ಅತಿ ದುಬಾರಿ ಖಾಸಗಿ ವಿಮಾನ ಹೊಂದಿರುವ ಏಕೈಕ ಮಹಿಳೆ ಈಕೆ! ನೋಡಿ ಒಮ್ಮೆ

ಅಂಬಾನಿ ಯಾರಿಗೆ ಗೊತ್ತಿಲ್ಲ.ವಿಶ್ವದ ಅತಿ ಶ್ರೀಮಂತರಲ್ಲಿ ಮುಕೇಶ್ ಅಂಬಾನಿ ಒಬ್ಬ.ಮುಕೇಶ್ ಅಂಬಾನಿ ಪತ್ನಿ ನೀತಾ ಅಂಬಾನಿ ಈಗ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ.ಏಷ್ಯಾದ ಅತಿ ದೊಡ್ಡ ಉದ್ಯಮಿ ಮುಕೇಶ್ ಅಂಬಾನಿ ಅವರ ಪತ್ನಿ ಅನ್ನುವ ಗುರುತಲ್ಲದೇ ತನ್ನದೇ ಆದ ಗುರುತು ಈಕೆಗಿದೆ.ಏಷ್ಯಾದ ಅತ್ಯಂತ ಪ್ರತಿಭಾಶಾಲಿ ಮಹಿಳೆಯರಲ್ಲಿ ಒಬ್ಬರು ನೀತಾ ಅಂಬಾನಿ.ಸಾಮಾಜಿಕ ಜಾಲತಾಣದಲ್ಲಿ ಅನೇಕ ಲಕ್ಷ ಹಿಂಬಾಲಕರನ್ನು ಹೊಂದಿರೋದು ಇವರ ಜನಪ್ರಿಯತೆಗೆ ಸಾಕ್ಷಿ.ರಿಲಯನ್ಸ್ ಗ್ರೂಪ್ ಮಾಲೀಕ ಮುಕೇಶ್ ಅಂಬಾನಿ ಈಗ ಏಷ್ಯಾದ ಅತಿದೊಡ್ಡ ಶ್ರೀಮಂತ‌‌.ಸುಮಾರು 6 ಲಕ್ಷ ಕೋಟಿ ಸಂಪತ್ತಿಗೆ ಒಡೆಯ.ಇಂಥವರ ಪತ್ನಿಯಾಗಿ ತಮಗೇನು ಕಡಿಮೆ.ಆದರೂ ಈಕೆ ಸುಮ್ಮನಿರಲ್ಲ ಯಾವುದಾದರೂ ಚಟುವಟಿಕೆಗಳನ್ನು ಮಾಡ್ತಿರುತ್ತಾರೆ.ತಮ್ಮದೇ ಆದ ಐಷಾರಾಮಿ ಅಭಿರುಚಿ ಹೊಂದಿದ್ದಾರೆ.

ಅದಕ್ಕೆ ಸಾಕ್ಷಿ ನೀತಾ ಹೊಂದಿರುವ ಅದ್ಧೂರಿ ಪ್ರೈವೇಟ್ ಜೆಟ್.ಹೆಚ್ಚಾಗಿ 8 ಕೋಟೆ ಬೆಲೆಯ ಬಿ.ಎಂ.ಡಬ್ಲ್ಯೂ ಕಾರಿನಲ್ಲಿ ಸಂಚರಿಸುವ ನೀತಾರವರು ದೂರ ಪ್ರಯಾಣ ಹಾಗೂ ವಿದೇಶ ಪ್ರಯಾಣಕ್ಕಾಗಿ ತಮ್ಮದೇ ಆದ ಪ್ರೈವೇಟ್ ಜೆಟ್ ಹೊಂದಿದ್ದಾರೆ.ಇದನ್ನು ಮುಕೇಶ್ ಅಂಬಾನಿ ಪತ್ನಿಯ ಜನ್ಮದಿನದಂದು ಉಡುಗೊರೆಯಾಗಿ ಕೊಟ್ಟಿದ್ದಾರೆ.ಈ ಖಾಸಗಿ ವಿಮಾನ ಯಾವುದೇ ಫೈವ್ ಸ್ಟಾರ್ ಹೊಟೆಲಿಗೂ ಕಮ್ಮಿ ಇಲ್ಲ.ಇದು 2007 ರಲ್ಲಿ ಖರೀದಿಸಿದ ಜೆಟ್.ಆಗಲೇ ಇದರ ಬೆಲೆ ಬರೋಬ್ಬರಿ 230 ಕೋಟಿ.ಇದರಲ್ಲಿ ಏನೇನಿದೆ ನೋಡಿ.

ಈ ವಿಮಾನದಲ್ಲಿ ಹತ್ತರಿಂದ ಹನ್ನೆರಡು ಮಂದಿ ಆರಾಮಾಗಿ ಪ್ರಯಾಣ ಮಾಡಬಹುದು. ಇದರಲ್ಲಿ ಒಂದು ಮೀಟಿಂಗ್ ರೂಂ ಇದೆ.ಅಟ್ಯಾಚ್ ಬಾತ್ ರೂಂ ಇರುವ ಮಾಸ್ಟರ್ ಬೆಡ್ ರೂಮ್,ಫೈವ್ ಸ್ಟಾರ್ ಹೊಟೆಲ್ ಮಾದರಿಯ ಡೈನಿಂಗ್ ಹಾಲ್ ಕೂಡ ಇದೆ.ಸ್ಕೈ ಬಾರ್ ಇದೆ,ಗೇಮಿಂಗ್ ಸೌಲಭ್ಯ,ಮ್ಯೂಸಿಕ್ ಸಿಸ್ಟಮ್, ಸ್ಯಾಟಲೈಟ್ ಟಿವಿಗಳು,ವೈರ್ ಲೆಸ್ ಕಮ್ಯುನಿಕೇಷನ್ ಮುಂತಾದ ಪ್ರತಿಯೊಂದು ಅಗತ್ಯ ಪೂರೈಕೆ ಮಾಡುವ ಭಾರೀ ಉಲ್ಲಾಸದಾಯಕ ವಿಮಾನವನ್ನು ಪತ್ನಿಯ ಅಭಿರುಚಿಗೆ ತಕ್ಕಂತೆ ಡಿಸೈನ್ ಮಾಡಿಸಿ ಕೊಟ್ಟವರು ಮುಕೇಶ್ ಅಂಬಾನಿ.

Leave a Reply

%d bloggers like this: