ಅತೀ ಹೆಚ್ಚು ಜನರಿಗೆ ಬಾಥ್‌ರೂಮ್‌ನಲ್ಲಿ ಹೃದಯಾಘಾತ ಸಂಭವಿಸುತ್ತೆ ಯಾಕೆ ಗೊತ್ತಾ.. ಈಗಲೂ 99% ಜನರಿಗೆ ಗೊತ್ತಿಲ್ಲ

ಮನುಷ್ಯನಿಗೆ ಆರೋಗ್ಯವೇ ಭಾಗ್ಯ. ಆದರೆ ಇಂದು ಆರೋಗ್ಯ ಎಂಬುದು ಕೂಡ ದುಬಾರಿಯಾಗಿ ಬಿಟ್ಟಿದೆ.ಉತ್ತಮ ಆರೋಗ್ಯ ಬೇಕು ಅಂದರೆ ಉತ್ತಮ ಆಹಾರ,ಉತ್ತಮ ವಾತಾವರಣ ಅಗತ್ಯ ಇರುತ್ತದೆ.ಆದರೆ ಉತ್ತಮ ಆಹಾರ,ಪರಿಸರವನ್ನು ಇಂದಿನ ದಿನಗಳಲ್ಲಿ ನಿರೀಕ್ಷೆ ಮಾಡುವುದು ಕನಸೇ ಬಿಡಿ.ಇಂದಿನ ಆಧುನಿಕ ಜೀವನ ಕ್ರಮ,ಆಹಾರ ಶೈಲಿ ಎಲ್ಲವೂ ಕೂಡ ಸಂಪೂರ್ಣವಾಗಿ ಕಲುಷಿತಗೊಂಡಿದೆ.ಇಂದಿನ ಒತ್ತಡದ ಬದುಕು ನಮ್ಮ ಆರೋಗ್ಯದ ಮೇಲೆ ಕಡೆ ಗಂಭೀರ ಪರಿಣಾಮ ಬೀರುತ್ತಿರುವುದು ಸುಳ್ಳಲ್ಲ.ಓಡುತ್ತಿರುವ ಕಾಲಕ್ಕೆ ತಕ್ಕ ಹಾಗೇ ಮನುಷ್ಯ ಓಡುತ್ತಿದ್ದಾನೆ.ಅದರ ಜೊತೆಗೆ ಅವನ ಆರೋಗ್ಯ ಆಯಸ್ಸು ಕೂಡ ಅಷ್ಟೇ ಬೇಗನೇ ಓಡುತ್ತಿದೆ.ಆದರೆ ಯುವ ಪೀಳಿಗೆ ತಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕಾಗಿದೆ. ಜೊತೆಗೆ ಆಹಾರದ ಶೈಲಿ ಕ್ರಮವನ್ನ ಕೂಡ ಬದಲಾವಣೆ ಮಾಡಿಕೊಳ್ಳಬೇಕಾಗಿದೆ.

