ್ತು 160 ಎನ್.ಎಮ್ ಟಾರ್ಕ್ ಅನ್ನು ಉತ್ಪಾದನೆ ಮಾಡುತ್ತದೆ. ಇನ್ನು ಇನ್ನಿತರೆ ಸುರಕ್ಷತೆ ವಿಚಾರದಲ್ಲಿ ಐಸೋಫಿಕ್ಸ್ ಸೀಟ್, ಸೆಂಟರ್ ಡೋರ್ ಲಾಕಿಂಗ್, ಸ್ಪೀಡ್ ಸೆನ್ಸಿಂಗ್, ಇಂಪ್ಯಾಕ್ಟ್ ಸೆನ್ಸಿಂಗ್, ಹಿಲ್ ಸ್ಟಾರ್ಟ್ ಅಸಿಸ್ಟ್, ರಿಮೋಟ್ ಕೀ ಲೆಸ್ ಎಂಟ್ರಿ ಸೌಲಭ್ಯಗಳಿವೆ. ಅದರೊಟ್ಟಿಗೆ ಡ್ಯುಯಲ್ ಫ್ರಂಟ್ ಏರ್ ಬ್ಯಾಗ್, ಎಬಿಎಸ್ ಜೊತೆ ಎಬಿಡಿ, ಆಂಟಿ ರೊಲ್ ಬಾರ್, ಸೀಟ್ ಬೆಲ್ಟ್ ಒಳಗೊಂಡಿದೆ. ಈ ಕಾರು ಭಾರತದಲ್ಲಿ ಮಾತ್ರ ಅಲ್ಲದೆ ಹೊರ ದೇಶದಲ್ಲಿಯು ಕೂಡ ಭಾರಿ ಬೇಡಿಕೆಯನ್ನ ಹೊಂದಿದೆ. ಎನ್ಸಿಎಪಿ ಕ್ರ್ಯಾಶ್ ಟೆಸ್ಟಿಂಗ್ ನಲ್ಲಿ ಉತ್ತಮ ಸೇಫ್ಟಿ ರೇಟಿಂಗ್ಸ್ ಹೊಂದಿರುವ ನಿಸ್ಸಾನ್ ಇಂಡಿಯಾ ಮ್ಯಾಗ್ನೈಟ್ ಕಾರು ಜುಲೈ ತಿಂಗಳಿನಲ್ಲಿ ಬರೋಬ್ಬರಿ 8,012 ಯುನಿಟ್ ಮಾರಾಟವಾಗಿದ್ದು, ನಿಸ್ಸಾನ್ ಇಂಡಿಯಾ ಕಾರು ತನ್ನ ವಹಿವಾಟಿನಲ್ಲಿ ಶೇಕಡಾ 2ರಷ್ಟು ಹೆಚ್ಚಳ ಕಂಡಿದೆ ಎಂದು ಕಂಪನಿ ತಿಳಿಸಿದೆ.

Leave a Reply

%d bloggers like this: