ಅತೀ ಶೀಘ್ರದಲ್ಲೇ ಮದುವೆಯಾಗಲಿರುವ ರಕ್ಷಿತ್ ಶೆಟ್ಟಿ.. ಹುಡುಗಿ ಯಾರು ಗೊತ್ತಾ? ನೋಡಿ ಒಮ್ಮೆ ಸಿಹಿ ಸುದ್ದಿ

ಸ್ಯಾಂಡಲ್ ವುಡ್ ಸಿಂಪಲ್ ಸ್ಟಾರ್ ನಟ ರಕ್ಷಿತ್ ಶೆಟ್ಟಿಗೆ ಈ ವರ್ಷ ಕಂಕಣ ಭಾಗ್ಯ ಕೂಡಿ ಬರಲಿದೆಯಂತೆ. ಹೀಗೆ ಭವಿಷ್ಯ ನುಡಿದ ಆ ವ್ಯಕ್ತಿ ಕನ್ನಡದ ಸ್ಟಾರ್ ನಟ, ನಿರ್ದೇಶಕನ ತಂದೆ ಎಂಬುದು ನಿಜಕ್ಕೂ ಕೂಡ ಅಚ್ಚರಿಯಾಗಿದೆ. ಹೌದು ಇತ್ತೀಚೆಗೆ ಸ್ಯಾಂಡಲ್ ವುಡ್ ಸೇರಿದಂತೆ ಭಾರತೀಯ ಚಿತ್ರರಂಗದ ಅನೇಕ ಸ್ಟಾರ್ಸ್ಸ್ ದಾಂಪತ್ಯ ಜೀವನಕ್ಕೆ ಹೆಜ್ಜೆ ಇಟ್ಟಿದ್ದಾರೆ. ಆದರೆ ಕೆಲವು ನಟ-ನಟಿಯರಿಗೆ ಮದುವೆಯ ವಯಸ್ಸು ಮೀರುತ್ತಿದ್ದರು ಅವರು ಮಾತ್ರ ಮದುವೆಯ ವಿಚಾರದ ಬಗ್ಗೆ ತುಟಿ ಬಿಚ್ಚುತ್ತಿಲ್ಲ. ಅದೇ ರೀತಿಯಾಗಿ ತುಘಲಕ್ ಚಿತ್ರದ ಮೂಲಕ ಚಂದವನಕ್ಕೆ ಹೆಜ್ಜೆ ಸಿಂಪಲ್ಲಾಗ್ ಒಂದ್ ಲವ್ ಸ್ಟೋರಿ ಚಿತ್ರದ ಮೂಲಕ ಸ್ಯಾಂಡಲ್ ವುಡ್ ನಲ್ಲಿ ಯಶಸ್ಸಿನ ನಗೆ ಬೀರಿ, ಉಳಿದವರು ಕಂಡಂತೆ ಎಂಬ ವಿಭಿನ್ನ ಶೈಲಿಯ ಚಿತ್ರ ನಿರ್ದೇಶನ ಮಾಡಿ ಕನ್ನಡದ ಹಾಲಿವುಡ್ ಶೈಲಿ ನಿರ್ದೇಶಕ ಅಂತಾನೇ ಕರೆಸಿಕೊಂಡ ರಕ್ಷಿತ್ ಶೆಟ್ಟಿ.

ತದ ನಂತರ ಕಿರಿಕ್ ಪಾರ್ಟಿ ಅಂತ ಬ್ಲಾಕ್ ಬಸ್ಟರ್ ಸಿನಿಮಾ ಮೂಲಕ ಕನ್ನಡ ಚಿತ್ರರಂಗದ ಬೇಡಿಕೆಯ ನಟರಾಗಿ, ನಿರ್ದೇಶಕರಾಗಿ ಗುರುತಿಸಿಕೊಂಡ ನಟ ರಕ್ಷಿತ್ ಶೆಟ್ಟಿ. ರಕ್ಷಿತ್ ಶೆಟ್ಟಿ ಅವರು ಇದೀಗ ದಾಂಪತ್ಯ ಜೀವನಕ್ಕೆ ಪ್ರವೇಶ ಮಾಡುತ್ತಿದ್ದಾರಾ ಎಂಬ ಗೊಂದಲ ಮೂಡಿಸಿದ್ದಾರೆ. ಇದಕ್ಕೆ ಪ್ರಮುಖ ಕಾರಣ ಕೂಡ ಇದೆ. ಅದೇನಪ್ಪಾ ಅಂದರೆ ನಟ ರಕ್ಷಿತ್ ಶೆಟ್ಟಿ ಅವರು ಸೋಶಿಯಲ್ ಮೀಡಿಯಾದಲ್ಲಿ ಸಖತ್ ಆಕ್ಟಿವ್ ಆಗಿಯೇ ಇದ್ದಾರೆ. ಅದರ ಜೊತೆಗೆ ತಮ್ಮ ಸಿನಿಮಾಗಳ ಕೆಲಸಗಳ ಬಗ್ಗೆಯೂ ಕೂಡ ಬಿಝಿ಼ಯಾಗಿದ್ದಾರೆ. ಇದರ ನಡುವೆ ನಟ ರಕ್ಷಿತ್ ಶೆಟ್ಟಿ ಅವರು ಸೋಶಿಯಲ್ ಮೀಡಿಯಾದಲ್ಲಿ ಇತ್ತೀಚೆಗೆ ಕವನವೊಂದನ್ನ ರಚಿಸಿ ಎಲ್ಲರ ಗಮನ ಸೆಳೆದಿದ್ದಾರೆ.