ಇಲ್ಲವಾದಲ್ಲಿ ಸಂಪಾದಿಸಿದ ಹಣವನ್ನೆಲ್ಲಾ ಆಸ್ಪತ್ರೆಗೆ ಸುರಿಯುವುದಕ್ಕೆ ಸಿದ್ದರಾಗಬೇಕಾಗುತ್ತದೆ. ವಯಸ್ಸಾದವರಿಗೆ ವಯೋಸಹಜ ಕಾಯಿಲೆಗಳು ಸಹಜ.ಆದರೆ ಇಂದು ಬಹುತೇಕ ಯುವಕರಿಗೆ ಹೃದಯಾಘಾತ ಆಗಿ ಸಾವನ್ನಪ್ಪುತ್ತಿರುವುದು ನಿಜಕ್ಕೂ ಕೂಡ ಆತಂಕಕಾರಿ ವಿಚಾರಗಳಾಗಿವೆ.ಇತ್ತೀಚೆಗಷ್ಟೇ ದಷ್ಟ ಪುಷ್ಟವಾಗಿದ್ದ ಯುವಕನೋರ್ವ ಹೃದಯಾಘಾತವಾಗಿ ಸಾವನ್ನಪ್ಪಿದ ಸುದ್ದಿ ಈಗಾಗಲೇ ಭಾರಿ ಸುದ್ದಿಯಾಗಿದೆ.ಹಾಗಾಗಿಯೇ ಆರೋಗ್ಯವೇ ಭಾಗ್ಯ ಎಂದು ಹೇಳುವುದು. ಹೀಗೆ ಹೃದ್ರೋಗ ಸಮಸ್ಯೆ ಇರೋರು ಮನೆಯಲ್ಲಿ ಕೆಲವೊಂದಷ್ಟು ಮುಂಜಾಗೃತ ಕ್ರಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಲೇಬೇಕಾಗುತ್ತದೆ. ಹೃದಯದ ಸಮಸ್ಯೆ ಇರುವವರು ಸ್ನಾನ ಮಾಡುವಾಗ ಯಾವುದೇ ಕಾರಣಕ್ಕೂ ನೇರವಾಗಿ ತಲೆಗೆ ನೀರನ್ನ ಹಾಕಿಕೊಳ್ಳಬಾರದು. ಮೊದಲು ಕಾಲಿಗೆ,ನಂತರ ಭುಜಕ್ಕೆ ನೀರನ್ನ ಹಾಕಿ ತದ ನಂತರ ತಲೆಗೆ ನೀರನ್ನ ಹಾಕಿಕೊಳ್ಳಬೇಕು.

ಇನ್ನು ಕೆಲವು ಹೃದ್ರೋಗ ಸಮಸ್ಯೆ ಇರುವವರು ರಾತ್ರಿಯಲ್ಲಿ ಒಬ್ಬರೇ ಮಲಗಬಾರದು.ಏಕೆಂದರೆ ಹೃದಯಾಘಾತ ಆಗುವುದು ನಡು ರಾತ್ರಿಯಲ್ಲಿ.ಇಂತಹ ಸಮಯದಲ್ಲಿ ಅವರನ್ನ ಒಬ್ಬಂಟಿಯಾಗಿ ಮಲಗುವುದಕ್ಕೆ ಅವಕಾಶ ಕೊಡಬಾರದು. ಒಂದಷ್ಟು ಬಹುತೇಕರಿಗೆ ಹೃದಯಾಘಾತವಾಗಿದೆ ಏಕೆಂದರೆ ಅವರು ಏಕಾಏಕಿ ನೇರವಾಗಿ ನೀರನ್ನು ತಲೆಯ ಮೇಲೆ ಹಾಕುವುದರಿಂದ ಹೃದಯದ ಬಡಿತವು ತಕ್ಷಣ ನಿಲ್ಲುವ ಸಾಧ್ಯತೆ ಹೆಚ್ಚಾಗಿರುತ್ತದೆ.ಹಾಗಾಗಿ ಸ್ನಾನ ಮಾಡುವಾಗ ಮೊದಲು ಕಾಲಿಗೆ ತದನಂತರ ಭುಜಕ್ಕೆ ನೀರನ್ನು ಹಾಕಿಸಿ ತದನಂತರ ತಲೆಬಾಗಿ ನೀರನ್ನು ಹಾಕಬೇಕು ಎಂಬುದು ಒಂದು ಕ್ರಮವಾಗಿದೆ.ಇನ್ನು ಸ್ನಾನ ಮಾಡುವಾಗ ದೀರ್ಘಕಾಲ ಕುಳಿತುಕೊಳ್ಳುವುದು,ಕಾಲು ಮಡಚುಕೊಂಡು ಧೀರ್ಘವಾಗಿ ಕುಳಿತುಕೊಳ್ಳುವುದು ಮಾಡುವುದನ್ನ ಮಾಡಬಾರದು.ಇದು ರಕ್ತ ಪರಿಲನೆಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವುದುಂಟು.

Leave a Reply

%d bloggers like this: