ಆಗಸ್ಟ್ ತಿಂಗಳಲ್ಲಿ ಹಲವಾರು ರಜೆ, ಬ್ಯಾಂಕ್ ಗಳು ಯಾವ ದಿನ ಮುಚ್ಚಿರುತ್ತವೆ ತಿಳಿದುಕೊಳ್ಳಿ

ಆಗಸ್ಟ್ ತಿಂಗಳಿನಲ್ಲಿ ನಿಮ್ಮ ಬ್ಯಾಂಕಿಂಗ್ ವ್ಯವಹಾರಗಳಿಗೆ ಕೊಂಚ ಅಡಚಣೆ ಉಂಟಾಗಬಹುದು‌. ಯಾಕಂದ್ರೆ ಈ ಆಗಸ್ಟ್ ತಿಂಗಳಿನಲ್ಲಿ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ರಜಾದಿನಗಳ ಪ್ರಕಾರ ಬರೋಬ್ಬರಿ 15 ದಿನಗಳಿದ್ದಾವೆ. ಹೌದು ಸಾಮಾನ್ಯವಾಗಿ ಈ ವ್ಯವಹಾರ ವ್ಯಾಪಾರಗಳು ಅತಿ ಹೆಚ್ಚಾಗಿ ಬ್ಯಾಂಕಿಂಗ್ ವ್ಯವಹಾರಗಳ ಮೇಲೆ ಅವಲಂಬಿತವಾಗಿರುತ್ತದೆ. ಸಾಮಾನ್ಯದ ದಿನಗಳಲ್ಲೇ ಈ ಬ್ಯಾಂಕಿಂಗ್ ವ್ಯವಹಾರಗಳು ತುಂಬ ವಿಳಂಬವಾಗುತ್ತೆ ಎಂಬ ಆರೋಪ ಇದ್ದೇ ಇರುತ್ತದೆ. ಇನ್ನು ಈ ಬಾರಿ ಬರೋಬ್ಬರಿ ವಾರಾಂತ್ಯದ ರಜಾ ದಿನಗಳನ್ನು ಹೊರತು ಪಡಿಸಿ ವಿವಿಧ ವಿಶೇಷ ದಿನಗಳನ್ನ ಸೇರಿದಂತೆ ಆಗಸ್ಟ್ ತಿಂಗಳಿನಲ್ಲಿ 15 ದಿನ ಬ್ಯಾಂಕ್ ರಜಾ ಇರಲಿದೆ. ಕ್ರಮವಾಗಿ ರಜಾ ದಿನಗಳನ್ನ ಲೆಕ್ಕಾಚಾರ ಹಾಕುವುದಾದರೆ ಭಾರತೀಯ ರಿಸರ್ವ್ ಬ್ಯಾಂಕ್ ರಜಾ ದಿನಗಳನ್ನು ಮೂರು ವಿಭಾಗಗಳಾಗಿ ವಿಂಗಡಣೆ ಮಾಡಿಕೊಳ್ಳಲಾಗಿದೆ. ಅವುಗಳಲ್ಲಿ ಮೊದಲನೆಯದಾಗಿ ನೆಗೋಷಿಯಬಲ್ ಇನ್ಸ್ಟ್ರುಮೆಂಟ್ ಕಾಯ್ದೆ ರಜಾದಿನಗಳು, ನೆಗೋಷಿಯಬಲ್ ಇನ್ಸ್ಟ್ರುಮೆಂಟ್ಸ್ ಆಕ್ಟ್ ರಜಾ ದಿನಗಳು ಜೊತೆಗೆ ರಿಯಲ್ ಟೆಮ್ ಗ್ರಾಸ್ ಸೆಟಲ್ಮೆಂಟ್ ಅಂಡ್ ಬ್ಯಾಂಕ್ ಕ್ಲೋಸ್ ರಜಾದಿನಗಳು ಎಂದು ವಿಂಗಡಿಸಿಕೊಂಡಿದ್ದಾರೆ.

ಆಗಸ್ಟ್1 ಡ್ರುಕ್ಪಾ ತ್ಸೆಜೆ ಆದರೆ ಆಗಸ್ಟ್ 7 ಭಾನುವಾರ, ಆಗಸ್ಟ್ 8 ಮೊಹರಂ ಇದು ಜಮ್ಮು ಮತ್ತು ಕಾಶ್ಮೀರದಲ್ಲಿ ಮಾತ್ರ ಆಗಸ್ಟ್ 9ರಂದು ಮೊಹರಂ ದಿನವಾಗಿ ಬೆಂಗಳೂರು ಸೇರಿದಂತೆ ಒಂದಷ್ಪು ಪ್ರತಿಷ್ಟಿತ ನಗರಗಳಲ್ಲಿ ಬ್ಯಾಂಕ್ ರಜಾ ಇರಲಿದೆ. ಆಗಸ್ಟ್ 11 ಮತ್ತು 12ಕಾನ್ಪುರ ಮತ್ತು ಲಕ್ನೋದಲ್ಲಿ ಸೇರಿದಂತೆ ರಕ್ಷಾ ಬಂಧನದ ಹಿನ್ನೆಲೆಯಲ್ಲಿ ಜೈಪುರ, ಭೋಪಾಲ್, ಅಹ್ಮದಾಬಾದ್ ನ ಬ್ಯಾಂಕ್ ಹಾಲಿ ಡೇ. ಆಗಸ್ಟ್ 13 ದೇಶಭಕ್ತರ ದಿನವಾಗಿದ್ದು ಅಂದು ಕೂಡ ಬ್ಯಾಂಕ್ ಹಾಲಿ ಡೇ ಇರಲಿದೆ. ಆಗಸ್ಟ್ 15 ದೇಶಾದ್ಯಂತ ಸ್ವಾತಂತ್ಯ್ರ ದಿನಾಚರಣೆ ಹಿನ್ನೆಲೆಯಲ್ಲಿ ಸಾಮಾನ್ಯವಾಗಿ ಬ್ಯಾಂಕ್ ರಜಾ ದಿನವಾಗಿರುತ್ತದೆ. ಆಗಸ್ಟ್ 31ರಂದು ಸಂವತ್ಸರಿ ಗಣೇಶ ಚತುರ್ಥಿ ಹಬ್ಬದ ಪ್ರಯುಕ್ತ ಬ್ಯಾಂಕ್ ವ್ಯವಹಾರಗಳು ಇರುವುದಿಲ್ಲ. ಹೀಗೆ ಆಗಸ್ಟ್ ತಿಂಗಳಿನಲ್ಲಿ ವಾರಾಂತ್ಯದ ದಿನಗಳನ್ನು ಸೇರಿದಂತೆ ಬರೋಬ್ಬರಿ 18 ದಿನಗಳು ರಜಾ ದಿನಗಳಾಗಿದ್ದು ನಿಮ್ಮ ಬ್ಯಾಂಕಿಂಗ್ ವ್ಯವಹಾರಗಳ ಬಗ್ಗೆ ಆದಷ್ಟು ಪರ್ಯಾಯ ದಾರಿಗಳನ್ನ ಕಂಡುಕೊಂಡಿದ್ದರೆ ನಿಮ್ಮ ಹಣಕಾಸಿನ ಕೆಲಸ ಕಾರ್ಯಗಳಿಗೆ ತೊಂದರೆ ಆಗುವುದನ್ನ ತಪ್ಪಿಸಿಕೊಳ್ಳಬಹುದು.

Leave a Reply

%d bloggers like this: