ಅತ್ತ ತಮ್ಮ ಬಹು ವರ್ಷಗಳ ಧಾರಾವಾಹಿ ಅಂತ್ಯವಾಗುತ್ತಿದ್ದಂತೆ ಇತ್ತ ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟ ಕಾವ್ಯಾಶ್ರೀ ಅವರು

ದೊಡ್ಮನೆಗೆ ಹೆಜ್ಜೆ ಇಟ್ಟ ಮಂಗಳಗೌರಿ ಮದುವೆ ಧಾರಾವಾಹಿಯ ಈ ನಟಿ ಮೊದಲನೇ ದಿನವೇ ಸಖತ್ ಆಕ್ಟೀವ್ ಆಗಿದ್ದಾರೆ. ಬಿಗ್ ಬಾಸ್ ಒಂಭತ್ತನೇ ಆವೃತ್ತಿ ಆರಂಭಗೊಂಡಿದೆ. ಕಿಚ್ಚನ ನಿರೂಪಣೆಯಲ್ಲಿ ಎಂದಿನ ಆವೃತ್ತಿಗಳಂತೆ ಬಿಗ್ ಬಾಸ್ ಒಂಭತ್ತನೇ ಆವೃತ್ತಿ ಕೂಡಾ ಮುಂದುವರೆದಿದೆ.ಇನ್ನು ಬಿಗ್ ಬಾಸ್ ಮನೆ ಅಂದ್ಮೇಲೆ ಅಲ್ಲಿ ಮಸ್ತ್ ಮನರಂಜನೆ ಅಂತೂ ಇದ್ದೇ ಇರುತ್ತೆ. ಅದು ದೊಡ್ಮನೆಯೊಳಗೆ ಎಂಟ್ರಿ ಕೊಟ್ಟಿಯೋ ಸ್ಪರ್ಧಿಗಳ ಮೇಲೆ ಅವಲಂಬನೆ ಆಗಿರುತ್ತೆ. ಅವರ ಹಾಸ್ಯ ಮನೋಭಾವ, ಜ್ಞಾನ, ವ್ಯಕ್ತಿತ್ವ ಗುಣ ವೀಕ್ಷಕರನ್ನ ರಂಜಿಸಿ ಅವರ ಬಗ್ಗೆ ಸಕರಾತ್ಮಕ ಅಥವಾ ನಕರಾತ್ಮಕ ಭಾವನೆಯನ್ನ ಉಂಟು ಮಾಡ್ತವೆ. ಇನ್ನು ಈ ಬಿಗ್ ಬಾಸ್ 9ನೇ ಸೀಸನ್ ಗೆ 17ನೇ ಸ್ಪರ್ಧಿಯಾಗಿ ಎಂಟ್ರಿ ಕೊಟ್ಟಿರೋ ವ್ಯಕ್ತಿ ಅಂದ್ರೆ ಅದು ನಟಿ ಕಾವ್ಯ ಶ್ರೀ ಗೌಡ.

ನಟಿ ಕಾವ್ಯ ಶ್ರೀ ಗೌಡ ಯಾರು ಅಂತ ಮಂಗಳಗೌರಿ ಸೀರಿಯಲ್ ನೋಡೋರ್ಗೇ ಗೊತ್ತೇ ಇರುತ್ತೆ. ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರೋ ಜನ ಮಚ್ಚುಗೆಯ ಧಾರಾವಾಹಿಗಳಲ್ಲಿ ಮಂಗಳಗೌರಿ ಧಾರಾವಾಹಿ ಕೂಡಾ ಒಂದು. ಮಂಗಳಗೌರಿ ಧಾರಾವಾಹಿ ಪುಟ್ಟಗೌರಿ ಮದುವೆ ಧಾರಾವಾಹಿ ಮುಂದುವರಿದ ಸರಣಿ ಆಗಿದ್ದು, ಇದುವರೆಗೆ ಈ ಧಾರಾವಾಹಿ ಬರೋಬ್ಬರಿ ಮೂರು ಸಾವಿರಕ್ಕೂ ಅಧಿಕ ಸಂಚಿಕೆಗಳನ್ನ ಯಶಸ್ವಿಯಾಗಿ ಪೂರೈಸಿ ಸಾಗುತ್ತಿದೆ. ಈ ಧಾರಾವಾಹಿ ಅಂತೆಯೇ ಪ್ರಸಿದ್ದತೆ ಪಡೆದಿರೋದು ಧಾರಾವಾಹಿಯ ಕಲಾವಿದರು. ಮಂಗಳಗೌರಿ ಧಾರಾವಾಹಿಯಲ್ಲಿ ಮಂಗಳಗೌರಿ ಪಾತ್ರದ ಮೂಲಕ ನಟಿ ಕಾವ್ಯಶ್ರೀ ನಾಡಿನ ಮನೆ ಮನಗಳಲ್ಲಿ ಅಪಾರ ಹೆಸರು ಮಾಡಿದ್ದಾರೆ.

ಮಂಗಳಗೌರಿ ಪಾತ್ರ ನಟಿ ಕಾವ್ಯ ಶ್ರೀ ಅವರಿಗೆ ಒಂದೊಳ್ಳೆ ಫೇಮ್ ನೀಡಿದೆ. ಈ ಫೇಮ್ ನಿಂದನೇ ಈಗ ಕಾವ್ಯ ಶ್ರೀ ಬಿಗ್ ಬಾಸ್ ಮನೆಗೆ ಹೋಗೋದಕ್ಕೆ ಸಾಧ್ಯವಾಗಿದೆ. ಧಾರಾವಾಹಿಯಲ್ಲಿ ಮಂಗಳಗೌರಿ ಪಾತ್ರದ ಮೂಲಕ ಇಷ್ಟವಾಗಿದ್ದ ಕಾವ್ಯ ಶ್ರೀ ಗೌಡ ಇದೀಗ ಬಿಗ್ ಬಾಸ್ ಮನೇಲಿ ವೀಕ್ಷಕರಿಗೆ ಯಾವ ರೀತಿ ಮೋಡಿ ಮಾಡಲಿದ್ದಾರೆ ಅನ್ನೋದು ಕುತೂಹಲ ಇದ್ದೇ ಇದೆ. ಸಾಮಾನ್ಯವಾಗಿ ಸೀರಿಯಲ್ ಗಳ ಮೂಲಕ ಜನಪ್ರಿಯತೆ ಪಡೆ ದಿದ್ದ ಅದೆಷ್ಟೋ ಕಲಾವಿದರು ದೊಡ್ಮನೆಯೊಳಗೆ ತಮ್ಮ ನಿಜವಾದ ವ್ಯಕ್ತಿತ್ವ ಅನಾವರಣ ಆದ ನಂತರ ವೀಕ್ಷಕರಲ್ಲಿ ಬೇರೆಯದ್ದೇ ಭಾವನೆ ಮೂಡಿಸ್ತಾರೆ. ಆ ವಿಚಾರದಲ್ಲಿ ನಟಿ ಕಾವ್ಯ ಶ್ರೀ ಗೌಡ ಅವರು ಹೇಗಿರ್ತಾರೆ ಅನ್ನೋದನ್ನ ಮುಂದಿನ ದಿನಗಳಲ್ಲಿ ನೋಡ್ಬೋದು.