ನಟ ರಕ್ಷಿತ್ ಶೆಟ್ಟಿ ಅವರು ಹೆಚ್ಚು ಪುಸ್ತಕಗಳನ್ನು ಓದುತ್ತಾರೆ. ಅದಕ್ಕೆ ಸಾಕ್ಷಿಯಂತೆ ಅವರ ಸಿನಿಮಾ ಕಥಾ ನಿರೂಪಣೆ ನೋಡಿದರೆ ತಿಳಿಯುತ್ತದೆ. ರಕ್ಷಿತ್ ಶೆಟ್ಟಿ ಅವರು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಾಡದಿರಿ ಮಂಗಳವ ಕಥೆ ಇನ್ನು ಮುಗಿದಿಲ್ಲ. ಎದ್ದಾಗ ಹೊಗಳದಿರಿ,ಬಿದ್ದಾಗ ತೆಗಳದಿರಿ,ಆಗು ಹೋಗುಗಳಲಿ ನನ್ನ ಅರಿಯುವ ಯತ್ನ ಮಾಡದಿರಿ ಆಡದಿರಿ ಕಾಡದಿರಿ ಅಂತ್ಯವ ನಾ ಕಂಡಿಲ್ಲ. ಹಾಡದಿರಿ ಮಂಗಳವ ಕಥೆ ಇನ್ನು ಮುಗಿದಿಲ್ಲ ಎಂಬ ಒಂದಷ್ಟು ಒಳಾರ್ಥವನ್ನೊಳಗೊಂಡ ಕವನವೊಂದನ್ನ ರಚಿಸಿದ್ದಾರೆ. ಇದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಅನೇಕ ನೆಟ್ಟಿಗರು ಈ ಕವನಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಅದರಂತೆ ಇತ್ತೀಚೆಗೆ ಗೋಲ್ಡನ್ ಸ್ಟಾರ್ ಗಣೇಶ್ ಅವರ ಸಾರಥ್ಯದಲ್ಲಿ ಮೂಡಿ ಬರುತ್ತಿರುವ ಗೋಲ್ಡನ್ ಗ್ಯಾಂಗ್ ಶೋ ನಲ್ಲಿ ನಟ ರಕ್ಷಿತ್ ಶೆಟ್ಟಿ ಅವರ ಗೆಳೆಯರ ತಂಡ ಭಾಗವಹಿಸಿದೆ. ಇಲ್ಲಿ ರಕ್ಷಿತ್ ಶೆಟ್ಟಿ, ರಿಷಭ್ ಶೆಟ್ಟಿ, ರಾಜ್ ಬಿ.ಶೆಟ್ಟಿ, ಪ್ರಮೋದ್ ಶೆಟ್ಟಿ. ಶೀತಲ್ ಶೆಟ್ಟಿ ಸೇರಿದಂತೆ ಅವರ ಕುಟುಂಬ ವರ್ಗದವರು ಭಾಗವಹಿಸಿರುತ್ತಾರೆ. ಈ ಶೋನಲ್ಲಿ ಸಾಂಸಾರಿಕ ಜೀವನದ ಬಗ್ಗೆ ಒಂದಷ್ಟು ಮಾತು ಕತೆಗಳು ನಡೆದಿವೆ ಅದರಲ್ಲಿ ರಕ್ಷಿತ್ ಶೆಟ್ಟಿ ಅವರ ಮದುವೆಯ ಬಗ್ಗೆ ಪ್ರಸ್ತಾಪವಾಗಿದೆ. ಆ ಸಂಧರ್ಭದಲ್ಲಿ ರಿಷಬ್ ಶೆಟ್ಟಿ ಅವರ ತಂದೆ ಜ್ಯೋತಿಷ್ಯದ ಬಗ್ಗೆ ಅರಿವನ್ನೊಂದಿದ್ದು ರಕ್ಷಿತ್ ಶೆಟ್ಟಿ ಅವರಿಗೆ ಈ ವರ್ಷ ಕಂಕಣ ಭಾಗ್ಯ ಕೂಡಿ ಬರಲದೆಯಂತೆ ಎಂದು ತಿಳಿಸಿದ್ದಾರಂತೆ.

ಈ ವಿಚಾರವನ್ನು ರಕ್ಷಿತ್ ಶೆಟ್ಟಿ ಗೆಳೆಯರು ಶೋ ನಲ್ಲಿ ತಿಳಿಸಿದ್ದಾರೆ. ಇನ್ನು ನಟ, ನಿರ್ದೇಶಕ,ನಿರ್ಮಾಪಕ ರಕ್ಷಿತ್ ಶೆಟ್ಟಿ ಅವರು ಸಪ್ತ ಸಾಗರದಾಚೆ ಎಲ್ಲೋ, 777 ಚಾರ್ಲಿ, ರಿಚರ್ಡ್ ಆಂಟೋನಿ ಅಂತಹ ಸಿನಿಮಾಗಳ ಕೆಲಸದಲ್ಲಿ ತೊಡಗಿಸಿಕೊಂಡಿದ್ದಾರೆ. ಈ ನಮ್ಮ ಲೇಖನ ನಿಮಗೆ ಇಷ್ಟವಾದಲ್ಲಿ ಶೇರ್ ಮಾಡಿ ಮತ್ತು .ಮತ್ತಷ್ಟು ಹೊಸ ಹೊಸ ಸುದ್ದಿಗಳಿಗಾಗಿ ನಮ್ಮ ಪೇಜ್ ನ್ನು ತಪ್ಪದೆ ಲೈಕ್ ಮಾಡಿ.